ಸಾಂದರ್ಭಿಕ ಚಿತ್ರ 
ದೇಶ

ಇದೇ ಮೊದಲು: ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ Bee Corridors ಅಭಿವೃದ್ಧಿಗೆ NHAI ಮುಂದು!

ವಿಶಿಷ್ಟವಾದ Bee Corridors ಯೋಜನೆಯಿಂದ ಪರಿಸರ ಮತ್ತು ಪರಾಗಸ್ಪರ್ಶ ಸಂರಕ್ಷಣೆಗೆ ನೆರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪರಿಸರ ಹೊಣೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಅಲಂಕಾರಿಕ ಸಸ್ಯಗಳಿಂದ ಪರಿಸರ ಸಸಿಗಳ ಅಭಿವೃದ್ಧಿಗೆ ಬದಲಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆದ್ದಾರಿಯುದ್ದಕ್ಕೂ ಹೂವು ಬಿಡುವ ಮತ್ತು ಜೇನು-ಸ್ನೇಹಿ ಸಸ್ಯವರ್ಗದ ಅಭಿವೃದ್ಧಿಗೆ ಮುಂದಾಗಿದೆ. ಇದರಿಂದ ವರ್ಷವಿಡೀ ಮಕರಂದ ಮತ್ತು ಪರಾಗಸ್ಪರ್ಶವನ್ನು ಖಾತ್ರಿಗೊಳಿಸಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಉಪ ಕ್ರಮದ ಭಾಗವಾಗಿ ಪರಾಗಸ್ಪರ್ಶಕ್ಕೆ ಪ್ರಯೋಜನಕಾರಿಯಾದ ವಿವಿಧ ರೀತಿಯ ಮರಗಳು, ಸಸಿಗಳು, ನೆಡುತೋಪುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಎಲ್ಲಾ ಋತುಗಳಲ್ಲಿ ನಿರಂತರ ಹೂ ಬಿಡುವಂತಹ ಸಸಿಗಳನ್ನು ಆಯ್ಕೆ ಮಾಡಲಾಗುವುದು, ಬೇವು, ಕರಂಜ್, ಮಹುವಾ, ಸಿರಿಸ್ ಮತ್ತಿತರ ಸ್ಥಳೀಯ ಜಾತಿಯ ಮರಗಳು ಮತ್ತು ಸಸ್ಯಗಳನ್ನು ನೆಡಲಾಗುತ್ತದೆ.

ವಿಶಿಷ್ಟವಾದ Bee Corridors ಯೋಜನೆಯಿಂದ ಪರಿಸರ ಮತ್ತು ಪರಾಗಸ್ಪರ್ಶ ಸಂರಕ್ಷಣೆಗೆ ನೆರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪರಿಸರ ಹೊಣೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪರಾಗಸ್ಪರ್ಶಕ ಅಥವಾ ಬೀ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು NHAI ಈ ರೀತಿಯ ಕ್ರಮವನ್ನು ಮೊದಲ ಬಾರಿಗೆ ಕೈಗೊಂಡಿದೆ. ಇದರಿಂದ ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕ ಜೀವಿಗಳು ಎದುರಿಸುತ್ತಿರುವ ಪರಿಸರ ಒತ್ತಡ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಕೃಷಿ-ಹವಾಮಾನ ಪರಿಸ್ಥಿತಿಗಳು ಮತ್ತು ಸ್ಥಳೀಯ ಸೂಕ್ತತೆಯನ್ನು ಅವಲಂಬಿಸಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಮಾರ್ಗಗಳು ಮತ್ತಿತರ ಖಾಲಿಯಿರುವ ಪ್ರದೇಶಗಳಲ್ಲಿ ಇಂತಹ ಕಾರಿಡಾರ್ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶಾದ್ಯಂತದ NHAI ಕ್ಷೇತ್ರ ಕಚೇರಿಗಳು ರಾಷ್ಟ್ರೀಯ ಹೆದ್ದಾರಿ ಸೆಕ್ಷನ್ ಗುರುತಿಸುತ್ತವೆ. ಅಲ್ಲಿ ಜೇನುನೊಣಗಳು ಮತ್ತು ಕಾಡು ಜೇನುನೊಣಗಳ ಸರಾಸರಿ ದೂರಕ್ಕೆ ಅನುಗುಣವಾಗಿ, ಹೂವಿನ ಸಸಿಗಳನ್ನು ಸುಮಾರು 500 ಮೀಟರ್‌ಗಳಿಂದ ಒಂದು .ಕಿಮೀ ಅಂತರದಲ್ಲಿ ನೆಡಬಹುದು ಎಂದು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಣಕಾಸು ವರ್ಷದಲ್ಲಿ ಕನಿಷ್ಠ ಮೂರು ಪರಾಗಸ್ಪರ್ಶಕ ಕಾರಿಡಾರ್‌ (pollinator corridors) ಅಭಿವೃದ್ಧಿಪಡಿಸಲು NHAI ಯೋಜಿಸಿದೆ. 2026-27ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸುಮಾರು 40 ಲಕ್ಷ ಮರಗಳನ್ನು ನೆಡಲು ಯೋಜಿಸಿದೆ. ಅದರಲ್ಲಿ ಸುಮಾರು ಶೇ. 60 ರಷ್ಟು 'ಬೀ ಕಾರಿಡಾರ್' ಉಪಕ್ರಮದಡಿ ಸಸಿಗಳನ್ನು ನೆಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!