SCALP ಕ್ರೂಸ್ ಕ್ಷಿಪಣಿ ಸಾಂದರ್ಭಿಕ ಚಿತ್ರ 
ದೇಶ

'ಆಪರೇಷನ್ ಸಿಂಧೂರ' ವೇಳೆ ಬಳಸಲಾದ ಕ್ಷಿಪಣಿ ಖರೀದಿ: ಭಾರತ-ಫ್ರಾನ್ಸ್ ಮೆಗಾ ಡೀಲ್!

ಗಮನಾರ್ಹ ಸಂಖ್ಯೆಯ SCALP ಕ್ರೂಸ್ ಕ್ಷಿಪಣಿಗಳನ್ನು ಭಾರತೀಯ ವಾಯುಪಡೆಯು ಫ್ರಾನ್ಸ್‌ನಿಂದ ಖರೀದಿಸುತ್ತಿದೆ. ಈ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ನವದೆಹಲಿ: ಕಳೆದ ವರ್ಷ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಪ್ರಧಾನ ಕಛೇರಿಗಳನ್ನು ಧ್ವಂಸಗೊಳಿಸಲು ಭಾರತೀಯ ವಾಯುಪಡೆಯು ಬಳಸಿದ್ದ SCALP ಕ್ರೂಸ್ ಕ್ಷಿಪಣಿ ಖರೀದಿ ಸಂಬಂಧ ಭಾರತ ಮತ್ತು ಫ್ರಾನ್ಸ್ ಮೆಗಾ ಡೀಲ್ ಗೆ ಎದುರು ನೋಡುತ್ತಿವೆ.

ಗಮನಾರ್ಹ ಸಂಖ್ಯೆಯ SCALP ಕ್ರೂಸ್ ಕ್ಷಿಪಣಿಗಳನ್ನು ಭಾರತೀಯ ವಾಯುಪಡೆಯು ಫ್ರಾನ್ಸ್‌ನಿಂದ ಖರೀದಿಸುತ್ತಿದೆ. ಈ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ರಕ್ಷಣಾ ಅಧಿಕಾರಿಗಳು ಸುದ್ದಿಸಂಸ್ಥೆ ANI ಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಮುರಿಡ್ಕೆ ಮತ್ತು ಬಹವಲ್‌ಪುರ್ ಜಿಲ್ಲೆಗಳಲ್ಲಿನ ಭಯೋತ್ಪಾದಕ ಪ್ರಧಾನ ಕಛೇರಿ ಧ್ವಂಸಗೊಳಿಸಲು ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳೊಂದಿಗೆ SCALP ಕ್ಷಿಪಣಿಗಳನ್ನು ಭಾರತೀಯ ವಾಯುಪಡೆಯು ರಫೇಲ್ ಯುದ್ಧ ವಿಮಾನಗಳಿಂದ ಉಡಾಯಿಸಿದ್ದವು. ಭಾರತೀಯ ವಾಯುಪಡೆಯು ನಡೆಸಿದ ನಿಖರವಾದ ದಾಳಿಯಲ್ಲಿ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ನಾಶಗೊಳಿಸಲಾಗಿತ್ತು.

ರಫೇಲ್ ಯುದ್ಧ ವಿಮಾನಗಳೊಂದಿಗೆ ಕ್ಷಿಪಣಿ ಬಳಕೆ: ಭಾರತೀಯ ವಾಯುಪಡೆಯು ತನ್ನ ರಫೇಲ್ ವಿಮಾನಗಳೊಂದಿಗೆ ಕ್ರೂಸ್ ಕ್ಷಿಪಣಿಗಳನ್ನು ಬಳಸುತ್ತದೆ. IAF ಮೇ 6-7 ರ ರಾತ್ರಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಪ್ರಧಾನ ಕಛೇರಿಯನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ ನಂತರ, ಪಾಕಿಸ್ತಾನದ ವಾಯುಪಡೆಯ ನೆಲೆಗಳ ಮೇಲೆ ದಾಳಿ ಮಾಡಲು ಮತ್ತೆ ಅವುಗಳನ್ನು ದೊಡ್ಡ ರೀತಿಯಲ್ಲಿ ಬಳಸಿತು.

