ಕೆ. ಕವಿತಾ 
ದೇಶ

ತೆಲಂಗಾಣ: BRS ಗೆ ಕವಿತಾ ಗುಡ್ ಬೈ; 'ಹೊಸ ಪಕ್ಷ' ಸ್ಥಾಪನೆಯ ಘೋಷಣೆ!

ವಿಧಾನಪರಿಷತ್‌ನಲ್ಲಿ ಇಂದು ಕಣ್ಣೀರಿಟ್ಟು ಭಾವುಕರಾಗಿ ಮಾತನಾಡಿದ ಅವರು, ಕಾಂಗ್ರೆಸ್ ಆರೋಪಿಸುತ್ತಿರುವಂತೆಯೇ ಆಸ್ತಿ ವಿವಾದದಿಂದ ಬಿಆರ್ ಎಸ್ ತೊರೆಯುತ್ತಿಲ್ಲ. ಆದರೆ ಸ್ವಾಭಿಮಾನಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಇರುವಂತೆಯೇ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, MLC ಕೆ. ಕವಿತಾ ಸೋಮವಾರ ಘೋಷಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಇಂದು ಕಣ್ಣೀರಿಟ್ಟು ಭಾವುಕರಾಗಿ ಮಾತನಾಡಿದ ಅವರು, ಕಾಂಗ್ರೆಸ್ ಆರೋಪಿಸುತ್ತಿರುವಂತೆಯೇ ಆಸ್ತಿ ವಿವಾದದಿಂದ ಬಿಆರ್ ಎಸ್ ತೊರೆಯುತ್ತಿಲ್ಲ. ಆದರೆ ಸ್ವಾಭಿಮಾನಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.

ಕಣ್ಣೀರಿನ ವಿದಾಯದ ಭಾಷಣ ಮಾಡಿದ ಕವಿತಾ, ಔಪಚಾರಿಕವಾಗಿ ಸದನಕ್ಕೆ ರಾಜೀನಾಮೆ ನೀಡಿ ಬಿಆರ್‌ಎಸ್‌ನಿಂದ ಬೇರ್ಪಟ್ಟರು. 2006 ರಲ್ಲಿ ಕೆಸಿಆರ್ ಮತ್ತು ಪ್ರೊಫೆಸರ್ ಜಯಶಂಕರ್ ಅವರಿಂದ ಪ್ರೇರಿತರಾಗಿ ತೆಲಂಗಾಣ ಚಳವಳಿಗೆ ಸೇರಿದಾಗಿನಿಂದ ಅವರ ರಾಜಕೀಯ ಪ್ರಯಾಣವನ್ನು ವಿವರಿಸುತ್ತಾ, ತೆಲಂಗಾಣ ಹೋರಾಟದಲ್ಲಿ ತಮ್ಮ ಸ್ವತಂತ್ರ ಕೆಲಸವನ್ನು ಒತ್ತಿ ಹೇಳಿದರು.

ತದನಂತರ ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜಾಗೃತಿ ರಾಜಕೀಯ ಪಕ್ಷವಾಗಿ ಬೆಳೆಯುತ್ತಿದೆ. ತೆಲಂಗಾಣದ ಜನರಿಗಾಗಿ ನಿಂತು ಹೋರಾಡಿದರೆ, ಅದು ಲೆಕ್ಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ.ಎಡ ಪಕ್ಷದ ಸಹೋದರರು ಮತ್ತು ಪ್ರಜಾಸತ್ತಾತ್ಮಕ ನಿಯಮಗಳಲ್ಲಿ ಕಾರ್ಯನಿರ್ವಹಿಸುವ ಪಕ್ಷ ಬಯಸುವವರು ನನ್ನನ್ನು ಬೆಂಬಲಿಸಿ ಎಂದು ಹೇಳಿದರು.

ಲಕ್ಷ ಗಟ್ಟಲೆ ತೆಲಂಗಾಣ ಕಾರ್ಯಕರ್ತರು ಬಿಆರ್ ಎಸ್ ನಲ್ಲಿ ಗೌರವಯುತ ಸ್ಥಾನ ಪಡೆದಿಲ್ಲ. ಸಾವಿರಾರು ಹುದ್ದೆಗಳು ಅಸ್ತಿತ್ವದಲ್ಲಿವೆ, ಆದರೆ ಅವರಿಗೆ ಯಾವುದೇ ಸ್ಥಾನಗಳು ಸಿಕ್ಕಿಲ್ಲ. ಚಳವಳಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಯಾವುದೇ ಅವಕಾಶಗಳು ಸಿಕಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಾದ್ಯಂತ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ: ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ

ಸಿದ್ದು ಸರ್ಕಾರದ ಮತ್ತೊಂದು ಹಗರಣ: ವಿವಾದಿತ National Herald ಸೇರಿ ಪ್ರಸಾರವೇ ಇಲ್ಲದ ಪತ್ರಿಕೆಗಳಿಗೆ ಕೋಟಿ ಕೋಟಿ ಜಾಹೀರಾತು!

ಅತ್ಯಪರೂಪ, 135 ವರ್ಷಗಳಲ್ಲಿ ಇದೇ ಮೊದಲು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಜನವರಿಯಲ್ಲೇ 3 ದಿನ ಭಾರಿ ಮಳೆ

Bengaluru: ಮದುವೆ ನಿರಾಕರಿಸಿದ ಪ್ರಿಯತಮೆಯ ತಾಯಿಗೆ ಬೆಂಕಿ ಹಚ್ಚಿದ ಭೂಪ, ಬಂಧನವೇ ರೋಚಕ!

I-PAC ಮುಖ್ಯಸ್ಥರ ಮೇಲೆ ED ದಾಳಿ; ಟಿಎಂಸಿ ಆಂತರಿಕ ಡೇಟಾ ಸಂಗ್ರಹಿಸಲು ಯತ್ನ: ಮಮತಾ ಗಂಭೀರ ಆರೋಪ

SCROLL FOR NEXT