ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ದೇಶ

ಟ್ರಂಪ್ ಸುಂಕ ಕಾನೂನುಬಾಹಿರ: ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ..

ಸುಂಕ ಕುರಿತು ಅಮೆರಿಕ ಸುಪ್ರೀಂಕೋರ್ಟ್ ನಿನ್ನೆ ನೀಡಿರುವ ತೀರ್ಪಿನ್ನು ನೋಡಿದ್ದೇವೆ. ಈ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಕಾನೂನುಬಾಹಿರ ಎಂದಿರುವ ಅಮೆರಿಕ ಸುಪ್ರೀಂಕೋರ್ಟ್ ನ ತೀರ್ಪಿನ ಬಗ್ಗೆ ಭಾರತದ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಅಮೆರಿಕ ಸುಂಕ ಜಾರಿ ಕುರಿತ ಬೆಳವಣಿಗೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಸುಂಕ ಕುರಿತು ಅಮೆರಿಕ ಸುಪ್ರೀಂಕೋರ್ಟ್ ನಿನ್ನೆ ನೀಡಿರುವ ತೀರ್ಪಿನ್ನು ನೋಡಿದ್ದೇವೆ. ಈ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಅಮೆರಿಕ ಆಡಳಿತದಿಂದ ಕೆಲವು ಕ್ರಮಗಳನ್ನು ಘೋಷಿಸಲಾಗಿದೆ. ಡೊನಾಲ್ಡ್ ಟ್ರಂಪ್ ಸುಂಕ ಜಾರಿ ಬಗ್ಗೆಗಿನ ಈ ಎಲ್ಲಾ ಬೆಳವಣಿಗೆಗಳನ್ನು ಅಧ್ಯಯನ ನಡೆಸುತ್ತಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.

ಅಮೆರಿಕ ಸುಪ್ರೀಂಕೋರ್ಟ್ ಹೇಳಿದ್ದೇನು?

1997ರ ಕಾನೂನು ಬಳಸಿಕೊಂಡು ವಿವಿಧ ರಾಷ್ಟ್ರಗಳ ಮೇಲೆ ಸುಂಕ ಹೇರುವ ಅಧಿಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇಲ್ಲ ಎಂದು ಅಮೆರಿಕ ಸುಪ್ರೀಂಕೋರ್ಟ್ ನ ಆರು ನ್ಯಾಯಾಧೀಶರ ಪೈಕಿ ಮೂವರು ತೀರ್ಪು ನೀಡಿದ್ದರು.

ಅಲ್ಲದೆ ಟ್ರಂಪ್ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ಬಳಿಕ ಸುದ್ದಿಗೋಷ್ಠಿಯಲ್ಲಿ ನ್ಯಾಯಾಧೀಶರ ವಿರುದ್ಧ ಕಿಡಿಕಾರಿದ ಟ್ರಂಪ್, ನ್ಯಾಯಾಲಯವು ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ. ನಮ್ಮ ದೇಶಕ್ಕೆ ಸರಿಯಾದದ್ದನ್ನು ಮಾಡಲು ಧೈರ್ಯವಿಲ್ಲದಿದ್ದಕ್ಕಾಗಿ ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನಾನು ನಾಚಿಕೆಪಡುತ್ತೇನೆ ಎಂದು ಹೇಳಿದರು.

ಟ್ರಂಪ್ ಸುಂಕದಿಂದ ಭಾರತದ ಮೇಲಾಗುವ ಪರಿಣಾಮವೇನು?

ಅಮೆರಿಕ ಶ್ವೇತಭವನ ಮಾಹಿತಿ ಪ್ರಕಾರ, ಫೆಬ್ರವರಿ 24ರಿಂದ ಜಾರಿಗೆ ಬರುವ ಈ ಆದೇಶದಂತೆ, ಅಮೆರಿಕಕ್ಕೆ ಭಾರತೀಯ ಆಮದುಗಳ ಮೇಲೆ ಈಗ 18 ಶೇಕಡಾ ಬದಲು 10 ಶೇಕಡಾ ಶುಲ್ಕ ವಿಧಿಸಲಾಗುತ್ತದೆ. ಇತ್ತೀಚಿನ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ 18 ಶೇಕಡಾ ಶುಲ್ಕ ನಿಗದಿಯಾಗಿತ್ತು.

ವೈಟ್ ಹೌಸ್ ಅಧಿಕಾರಿಯೊಬ್ಬರು ಈ ಬಗ್ಗೆ ANIಗೆ ಪ್ರತಿಕ್ರಿಯಿಸಿ, ಭಾರತ ಸೇರಿದಂತೆ ಎಲ್ಲಾ ದೇಶಗಳು 10 ಶೇಕಡಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಎಲ್ಲಾ ವ್ಯಾಪಾರ ಪಾಲುದಾರ ದೇಶಗಳು ತಮ್ಮ ವ್ಯಾಪಾರ ಒಪ್ಪಂದಗಳನ್ನು ಪಾಲಿಸಬೇಕೆಂದು ಅವರು ಸಲಹೆ ನೀಡಿದರು.

ಅಮೆರಿಕದ ಸುಪ್ರೀಂಕೋರ್ಟ್ ನೀಡಿರುವ 6–3 ತೀರ್ಪಿನಲ್ಲಿ, 1977ರ ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್ (IEEPA) ಬಳಸಿ ವ್ಯಾಪಕ ಆಮದು ಶುಲ್ಕ ವಿಧಿಸುವ ಮೂಲಕ ಟ್ರಂಪ್ ಆಡಳಿತವು ತನ್ನ ಕಾನೂನುಬದ್ಧ ಅಧಿಕಾರವನ್ನು ಮೀರಿ ನಡೆದುಕೊಂಡಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಆರೋಪ: ಶಾಲಿನಿ ರಜನೀಶ್​​ ಕ್ಷಮೆ ಕೇಳಿದ ಸ್ನೇಹಮಯಿ; ವಿಚಾರಣೆ ಬಳಿಕ ಉಲ್ಟಾ ಹೊಡೆದ ಸಾಮಾಜಿಕ ಕಾರ್ಯಕರ್ತ!

40ನೇ ವಯಸ್ಸಿನಲ್ಲಿ ಶಿಖರ್ ಧವನ್ 2ನೇ ಮದುವೆ: ಗೆಳತಿ ಸೋಫಿ ಶೈನ್ ಜೊತೆ 'ಗಬ್ಬರ್' ಸಪ್ತಪದಿ, ಫೋಟೋ ವೈರಲ್!

ಅಯೋಧ್ಯೆಯ ರಾಮ ಮಂದಿರಕ್ಕೆ 4 ಕಿ.ಮೀ ಉದ್ದದ ಭದ್ರತಾ ಗೋಡೆ ನಿರ್ಮಾಣ; ಇದರ ವಿಶೇಷತೆ ಏನು?

ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್: ಮಂಗಳೂರಿಗರಿಗೆ ನಿರಾಸೆ! ಯಾಕೆ ಗೊತ್ತಾ?

ಲೈಂಗಿಕ ದೌರ್ಜನ್ಯ ಕೇಸ್: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIR ದಾಖಲಿಸಲು Pocso ಕೋರ್ಟ್ ಮಹತ್ವದ ಆದೇಶ

SCROLL FOR NEXT