ಜಾಯಿಂಟ್ ವ್ಹೀಲ್ ಕುಸಿದಿರುವುದು. 
ದೇಶ

ಸೂರಜ್‌ಕುಂಡ್ ಮೇಳದಲ್ಲಿ ದುರಂತ: Tsunami ಸ್ವಿಂಗ್ ಕುಸಿತ; ರಕ್ಷಿಸಲು ತೆರಳಿದ ಪೊಲೀಸ್ ಇನ್ಸ್‌ಪೆಕ್ಟರ್ ದುರ್ಮರಣ, 13 ಜನರಿಗೆ ಗಾಯ; Video

ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೇಳದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವ್ಹೀಲ್‌ನಲ್ಲಿ ಜನರು ಕುಳಿತು ಖುಷಿಪಡುತ್ತಿದ್ದರು. ಈ ನಡುವೆ ಅದರ ಒಂದು ಭಾಗ ಇದ್ದಕ್ಕಿದ್ದಂತೆ ಮುರಿಯಲಾರಂಭಿಸಿತು.

ಫರಿದಾಬಾದ್ (ಹರಿಯಾಣ): ಪ್ರಸಿದ್ಧ ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ‘ಸುನಾಮಿ (Tsunami) ಸ್ವಿಂಗ್’ (ದೈತ್ಯ ಜಾಯಿಂಟ್ ವ್ಹೀಲ್) ಕುಸಿದು ಬಿದ್ದಿದ್ದು, ಘಟನೆ ವೇಳೆ ಕರ್ತವ್ಯನಿರತ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬರು ಸಾವನ್ನಪ್ಪಿ 13ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಆಘಾತಕಾರಿ ಘಟನೆ ಶನಿವಾರ ಸಂಜೆ ನಡೆದಿದೆ.

ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೇಳದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವ್ಹೀಲ್‌ನಲ್ಲಿ ಜನರು ಕುಳಿತು ಖುಷಿಪಡುತ್ತಿದ್ದರು. ಈ ನಡುವೆ ಅದರ ಒಂದು ಭಾಗ ಇದ್ದಕ್ಕಿದ್ದಂತೆ ಮುರಿಯಲಾರಂಭಿಸಿತು.

ಇದನ್ನು ಗಮನಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಅವರು ತಕ್ಷಣ ಜನರನ್ನು ರಕ್ಷಿಸಲು ಮತ್ತು ಪರಿಸ್ಥಿತಿ ನಿಭಾಯಿಸಲು ಮುಂದೆ ಧಾವಿಸಿದರು. ಆದರೆ, ವ್ಹೀಲ್'ನ ದೊಡ್ಡ ಭಾಗವೊಂದು ನೇರವಾಗಿ ಇನ್ಸ್‌ಪೆಕ್ಟರ್ ಅವರ ತಲೆ ಮತ್ತು ಮುಖಕ್ಕೆ ಬಲವಾಗಿ ಅಪ್ಪಳಿಸಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ (DC) ಆಯುಷ್ ಸಿನ್ಹಾ ಅವರು, ಇದು ಅತ್ಯಂತ ದುಃಖಕರ ಘಟನೆ. ಜಗದೀಶ್ ಪ್ರಸಾದ್ ಅವರು ಜನರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಘಟನೆಯಲ್ಲಿ ಒಟ್ಟು 13 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ICC ಪತ್ರಕ್ಕೆ ಬಾಲ ಮುದುರಿಕೊಂಡ ಪಾಕ್, ಯು-ಟರ್ನ್!

ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬರಲೇ ಇಲ್ಲ! ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ

ಮೇಯರ್ ಚುನಾವಣೆ: BJP ಅಭ್ಯರ್ಥಿಗೆ ಬೆಂಬಲ ನೀಡಿದ್ದ ಕಾರ್ಪೋರೇಟರ್ ಉಚ್ಚಾಟಿಸಿದ AIMIM

T20 World Cup: ಕ್ರಿಕೆಟ್ ಜನಕರಿಗೆ ಭರ್ಜರಿ ಫೈಟ್, ಕ್ರಿಕೆಟ್ ಶಿಶು ನೇಪಾಳಕ್ಕೆ 4 ರನ್‌ಗಳ ವೀರೋಚಿತ ಸೋಲು!

ಯಮರಾಜ on Leave: ಬಸ್ ಕೆಳಗೆ ಬಿದ್ದರೂ ಜೀವ ಉಳಿಸಿಕೊಂಡ ಭೂಪ, Video Viral

SCROLL FOR NEXT