ಭಾರತೀಯ ವಾಯುಪಡೆಯು ಪಾಕಿಸ್ತಾನದ ವಾಯುಪಡೆಯ 12 ಪ್ರಮುಖ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಯುದ್ಧವಿಮಾನಗಳು ಮತ್ತು ಡ್ರೋನ್ ಗಳು ಸೇರಿದಂತೆ ವಿರೋಧಿ ಪಡೆಯ ಹೆಚ್ಚಿನ ಸಂಖ್ಯೆಯ ಆಧುನಿಕ ಶಸಾಸ್ತ್ರಗಳನ್ನು ನಾಶಗೊಳಿಸಲಾಗಿದೆ. IAF ತನ್ನ ರಫೇಲ್ ಜೆಟ್‌ಗಳಿಂದ ಉಡಾಯಿಸುವ ಭಾರಿ ಸಂಖ್ಯೆಯ ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗೆ ಆರ್ಡರ್ ಮಾಡುತ್ತಿದೆ. ಈ ಕ್ಷಿಪಣಿಗಳನ್ನು ಭಾರತೀಯ ನೌಕಾಪಡೆಯ 26 ರಫೇಲ್ ವಿಮಾನಗಳಲ್ಲಿ ಸಂಯೋಜಿಸಲಾಗುವುದು, ಈ ಕ್ಷಿಪಣಿಗಳು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಬರುವ ನಿರೀಕ್ಷೆಯಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ರಫೇಲ್ ಯುದ್ಧ ವಿಮಾನಗಳ ಕಾರ್ಯಕ್ಷಮತೆ ಮತ್ತು ಗಡಿಭಾಗದಲ್ಲಿ ಹೆಚ್ಚುತ್ತಿರುವ ಬೆದರಿಕೆಯ ನಂತರ ಭಾರತೀಯ ವಾಯುಪಡೆಯು 114 ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಸೆಟ್‌ಗೆ ಆರ್ಡರ್ ಮಾಡಲು ಯೋಜಿಸಿದೆ. ಇದನ್ನು ಮುಂದಿನ ಕೆಲವು ದಿನಗಳಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು ಅಂತಿಮಗೊಳಿಸುವ ಸಾಧ್ಯತೆಯಿದೆ.

ಮುಂದಿನ ಕೆಲವು ವರ್ಷಗಳಲ್ಲಿ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಯ ಮುಖ್ಯ ಆಧಾರವಾಗುವ ಸಾಧ್ಯತೆಯಿದೆ. ಮುಂದಿನ 10-15 ವರ್ಷಗಳಲ್ಲಿ ಸುಮಾರು 200 ರಫೇಲ್ ಯುದ್ಧ ವಿಮಾನ ಇರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; ಇಂದು UNSC ಮತದಾನ!

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ 5 ವಿಕೆಟ್ ಗಳಿಂದ ಗೆದ್ದ ಪಂಜಾಬ್‌!

ಹುಬ್ಬಳ್ಳಿ Love Jihad ಕೇಸ್‌ಗೆ ಟ್ವಿಸ್ಟ್: Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆ!

'ನಿಮ್ದೊಂದೆರಡು ಕಿತ್ತೋದ ವಿಮಾನವಾಹಕ ನೌಕೆಗಳು ಇದ್ಯಲ್ಲಾ ಯುದ್ಧಕ್ಕೆ ಕಳಿಸ್ತೀರಾ?' ಅಂತ ಕೇಳಿದ್ದೆ, ಮ್ಯಾಕ್ರಾನ್ ಗೆ ಹೆಂಡ್ತಿ ಕಾಟ: ಬ್ರಿಟನ್, ಫ್ರಾನ್ಸ್ ಬಗ್ಗೆ ಟ್ರಂಪ್ ವ್ಯಂಗ್ಯ

Bengal polls: ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಸೆಕ್ಯೂರಿಟಿ ವಾಪಸ್, ಚುನಾವಣಾ ಆಯೋಗ ನಿರ್ದೇಶನ!

SCROLL FOR NEXT