ದೇಶ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ನಿನ್ನೆ ಇಸ್ರೇಲ್ ಸಂಸತ್ತು ಉದ್ದೇಶಿಸಿ ಮಾತನಾಡಿದ ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಅವರ ಹೇಳಿಕೆಗಳನ್ನು ಖಂಡಿಸಿದರು.

ಕಾಂಗ್ರೆಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೇಲ್ ಸಂಸತ್ತಿನಲ್ಲಿ ನಿನ್ನೆ ಮಾಡಿದ ಭಾಷಣವನ್ನು ತೀವ್ರವಾಗಿ ಟೀಕಿಸಿ, ಅದನ್ನು “ತಮ್ಮ ಆತಿಥೇಯ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಪರ ಮಾಡಿದ ನಿರ್ಲಜ್ಜ ಸಮರ್ಥನೆ'' ಎಂದು ವ್ಯಾಖ್ಯಾನಿಸಿದೆ.

ವಿರೋಧ ಪಕ್ಷ ಕಾಂಗ್ರೆಸ್, ಇಸ್ರೇಲ್ ರಚನೆ ಕುರಿತು ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರೂ ಅವರ ಅಭಿಪ್ರಾಯಗಳನ್ನು ಕೂಡ ಇಲ್ಲಿ ಉಲ್ಲೇಖಿಸಿದೆ. ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ ಸ್ಟ್ರೈನ್ ಅವರೊಂದಿಗೆ ನಡೆದ ಪತ್ರ ವ್ಯವಹಾರವನ್ನು ನೆನಪಿಸಿಕೊಂಡಿದೆ.

ನಿನ್ನೆ ಇಸ್ರೇಲ್ ಸಂಸತ್ತು ಉದ್ದೇಶಿಸಿ ಮಾತನಾಡಿದ ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಅವರ ಹೇಳಿಕೆಗಳನ್ನು ಖಂಡಿಸಿದರು.

ನಿನ್ನೆ ಮೋದಿಯವರು ತಮ್ಮ ಆತಿಥೇಯರ ಪರ ನಿರ್ಲಜ್ಜ ಸಮರ್ಥನೆ ಮಾಡಿಕೊಂಡಿದ್ದರು. ಪ್ರಧಾನಮಂತ್ರಿ ಮೋದಿ, ತಾವು ಜನಿಸಿದ ದಿನವೇ ಭಾರತವು ಹೊಸ ಇಸ್ರೇಲ್ ರಾಷ್ಟ್ರವನ್ನು ಮಾನ್ಯತೆ ನೀಡಿದ ವಿಷಯವನ್ನು ಉಲ್ಲೇಖಿಸಿದರು.

ಆದರೆ 1949 ನವೆಂಬರ್ 5ರಂದು ಪ್ರಿನ್ಸ್ಟನ್‌ನಲ್ಲಿ ಐನ್‌ಸ್ಟೈನ್ ಅವರ ಮನೆಯಲ್ಲಿ ನೆಹರು ಮತ್ತು ಐನ್‌ಸ್ಟೈನ್ ಭೇಟಿಯಾದ ಸಂಗತಿಯನ್ನು ಇಲ್ಲಿ ಜೈರಾಂ ರಮೇಶ್ ಉಲ್ಲೇಖಿಸಿದ್ದಾರೆ. 1952 ನವೆಂಬರ್‌ನಲ್ಲಿ ಇಸ್ರೇಲ್ ಅಧ್ಯಕ್ಷರಾಗುವ ಆಹ್ವಾನವನ್ನು ಐನ್‌ಸ್ಟೈನ್ ತಿರಸ್ಕರಿಸಿದ್ದನ್ನೂ, 1955 ಏಪ್ರಿಲ್‌ನಲ್ಲಿ ತಮ್ಮ ನಿಧನಕ್ಕೂ ಮುನ್ನ ನೆಹರು ಅವರೊಂದಿಗೆ ಅಣ್ವಸ್ತ್ರಗಳ ಬಗ್ಗೆ ಪತ್ರ ವ್ಯವಹಾರ ನಡೆಸಿದ್ದನ್ನೂ ನೆನಪಿಸಿಕೊಂಡರು.

