ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 
ದೇಶ

ಕೇಂದ್ರ ಬಜೆಟ್ 2026-27: ಆಯವ್ಯಯ ಮಂಡನೆ ಆರಂಭ; ಚಿದಂಬರಂ ಸಮಕ್ಕೆ ನಿರ್ಮಲಾ ಸೀತಾರಾಮನ್

ಸತತ 9 ಬಾರಿ ಬಜೆಟ್‌ ಮಂಡಿಸಿದ ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಅವರು ಪಾತ್ರರಾಗಿದ್ದು, ಹೆಚ್ಚು ಬಜೆಟ್ ಮಂಡಿಸಿದವರಲ್ಲಿ 2ನೇ ಸ್ಥಾನದಲ್ಲಿರುವ ಚಿದಂಬರಂ ಅವರ ಸಾಲಿಗೆ ಸೇರಿದ್ದಾರೆ.

ನವದೆಹಲಿ: ಸಂಸತ್ತಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‌ ಮಂಡನೆ ಆರಂಭವಾಗಿದ್ದು, ಸತತ 9ನೇ ಬಾರಿಗೆ ಆಯವ್ಯಯ ಮಂಡನೆ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಸತತ 9 ಬಾರಿ ಬಜೆಟ್‌ ಮಂಡಿಸಿದ ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಅವರು ಪಾತ್ರರಾಗಿದ್ದು, ಹೆಚ್ಚು ಬಜೆಟ್ ಮಂಡಿಸಿದವರಲ್ಲಿ 2ನೇ ಸ್ಥಾನದಲ್ಲಿರುವ ಚಿದಂಬರಂ ಅವರ ಸಾಲಿಗೆ ಸೇರಿದ್ದಾರೆ.

ಮೋದಿಯವರ ಎರಡನೇ ಅವಧಿ ಸರ್ಕಾರ ಅಂದರೆ 2019 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾದರು. 2024ರಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಮೋದಿ ಸರ್ಕಾರದಲ್ಲಿ ಅವರು ಹಣಕಾಸು ಖಾತೆಯನ್ನು ಉಳಿಸಿಕೊಂಡರು.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಒಟ್ಟು 10 ಬಾರಿ ಬಜೆಟ್ ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದಾಗ, 1959ರಿಂದ 1964ರವರೆಗೆ ಸತತ ಆರು ಬಾರಿ ಮತ್ತು 1967ರಿಂದ 1969ರ ಅವಧಿಯಲ್ಲಿ ನಾಲ್ಕು ಬಾರಿ ಬಜೆಟ್ ಮಂಡಿಸಿದ್ದರು.

ಇವರ ನಂತರದ ಸ್ಥಾನದಲ್ಲಿ ಪಿ.ಚಿದಂಬರಂಅವರು ನಿಲ್ಲುತ್ತಾರೆ. ಹಾಲಿ ಹಣಕಾಸು ಸಚಿವೆಯಾಗಿರುವ ನಿರ್ಮಮಲಾಅವರು 2026-27ರ ಬಜೆಟ್ ಮಂಡಿಸುವ ಮೂಲಕ ಅವರನ್ನು ಸರಿಗಟ್ಟಿದ್ದಾರೆ.

1991ರಲ್ಲಿ ಮನಮೋಹನ್ ಸಿಂಗ್ 18650 ಪದಗಳಿದ್ದ ಬಜೆಟ್ ಮಂಡಿಸಿದ್ದರೆ, 1977ರಲ್ಲಿ ಸಚಿವ ಹೀರು ಭಾಯ್ ಮಂಡಿಸಿದ್ದ ಬಜೆಟ್ ನಲ್ಲಿ ಕೇವಲ 800 ಪದಗಳಿದ್ದವು. ಇವುಗಳನ್ನು ಕ್ರಮವಾಗಿ ಈ ವರೆಗಿನ ಅತೀ ಹೆಚ್ಚು ಹಾಗೂ ಕಡಿಮೆ ಪದಗಳುಳ್ಳ ಬಜೆಟ್ ಎಂದು ಪರಿಗಣಿಸಲಾಗಿದೆ. 2020ರಲ್ಲಿ ಅತಿ ಸುದೀರ್ಘ ಬಜೆಟ್ (2 ಗಂಟೆ 42 ನಿಮಿಷ) ಬಜೆಟ್ ಮಂಡಿಸಿದ್ದು ನಿರ್ಮಲಾ ಸೀತಾರಾಮನ್ ಅವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಡಿನೆಲ್ಲೆಡೆ ಯುಗಾದಿ ಸಂಭ್ರಮ-ಪೂಜೆ, ಹಬ್ಬದೂಟ ತಯಾರಿಯಲ್ಲಿ ಜನತೆ, ವ್ಯಾಪಾರ ಭರಾಟೆ ಜೋರು

ಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!

ರಾಜ್ಯಾದ್ಯಂತ ಮಳೆ ಆರ್ಭಟ: ಬೆಂಗಳೂರು ಹೈರಾಣ, ಇನ್ನೂ 3 ದಿನ ಮಳೆ ಸಾಧ್ಯತೆ!

'ಭಾರತ ಆಪ್ತ ಸ್ನೆಹಿತ', 'ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ': ಆಫ್ಘನ್ ಕ್ರಿಕೆಟಿಗ Allah Ghazanfar ಎಚ್ಚರಿಕೆ

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

SCROLL FOR NEXT