ಮಂಜುಷಾ ನಾಗ್ಪುರ್  
ದೇಶ

ಪುಣೆ ಮೇಯರ್ ಆಗಿ ಬಿಜೆಪಿಯ ಮಂಜುಷಾ ನಾಗ್ಪುರ್ ಅವಿರೋಧವಾಗಿ ಆಯ್ಕೆ

ಸಿಂಹಗಡ ಪ್ರದೇಶದ ಕಾರ್ಪೊರೇಟರ್ ಆಗಿರುವ ಇವರು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ.

ಪುಣೆ: ಪುಣೆ ಮಹಾನಗರ ಪಾಲಿಕೆಯ (PMC) ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ಮಂಜುಷಾ ನಾಗ್ಪುರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆರ್​ಪಿಐ (ಎ) ನಾಯಕ ಪರಶುರಾಮ್ ವಾಡೇಕರ್ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಎನ್‌ಸಿಪಿಯ ಶೀತಲ್ ಸಾವಂತ್ ಮತ್ತು ಕಾಂಗ್ರೆಸ್ ನಾಯಕಿ ಅಶ್ವಿನಿ ಲಾಂಡ್‌ಗೆ ಅವರು ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂತೆಗೆದುಕೊಂಡರು. ಅದೇ ರೀತಿ, ಉಪಮೇಯರ್ ರೇಸ್‌ನಲ್ಲಿದ್ದ ಎನ್‌ಸಿಪಿ ಕಾರ್ಪೊರೇಟರ್ ದತ್ತಾತ್ರೇಯ ಬಹಿರತ್ ಮತ್ತು ಕಾಂಗ್ರೆಸ್‌ನ ಸಾಹಿಲ್ ಕೇದಾರಿ ಕೂಡ ಹಿಂದೆ ಸರಿದಿದ್ದರಿಂದ, ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆ ಸುಗಮವಾಯಿತು.

ಸಿಂಹಗಡ ಪ್ರದೇಶದ ಕಾರ್ಪೊರೇಟರ್ ಆಗಿರುವ ಇವರು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ನಾಯಕರಾದ ಇವರು, ಬೋಪೋಡಿ ಭಾಗದಿಂದ ಬಿಜೆಪಿ ಮೈತ್ರಿಕೂಟದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು. ಒಟ್ಟು 165 ಸದಸ್ಯ ಬಲದ ಪುಣೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು 119 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಅಜಿತ್ ಪವಾರ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳು ಒಟ್ಟಾಗಿ 30 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 15 ಮತ್ತು ಶಿವಸೇನೆ (ಯುಬಿಟಿ) ಕೇವಲ 1 ಸ್ಥಾನ ಪಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!