ಯಹೂದ್ಯರ ಬಗ್ಗೆ ನನಗೆ ಅಪಾರ ಸಹಾನುಭೂತಿ ಇದೆ ಎಂದು ಒಪ್ಪುತ್ತೇನೆ. ಆದರೆ ಅರಬ್ ದೇಶದವರ ಸಂಕಷ್ಟದ ಪರಿಸ್ಥಿತಿ ಬಗ್ಗೆ ಕೂಡ ನನಗೆ ಸಹಾನುಭೂತಿ ಇದೆ. ಯಾವ ರೀತಿಯಲ್ಲಾದರೂ, ಈ ಸಂಪೂರ್ಣ ವಿಷಯವು ಎರಡೂ ಕಡೆಯವರಿಗೆ ಭಾವೋದ್ರೇಕ ಮತ್ತು ಭಾವನೆಗಳ ವಿಷಯವಾಗಿದೆ ಎಂದು 1947ರ ಜುಲೈ 11ರಂದು ಐನ್ ಸ್ಟೈನ್ ಅವರಿಗೆ ನೆಹರು ಬರೆದ ಪ್ರತಿಕ್ರಿಯೆಯನ್ನು ಜೈರಾಂ ರಮೇಶ್ ಇಲ್ಲಿ ಉಲ್ಲೇಖಿಸಿದ್ದಾರೆ.

ಭಾರತದ ಮೊದಲ ಪ್ರಧಾನಮಂತ್ರಿ ಬರೆದಂತೆ, ಎರಡೂ ಕಡೆಯವರು ನ್ಯಾಯಯುತ ಮತ್ತು ಪರಸ್ಪರ ಒಪ್ಪಿಗೆಯ ಪರಿಹಾರಕ್ಕೆ ಸಿದ್ಧರಾಗದಿದ್ದರೆ, ತಕ್ಷಣದ ಪರಿಣಾಮಕಾರಿ ಪರಿಹಾರ ಕಾಣುವುದಿಲ್ಲ.

ಪ್ಯಾಲೆಸ್ತೀನ್ ಸಮಸ್ಯೆಗೆ ನಾನು ಸಾಕಷ್ಟು ಗಮನಹರಿಸಿದ್ದೇನೆ. ಎರಡೂ ಕಡೆಯವರ ಪುಸ್ತಕ ಮತ್ತು ಪ್ರಕಟಣೆಗಳನ್ನು ಓದಿದ್ದೇನೆ. ಆದರೂ ಅಂತಿಮ ಅಭಿಪ್ರಾಯ ನೀಡಲು ನಾನು ಸಂಪೂರ್ಣವಾಗಿ ತಿಳಿದವನೆಂದು ಹೇಳಲು ಸಾಧ್ಯವಿಲ್ಲ. ಯಹೂದ್ಯರು ಪ್ಯಾಲೆಸ್ತೀನ್ ನಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ, ಅಲ್ಲಿ ಜನರ ಜೀವನಮಟ್ಟವನ್ನು ಹೆಚ್ಚಿಸಿದ್ದಾರೆ ಎಂಬುದು ನಿಜ. ಆದರೆ ಒಂದು ಪ್ರಶ್ನೆ ನನ್ನನ್ನು ಕಾಡುತ್ತದೆ — ಇಂತಹ ಸಾಧನೆಗಳ ಬಳಿಕವೂ ಅವರು ಅರಬರ ವಿಶ್ವಾಸವನ್ನು ಏಕೆ ಗಳಿಸಲಿಲ್ಲ?

ಕೆಲವು ಬೇಡಿಕೆಗಳಿಗೆ ಅರಬರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಏಕೆ ಒಪ್ಪಿಸಲು ಅವರು ಬಯಸುತ್ತಾರೆ? ಈ ರೀತಿಯ ಪರಿಹಾರಕ್ಕೆ ದಾರಿ ಮಾಡಿಕೊಡುವುದಿಲ್ಲ; ಬದಲಾಗಿ ಸಂಘರ್ಷದ ಮುಂದುವರಿಕೆಗೆ ಕಾರಣವಾಗುತ್ತದೆ. ತಪ್ಪು ಒಂದೇ ಪಾಳಯಕ್ಕೆ ಸೀಮಿತವಾಗಿಲ್ಲ; ಎಲ್ಲರೂ ತಪ್ಪು ಮಾಡಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ನೆಹರೂ ಬರೆದಕೊಂಡಿದ್ದನ್ನು ಇಲ್ಲಿ ಜೈರಾಂ ರಮೇಶ್ ಹೇಳಿದ್ದಾರೆ.

ಪ್ಯಾಲೆಸ್ತೀನ್ ನಲ್ಲಿ ಬ್ರಿಟಿಷರ ಆಳ್ವಿಕೆ ಮುಂದುವರಿದಿದ್ದುದೇ ಪ್ರಮುಖ ಅಡಚಣೆಯಾಗಿದೆ ಎಂದು ನೆಹರು ಅಭಿಪ್ರಾಯಪಟ್ಟಿದ್ದರು ಎಂದು ಕಾಂಗ್ರೆಸ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT