ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವುದು  
ದೇಶ

‘ಸ್ಸಾರಿ ಅಮ್ಮ-ಅಪ್ಪಾ': ಕೊರಿಯನ್ ಗೇಮ್ಸ್ ಚಟಕ್ಕೆ ಬಿದ್ದು ಡೆತ್ ನೋಟ್ ಬರೆದಿಟ್ಟು ಮೂವರು ಅಪ್ರಾಪ್ತ ಸೋದರಿಯರು ಆತ್ಮಹತ್ಯೆ-Video

ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಚೇತನ್ ಕುಮಾರ್ ಎಂಬುವವರ ಪುತ್ರಿಯರಾದ ನಿಶಿಕಾ (16ವ), ಪ್ರಾಚಿ (14ವ) ಮತ್ತು ಪಖಿ (12ವ) ಎಂಬುವವರು ನೆಲ ಮಹಡಿಗೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದರು.

ಇಂದು ಬುಧವಾರ ಮುಂಜಾನೆ ಗಾಜಿಯಾಬಾದ್‌ನಲ್ಲಿ ಒಂಬತ್ತನೇ ಮಹಡಿಯ ಫ್ಲಾಟ್‌ನ ಬಾಲ್ಕನಿಯಿಂದ ಹಾರಿ ಮೂವರು ಅಪ್ರಾಪ್ತ ಸಹೋದರಿಯರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಟೀಲಾ ಮೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತ್ ಸಿಟಿಯ ಟವರ್‌ನಲ್ಲಿರುವ ಒಂಬತ್ತನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಮೂವರು ಸೋದರಿಯರು ಹಾರಿರುವ ಬಗ್ಗೆ ನಸುಕಿನ ಜಾವ 2.15 ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಶಾಲಿಮಾರ್ ಗಾರ್ಡನ್) ಅತುಲ್ ಕುಮಾರ್ ಸಿಂಗ್ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಚೇತನ್ ಕುಮಾರ್ ಎಂಬುವವರ ಪುತ್ರಿಯರಾದ ನಿಶಿಕಾ (16ವ), ಪ್ರಾಚಿ (14ವ) ಮತ್ತು ಪಖಿ (12ವ) ಎಂಬುವವರು ನೆಲ ಮಹಡಿಗೆ ಬಿದ್ದು ಮಾರಣಾಂತಿಕವಾಗಿ ಗಾಯಗೊಂಡಿದ್ದರು.

ಆಂಬ್ಯುಲೆನ್ಸ್ ಮೂಲಕ ಲೋನಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಪೊಲೀಸರು ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ, ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಸ್ಥಳದಿಂದ ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ, ಅದರಲ್ಲಿ "ಮಮ್ಮಿ, ಅಪ್ಪಾ, ಕ್ಷಮಿಸಿ. ನಾವು ಚಟ ಬಿಡಬೇಕೆಂದು ನೀವು ಹೇಳುತ್ತಿದ್ದ ಆನ್ ಲೈನ್ ಗೇಮನ್ನು ನಾವು ಎಷ್ಟು ಪ್ರೀತಿಸುತ್ತಿದ್ದೆವು ಎಂದು ನಿಮಗೆ ಈಗ ಅರಿವಾಗುತ್ತದೆ ಎಂದು ಬರೆಯಲಾಗಿದೆ.

"ಈಸ್ ಡೈರಿ ಮೇ ಜೋ ಕುಚ್ ಭಿ ಲಿಖಾ ಹೈ ವೋ ಸಬ್ ಪಧ್ ಲೋ ಕುಕಿ ಯೇ ಸಬ್ ಸಚ್ ಹೈ. (ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ ಏಕೆಂದರೆ ಇದು ಸತ್ಯ)'' ಎಂದು ಬರೆದಿದ್ದಾರೆ.

ಆನ್‌ಲೈನ್ ಕೊರಿಯನ್ ಗೇಮ್ಸ್ ವ್ಯಸನಕ್ಕೆ ಸೋದರಿಯರು ಸಿಕ್ಕಿಹಾಕಿಕೊಂಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೊರಿಯನ್ ಆನ್ ಲೈನ್ ಗೇಮ್ಸ್ ಆದ 'ಲವ್ ಗೇಮ್'ಗೆ ವ್ಯಸನಿಯಾಗಿದ್ದರು ಪೋಷಕರು ಅವರ ಅತಿಯಾದ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಶಾಲಿಮಾರ್ ಗಾರ್ಡನ್) ಅತುಲ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸೋದರಿಯರು ಮೊಬೈಲ್ ವ್ಯಸನಿಗಳಾಗಿದ್ದರು

ಪೊಲೀಸರ ಪ್ರಕಾರ, COVID-19 ಅವಧಿಯಲ್ಲಿ ಸಹೋದರಿಯರು ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದರು, ನಂತರ ನಿರಂತರವಾಗಿ ಕೊರಿಯನ್ ಗೇಮ್ಸ್ ನ್ನು ಆಟವಾಡುತ್ತಿದ್ದರು. "ಮೂವರೂ ಸ್ನಾನ ಮಾಡುವುದು, ತಿನ್ನುವುದು ಮತ್ತು ಮಲಗುವುದರಿಂದ ಹಿಡಿದು ಶಾಲೆಗೆ ಹೋಗುವವರೆಗೆ ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು, ಆದರೆ ಇತ್ತೀಚೆಗೆ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ, ಓದುವುದರಲ್ಲಿ ಕೂಡ ಆಸಕ್ತಿ ಕಳೆದುಕೊಂಡಿದ್ದರಂತೆ.

ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿ

ಟೆಲಿ ಮಾನಸ್ ಸಲಹೆಗಾರರು: 14416 (ಅಥವಾ) 1800-89-14416

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸ ವ್ಯಾಪಾರ ಒಪ್ಪಂದ: US ಸರಕುಗಳು ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ, ನಮ್ಮ ರೈತರು ಏನು ಮಾಡ್ಬೇಕು? ಸಂಜಯ್ ರಾವತ್ Video

ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ; ವ್ಯಕ್ತಿಯ ಹತ್ಯೆ: MLA ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು; ಇದೇನಿದು ಹರಿಪ್ರಸಾದ್ ಆರೋಪ?

ದೇಶದ್ರೋಹಿ ಟೀಕೆ: ಸಂಸತ್ ಆವರಣದಲ್ಲಿ ರಾಹುಲ್ ಗಾಂಧಿ, ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ!

ಹಿಂದೂ ಧರ್ಮ, ಹಿಂದೂಗಳು, ಹಿಂದೂಗಳ ಆಚರಣೆಗಳು ಅಂದರೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾಕಿಷ್ಟು ಅಸಡ್ಡೆ? ಯಾಕಿಷ್ಟು ದ್ವೇಷ?

ಆಸ್ಟ್ರೇಲಿಯಾದಲ್ಲಿ ಗಾಂಧಿ ಪ್ರತಿಮೆ ಕಳ್ಳತನ: ಭಾರತದ ಖಂಡನೆ, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

SCROLL FOR NEXT