ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್  
ದೇಶ

ಲಾತೂರ್: ಮಾಜಿ ಸಿಎಂ ದೇಶ್‌ಮುಖ್ ಸ್ಮಾರಕ ನಾಶದ ಹೇಳಿಕೆ; ಕ್ಷಮೆಯಾಚಿಸಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ!

ಜನವರಿ 15 ರಂದು ಲಾತೂರ್ ಮಹಾನಗರ ಪಾಲಿಕೆಗೆ ಚುನಾವಣೆ ನಿಗದಿಯಾಗಿದೆ. ಲಾತೂರ್ ನಿಂದ ವಿಲಾಸ್ ರಾವ್ ದೇಶ್ ಮುಖ್ ಅವರ ಸ್ಮಾರಕವನ್ನು ನಾಶಪಡಿಸಲಾಗುವುದು ಎಂದು ಸೋಮವಾರ ರವೀಂದ್ರ ಚವ್ಹಾಣ್ ಹೇಳಿದ್ದರು.

ಛತ್ರಪತಿ ಸಂಭಾಜಿನಗರ: ಮಾಜಿ ಸಿಎಂ ವಿಲಾಸ್‌ರಾವ್ ದೇಶ್‌ಮುಖ್ ಅವರ ಸ್ಮಾರಕ ನಾಶದ ಕುರಿತು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಲ್ಲ. ಇದರಿಂದ ಯಾವುದೇ ನೋವಾಗಿದ್ದರೆ ದೇಶ್ ಮುಖ್ ಮಗನ ಬಳಿ ಕ್ಷಮೆಯಾಚಿಸುವುದಾಗಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಅವರು ಮಂಗಳವಾರ ಹೇಳಿದ್ದಾರೆ.

ಜನವರಿ 15 ರಂದು ಲಾತೂರ್ ಮಹಾನಗರ ಪಾಲಿಕೆಗೆ ಚುನಾವಣೆ ನಿಗದಿಯಾಗಿದೆ. ಲಾತೂರ್ ನಿಂದ ವಿಲಾಸ್ ರಾವ್ ದೇಶ್ ಮುಖ್ ಅವರ ಸ್ಮಾರಕವನ್ನು ನಾಶಪಡಿಸಲಾಗುವುದು ಎಂದು ಸೋಮವಾರ ರವೀಂದ್ರ ಚವ್ಹಾಣ್ ಹೇಳಿದ್ದರು.

ಈ ಹೇಳಿಕೆಯು ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಜ್ಯದ ಅಭಿವೃದ್ಧಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ನಾಯಕನ ಕೊಡುಗೆಯನ್ನು ಕುಂದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ವಿಲಾಸರಾವ್ ದೇಶಮುಖ್ ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ ಅಮಿತ್ ದೇಶಮುಖ್ ಅವರು ಚವಾಣ್ ಅವರ ಹೇಳಿಕೆಯನ್ನು ಖಂಡಿಸಿದ್ದರು. ಹೊರಗಿನವರು ಬಂದು ಟೀಕೆ ಮಾಡ್ತಾರೆ ಎಂಬ ಕಾರಣಕ್ಕೆ ನಮ್ಮ ತಂದೆಯ ಸ್ಮಾರಕ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಾಲಿವುಡ್ ನಟ ರಿತೇಶ್ ದೇಶಮುಖ್ ಕೂಡ ತನ್ನ ತಂದೆಯ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸದ ಚವಾಣ್, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಚಾರಗಳು ನಾಗರಿಕರ ಸೌಲಭ್ಯಗಳ ಇರಬೇಕು. ಈ ಸಮಸ್ಯೆಗಳನ್ನು ಯಾರು ತ್ವರಿತವಾಗಿ ಪರಿಹರಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ ಎಂದರು.

ವಿಲಾಸ್‌ರಾವ್ ದೇಶಮುಖ್ ಅವರನ್ನು ಟೀಕಿಸಿಲ್ಲ. ಆದರೆ ಕಾಂಗ್ರೆಸ್ ವಿಲಾಸ್‌ರಾವ್ ದೇಶಮುಖ್ ಹೆಸರಿನಲ್ಲಿ ಮತ ಕೇಳುತ್ತಿದೆ. ಅವರು ದೊಡ್ಡ ನಾಯಕರಾಗಿದ್ದರು ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ನನ್ನ ಉತ್ತಮ ಸ್ನೇಹಿತನಾಗಿರುವ ಅವರ ಮಗನ ಭಾವನೆಗಳಿಗೆ ನೋವುಂಟಾಗಿದ್ದರೆ, ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಹೇಳಿಕೆಯನ್ನು ರಾಜಕೀಯವಾಗಿ ನೋಡಬಾರದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದು ಕೋರಿದ ಅನಂತಕುಮಾರ್ ಹೆಗಡೆ!

'ವೃದ್ಧ ಸಮಾಜದತ್ತ ಶ್ರೀಲಂಕಾ': ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಹಿರಿಯರ ಸಂಖ್ಯೆ; 40 ವರ್ಷಗಳಲ್ಲಿ ಮೂರು ಪಟ್ಟು ಜಾಸ್ತಿ!

ನಮಸ್ತೆ.. ಏನ್ರೀ ರಾಹುಲ್ ಹೇಗಿದ್ದೀರಾ? ; ಸಂಸತ್ ಭವನದ ಬಳಿ ಪ್ರಧಾನಿ ಮೋದಿ-Rahul Gandhi ಅಪರೂಪದ ಮುಖಾಮುಖಿ! Video

SCROLL FOR NEXT