ಸಲ್ಮಾನ್ ಖಾನ್ ಮತ್ತು ಉದ್ಧವ್ ಠಾಕ್ರೆ 
ದೇಶ

ಶಿವಸೇನೆಯ ಉದ್ದವ್ ಠಾಕ್ರೆಗಿಂತ ಸಲ್ಮಾನ್ ಖಾನ್ ಹೆಚ್ಚು ಹಿಂದೂ: ಬಿಜೆಪಿ ಸಚಿವ ನಿತೇಶ್ ರಾಣೆ

ಆಡಳಿತ ಪಕ್ಷದ ಜನರು ಏನಾದರೂ ಹೇಳಿದರೆ, ಅದನ್ನು ನಿರಾಕರಿಸುವ ಧೈರ್ಯ ಸಲ್ಮಾನ್ ಖಾನ್‌ಗೆ ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಸರ್ಕಾರದ ಒತ್ತಡದಲ್ಲಿ ಸಲ್ಮಾನ್ ಖಾನ್ ಅಲ್ಲಿಗೆ ಹೋಗಿರಬೇಕು ಎಂದು ಆರೋಪಿಸಿದ್ದಾರೆ.

ಮುಂಬಯಿ: ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾಗವಹಿಸಿದ್ದು, ದೇಶದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಹಲವು ಪಕ್ಷಗಳು ಪರ ವಿರೋಧ ಚರ್ಚೆಯಲ್ಲಿ ತೊಡಗಿವೆ.

ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ರಾಣೆ ಅವರು ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರನ್ನು ಟೀಕಿಸುವ ಭರದಲ್ಲಿ ಸಲ್ಮಾನ್ ಖಾನ್ ರನ್ನು ಹೊಗಳಿದ್ದಾರೆ. ಸಲ್ಮಾನ್ ಖಾನ್ ಉದ್ಧವ್ ಗಿಂತ ಹೆಚ್ಚು ಹಿಂದೂ. ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಧೈರ್ಯ ತೋರಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ಅತ್ಯಂತ ಜನಪ್ರಿಯ ನಟ ಸಲ್ಮಾನ್ ಖಾನ್ ಮೇಲೆ "ಸರ್ಕಾರದ ಒತ್ತಡ" ಹೇರಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಆರೋಪಿಸಿದರು. ಸಲ್ಮಾನ್ ಖಾನ್ ಒಬ್ಬ ನಟ ಮತ್ತು ಅವರು ದೇಶದಲ್ಲಿ ಗೌರವದಿಂದ ಬದುಕಬೇಕು.

ಆಡಳಿತ ಪಕ್ಷದ ಜನರು ಏನಾದರೂ ಹೇಳಿದರೆ, ಅದನ್ನು ನಿರಾಕರಿಸುವ ಧೈರ್ಯ ಸಲ್ಮಾನ್ ಖಾನ್‌ಗೆ ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ಸರ್ಕಾರದ ಒತ್ತಡದಲ್ಲಿ ಸಲ್ಮಾನ್ ಖಾನ್ ಅಲ್ಲಿಗೆ ಹೋಗಿರಬೇಕು ಎಂದು ಆರೋಪಿಸಿದ್ದಾರೆ.

ಶಿವಸೇನಾ ನಾಯಕ ಮತ್ತು ಡಿಸಿಎಂ ಏಕನಾಥ್ ಶಿಂಧೆ ಸಹ, ಸಲ್ಮಾನ್ ಖಾನ್ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹಾಜರಾಗುವುದರಲ್ಲಿ ಏನಿದೆ? ಅವರು ಭಾರತೀಯ ಪ್ರಜೆಯಲ್ಲವೇ? ಅವರು ಮನೆಯಲ್ಲಿ ಗಣೇಶನನ್ನು ಕೂರಿಸುತ್ತಾರೆ. ಎಲ್ಲವನ್ನೂ ಮಾಡುತ್ತಾರೆ, ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಮೋಹನ್ ಭಾಗವತ್ ಅವರ ಕಾರ್ಯಕ್ರಮಕ್ಕೆ ಹಾಜರಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಮುಂಬೈ ನಿವಾಸಿ, ಮುಂಬೈ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನ್ನು ರಾಜಕೀಯ ಮಾಡಬಾರದು ಎಂದಿದ್ದಾರೆ.

ಈ ಕುರಿತು ಮಾತನಾಡಿದ್ದ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯ ನಾಯಕ ಸಂಜಯ್ ರಾವತ್, ಆರ್​​ಎಸ್​ಎಸ್ ಕಾರ್ಯಕ್ರಮಕ್ಕೆ ನಟ ಸಲ್ಮಾನ್ ಖಾನ್ ತೆರಳಿದ್ದು, ಜನಸಮೂಹನ್ನು ಸೆಳೆಯಲು, ಮುಸ್ಲಿಮರು ಸಂಘಕ್ಕೆ ಬರಬಹುದು ಎಂಬುದನ್ನು ಪ್ರಚಾರ ಮಾಡಲು ಕರೆಸಲಾಗಿದೆ. ಬಲವಂತದಿಂದ ಅವರನ್ನು ಕರೆಸಲಾಗಿತ್ತು ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ರಾಜತಾಂತ್ರಿಕ ಜಯ: ಫ್ಯಾಕ್ಟ್‌ಶೀಟ್‌ನಲ್ಲಿ ‘ದ್ವಿದಳ ಧಾನ್ಯಗಳು’ ಉಲ್ಲೇಖ ಕೈಬಿಟ್ಟ ಅಮೆರಿಕಾ..!

ಲೋಕಸಭೆ ಕಲಾಪಕ್ಕೆ ಪ್ರಧಾನಿ ಗೈರು: ಮೋದಿ ಮೇಲೆ ದಾಳಿಗೆ ಸಿದ್ಧರಾಗಿದ್ದ 'ಕೈ' ಮಹಿಳಾ ಸಂಸದರು? ಸಂಸತ್ ಆವರಣದಲ್ಲಿ ನಿಜವಾಗಿ ನಡೆದಿದ್ದೇನು? Video

ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ: ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆ, ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಅರ್ಹ..!

ಕೆನಡಾ: ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿ ಕನಿಷ್ಠ 10 ಸಾವು, 27 ಮಂದಿ ಗಾಯ

ದೆಹಲಿಯಲ್ಲಿ ಡಿಕೆಶಿ ನಂಬರ್ ಗೇಮ್: ಹೈಕಮಾಂಡ್ ತೀರ್ಮಾನವೇ ಫೈನಲ್ ಎಂದ ಸಿಎಂ!

SCROLL FOR NEXT