ಬಸ್ ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬಾಲಕಿ 
ದೇಶ

ಜಸ್ಟ್ ಮಿಸ್, ಮಗು ಬಚಾವ್: ಚಾಲಕನ ಸಮಯ ಪ್ರಜ್ಞೆಗೆ ಹ್ಯಾಟ್ಸಾಫ್! Video

ಕೇರಳದ ಕೋಝಿಕ್ಕೋಡ್ ಕೊಡಿಯಾತ್ತೂರ್ ನಲ್ಲಿ ಈ ಘಟನೆ ನಡೆದಿದ್ದು, ದಿಢೀರ್ ಅಡ್ಡಬಂದ ಪುಟ್ಟ ಬಾಲಕಿಯನ್ನು ನೋಡಿದ ಬಸ್ ಚಾಲಕ ಕೂಡಲೇ ಬಸ್ ಅನ್ನು ಬೇರೆಡೆ ತಿರುಗಿ ಬಾಲಕಿಯ ಪ್ರಾಣ ಉಳಿಸಿದ್ದಾನೆ.

ಕೋಝಿಕ್ಕೋಡ್: 3 ವರ್ಷದ ಪುಟ್ಟ ಬಾಲಕಿ ರಸ್ತೆ ದಾಟುವಾಗ ಬಸ್ ಸಿಲುಕುತ್ತಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾಲಕಿ ಪ್ರಾಣ ಉಳಿದಿದೆ.

ಕೇರಳದ ಕೋಝಿಕ್ಕೋಡ್ ಕೊಡಿಯಾತ್ತೂರ್ ನಲ್ಲಿ ಈ ಘಟನೆ ನಡೆದಿದ್ದು, ದಿಢೀರ್ ಅಡ್ಡಬಂದ ಪುಟ್ಟ ಬಾಲಕಿಯನ್ನು ನೋಡಿದ ಬಸ್ ಚಾಲಕ ಕೂಡಲೇ ಬಸ್ ಅನ್ನು ಬೇರೆಡೆ ತಿರುಗಿ ಬಾಲಕಿಯ ಪ್ರಾಣ ಉಳಿಸಿದ್ದಾನೆ.

ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಆಗಿದ್ದೇನು?

ಆಸ್ಪತ್ರೆಗೆ ಹೋಗಿ ಮನೆಗೆ ವಾಪಸ್ ಆಗಿದ್ದ ತಾಯಿ ಆಟೋ ಚಾಲಕನಿಗೆ ಹಣ ನೀಡುತ್ತಿದ್ದಾಗ ಅಲ್ಲಿಯೇ ಇದ್ದ 3 ವರ್ಷದ ಮಗು ಕೈ ಬಿಡಿಸಿಕೊಂಡು ಓಡಿತ್ತು. ಪುಟ್ಟ ಬಾಲಕಿ ನೋಡ ನೋಡುತ್ತಲೇ ಪೋಷಕ ಕೈ ಬಿಟ್ಟು ಆಟೋದಿಂದ ಇಳಿದು ವೇಗವಾಗಿ ಓಡುತ್ತಾ ರಸ್ತೆ ಮೇಲೆ ಬಂದಿದ್ದಾಳೆ.

ಈ ವೇಳೆ ಬಾಲಕಿ ರಸ್ತೆದಾಟುತ್ತಿದ್ದಾಗ ಅದೇ ರಸ್ತೆಯಲ್ಲಿ ಪ್ರಯಾಣಿಕ ಬಸ್ ಬಂದಿದೆ. ಈ ವೇಳೆ ಬಸ್ ಚಕ್ರಕ್ಕೆ ಬಾಲಕಿ ಸಿಲುಕುವ ಅಪಾಯವಿತ್ತು. ಆದರೆ ಕೆಳಗೆ ಬಾಲಕಿಯನ್ನುಗಮನಿಸಿದ ಬಸ್ ಚಾಲಕ ಕೂಡಲೇ ಬಸ್ ಅನ್ನು ಬಲಕ್ಕೆ ತಿರುಗಿಸಿದ್ದಾನೆ.

ಇದರಿಂದ ಬಾಲಕಿಯಿಂದ ಬಸ್ ಕೂದಲೆಳೆ ಅಂತರದಲ್ಲಿ ಸಾಗಿದ್ದು ಬಾಲಕಿ ಯಾವುದೇ ರೀತಿಯ ಅಪಾಯವಿಲ್ಲದೇ ಪಾರಾಗಿದ್ದಾಳೆ. ಈ ಘಟನೆ ಅದೇ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಪ್ರಾಣ ಉಳಿಸಿದ ಚಾಲಕನಿಗೆ ಸನ್ಮಾನ

ಇನ್ನು ತನ್ನ ಚಾಕಚಕ್ಯತೆಯಿಂದ ಪುಟ್ಟ ಬಾಲಕಿಯ ಪ್ರಾಣ ಉಳಿಸಿದ ಬಸ್ ಚಾಲಕನಿಗೆ ಎಲ್ಲಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಅಂತೆಯೇ ಬಸ್ ಚಾಲಕ ಶಿನೋಜ್ ಗೆ ಸ್ಥಳೀಯರು ಸನ್ಮಾನ ಮಾಡಿ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!