ಸಾವಿಗೀಡಾದ ಪೊಲೀಸ್ ಪೇದೆ ಬಾಬುಭಾಯಿ ಪ್ರಜಾಪತಿ 
ದೇಶ

ವಿದ್ರಾವಕ: 20 ರೂ ಪ್ರಕರಣ, 30 ವರ್ಷ ಜೈಲು, ನಿರಪರಾಧಿ ಎಂದು ತೀರ್ಪು ಬಂದ ಮಾರನೇ ದಿನವೇ ಸಾವು!

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, 20 ರೂ ಲಂಚ ಸ್ವೀಕಾರ ಮಾಡಿದ್ದ ಆರೋಪದ ಮೇರೆಗೆ 30 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಬಾಬುಭಾಯಿ ಪ್ರಜಾಪತಿ ಎಂಬ ಪೊಲೀಸ್ ಪೇದೆ ಈಗ ನಿರಪರಾಧಿ ಎಂದು ಸಾಬೀತಾಗಿದೆ.

ಗಾಂಧಿನಗರ: ಕೇವಲ 20 ರೂ ಲಂಚ ಸ್ವೀಕಾರ ಮಾಡಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ಪ್ರಕರಣದಲ್ಲಿ ಬರೊಬ್ಬರಿ 30 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಪೊಲೀಸ್ ಪೇದೆ ತಾನು ನಿರಪರಾಧಿ ಎಂದು ತೀರ್ಪು ಬಂದ ಬೆನ್ನಲ್ಲೇ ಸಾವಿಗೀಡಾಗಿರುವ ವಿದ್ರಾವಕ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, 20 ರೂ ಲಂಚ ಸ್ವೀಕಾರ ಮಾಡಿದ್ದ ಆರೋಪದ ಮೇರೆಗೆ 30 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಬಾಬುಭಾಯಿ ಪ್ರಜಾಪತಿ ಎಂಬ ಪೊಲೀಸ್ ಪೇದೆ ಈಗ ನಿರಪರಾಧಿ ಎಂದು ಸಾಬೀತಾಗಿದೆ. ಅದರೆ ದುರಾದೃಷ್ಟ ಎಂದರೆ ತೀರ್ಪು ಬಂದ ಮಾರನೇ ದಿನವೇ ಅವರು ಸಾವಿಗೀಡಾಗಿದ್ದಾರೆ.

ಈ ಪ್ರಕರಣವು 1997 ರಲ್ಲಿ ವೆಜಲ್ಪುರ ಪ್ರದೇಶದ ವಿಶಾಲ ಬಳಿ ನಡೆದಿದ್ದು, ಅಂದು ಪ್ರಜಾಪತಿ ಎಸಿಬಿ ಬಲೆಗೆ ಬಿದ್ದಿದ್ದರು. ಅಲ್ಲಿ ಮೂವರು ಕಾನ್‌ಸ್ಟೆಬಲ್‌ಗಳು ಟ್ರಕ್ ಚಾಲಕರಿಂದ ಲಂಚ ಪಡೆದ ಆರೋಪ ಹೊರಿಸಲ್ಪಟ್ಟಿದ್ದರು.

2004 ರಲ್ಲಿ ಎಲ್ಲರೂ ಶಿಕ್ಷೆಗೊಳಗಾದರು. ಎಲ್ಲರೂ ಮೇಲ್ಮನವಿ ಸಲ್ಲಿಸಿದರು. ಆದರೆ ಬಾಬುಭಾಯ್ ಪ್ರಜಾಪತಿ ನಿರಪರಾಧಿ ಎಂದು ತೀರ್ಪುಬಂದಿತ್ತು.

ಏನಿದು ಘಟನೆ?

ಪೊಲೀಸ್ ಕಾನ್‌ಸ್ಟೆಬಲ್ ಬಾಬುಭಾಯಿ ಪ್ರಜಾಪತಿ ಸೇರಿದಂತೆ ಇತರೆ ಮೂವರು ಪೇದೆಗಳನ್ನು ಅಹಮದಾಬಾದ್‌ನಲ್ಲಿ ನಿಯೋಜಿಸಲಾಗಿತ್ತು. ಆಗ ಅವರು ಟ್ರಕ್ ಚಾಲಕರಿಂದ 20ರೂ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದರಂತೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಿ ಬಂಧಿಸಲಾಗಿತ್ತು.‌

1997 ರಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. 2002 ರಲ್ಲಿ ಆರೋಪಗಳನ್ನು ರೂಪಿಸಲಾಯಿತು. ಸಾಕ್ಷಿಗಳ ವಿಚಾರಣೆ 2003 ರಲ್ಲಿ ಪ್ರಾರಂಭವಾಯಿತು. 2004 ರಲ್ಲಿ ಸೆಷನ್ಸ್ ನ್ಯಾಯಾಲಯವು ಪ್ರಜಾಪತಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 3,000 ರೂ. ದಂಡವನ್ನು ವಿಧಿಸಿತ್ತು.

ಪ್ರಜಾಪತಿ ಗುಜರಾತ್ ಹೈಕೋರ್ಟ್‌ನಲ್ಲಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದರು. ನಂತರ, ಅವರ ಮೇಲ್ಮನವಿ 22 ವರ್ಷಗಳ ಕಾಲ ಬಾಕಿ ಇತ್ತು. ಈ ವರ್ಷ ಫೆಬ್ರವರಿ 4 ರಂದು ಅವರು ನಿರಪರಾಧಿ ಎಂದು ತೀರ್ಪು ಬಂದಿದೆ. ಸಾಕ್ಷಿಗಳ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳಿವೆ.

ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಜಾಪತಿ ಪರ ವಾದ ಮಂಡಿಸಿದ ವಕೀಲ ನಿತಿನ್ ಗಾಂಧಿ, ಇಡೀ ಪ್ರಕರಣವು ಅನುಮಾನದಿಂದ ಕೂಡಿದೆ ಎಂದು ವಾದಿಸಿದ್ದರು.

ನಾನು ತಪ್ಪು ಮಾಡಿಲ್ಲ ಎಂದು ಸಾಬೀತು, ದೇವರು ಕರೆದುಕೊಂಡು ಹೋದರೂ ಚಿಂತೆ ಇಲ್ಲ

ತೀರ್ಪಿನ ನಂತರ, ಪ್ರಜಾಪತಿ ತನ್ನ ವಕೀಲರ ಕಚೇರಿಗೆ ಆರೋಪಿಯಾಗಿ ಅಲ್ಲ, ಬದಲಾಗಿ ಸ್ವತಂತ್ರ ವ್ಯಕ್ತಿಯಾಗಿ ಹೋಗಿದ್ದರು. ಈ ವೇಳೆ ವಕೀಲರು 'ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಸೌಲಭ್ಯಗಳು ಮತ್ತು ಸೇವಾ ಬಾಕಿಗಳಿಗೆ ತಕ್ಷಣ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.

ಈ ವೇಳೆ ಪ್ರಜಾಪತಿ ಶಾಂತವಾಗಿಯೇ ತೀರ್ಪಿನ ಕುರಿತು ಅತೀವ ಹರ್ಷ ವಕ್ತಪಡಿಸಿದ್ದರು. ಅಲ್ಲದೆ 'ಸರ್ ನನ್ನ ಜೀವನದಲ್ಲಿ ನನಗೆ ಅಂಟಿದ್ದ ಕಳಂಕ ಹೋಗಿದೆ. ಈಗ ದೇವರು ನನ್ನನ್ನು ಕರೆದುಕೊಂಡು ಹೋದರೂ ನನಗೆ ಯಾವುದೇ ದುಃಖ ಇಲ್ಲ ಎಂದು ಹೇಳಿದ್ದರು. ಇದು ಅವರ ವಕೀಲರೊಂದಿಗಿನ ಕೊನೆಯ ಸಂಭಾಷಣೆಯಾಗಿತ್ತು ಎನ್ನಲಾಗಿದೆ. ಈ ತೀರ್ಪು ಬಂದ ಮಾರನೇ ದಿನವೇ ಪ್ರಜಾಪತಿ ಸಾವಿಗೀಡಾಗಿದ್ದಾರೆ.

ವಯೋಸಹಜ ಕಾರಣಗಳಿಂದ ಪ್ರಜಾಪತಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾಪತಿ ಕುರಿತು ವಕೀಲ ನಿತಿನ್ ಗಾಂಧಿ ಮಾತು!

'ನಾನು ಅವರನ್ನು ಭೇಟಿಯಾದಾಗ, ಖುಲಾಸೆಯಾದ ನಂತರ ಅವರು ನಿಜವಾಗಿಯೂ ಸಂತೋಷಪಟ್ಟರು. ಬಾಕಿ ಇರುವ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ನಾನು ಅವರಿಗೆ ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ಮರುದಿನ, ನಾನು ಅವರಿಗೆ ದಾಖಲೆಗಳನ್ನು ಹಸ್ತಾಂತರಿಸಲು ಕರೆ ಮಾಡಲು ಪ್ರಯತ್ನಿಸಿದಾಗ, ಅವರು ನಿಧನರಾಗಿದ್ದಾರೆಂದು ನನಗೆ ತಿಳಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ - ಅಮೆರಿಕ ಒಪ್ಪಂದ ನಮ್ಮ ರೈತರ ಹಿತಾಸಕ್ತಿ ರಕ್ಷಿಸುತ್ತದೆ; ರಷ್ಯಾ ತೈಲ ಖರೀದಿ ಬಗ್ಗೆ MEA ಮಾಹಿತಿ: ಗೋಯಲ್

ಕೇರಳ: ಸಿಜೆ ರಾಯ್ ಬೆನ್ನಲ್ಲೇ ಕರ್ನಾಟಕ ಮೂಲದ ಮತ್ತೊಬ್ಬ ಉದ್ಯಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ!

Chhattisgarh: 51 ನಕ್ಸಲರ ಸಾಮೂಹಿಕ ಶರಣಾಗತಿ, 34 ಮಂದಿ ಮಹಿಳೆಯರು!

ಟಿ20 ವಿಶ್ವಕಪ್ 2026: ಟಾಸ್ ಗೆದ್ದ USA ಬೌಲಿಂಗ್ ಆಯ್ಕೆ, ಭಾರತಕ್ಕೆ ಡಬಲ್ ಆಘಾತ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಸೋಮವಾರದಿಂದ ದರ ಏರಿಕೆ ಇಲ್ಲ- ಸಂಸದ ತೇಜಸ್ವಿ ಸೂರ್ಯ ಮಾಹಿತಿ

SCROLL FOR NEXT