ಸಾಂದರ್ಭಿಕ ಚಿತ್ರ 
ದೇಶ

ದುಡ್ಡು ಕೇಳಿದ್ರೆ ಲೈಂಗಿಕ ಕಿರುಕುಳ ಕೇಸ್ ಹಾಕ್ತೀನಿ: ನೂರಾರು ಕಿ.ಮೀ ಪ್ರಯಾಣಿಸಿ ಕ್ಯಾಬ್ ಚಾಲಕನಿಗೆ ಮಹಿಳೆ ಬೆದರಿಕೆ!

ಜ್ಯೋತಿ ದಲಾಲ್ ಎಂಬ ಈ ಮಹಿಳೆ ಈ ಹಿಂದೆ ಕ್ಯಾಬ್ ಚಾಲಕ ಮತ್ತು ಸಲೂನ್ ನವರಿಗೆ ವಂಚಿಸಿದ್ದಾಳೆ ಎಂಬುದನ್ನು ಪೊಲೀಸರಿಗೆ ತಿಳಿಸಿದ್ದಾನೆ. ಜ್ಯೋತಿ ದಲಾಲ್ ಸಲೂನ್‌ಗೆ 20,000 ರೂ. ಹಾಗೂ ಕ್ಯಾಬ್ ಚಾಲಕನಿಗೆ 2,000 ರೂ. ವಂಚಿಸಿದ್ದಾಳೆ.

ಗುರುಗ್ರಾಮ: ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಕಾರಿನಲ್ಲಿ ಗಂಟೆಗಟ್ಟಲೇ ಪ್ರಯಾಣಿಸಿದ ನಂತರ ಶುಲ್ಕ ಪಾವತಿಸಲು ನಿರಾಕರಿಸಿದ್ಧಾಳೆ, ಜೊತೆಗೆ ಹಣ ಕೇಳಿದರೇ ಪೊಲೀಸರಿಗೆ ದೂರು ನೀಡುವ ಬೆದರಿಕೆ ಹಾಕಿದ್ದಾಳೆ.

ಆಗಿದ್ದಿಷ್ಟು!

ಜ್ಯೋತಿ ದಲಾಲ್ ಎಂಬ ಮಹಿಳೆ ಮಂಗಳವಾರ ಬೆಳಗ್ಗೆ 8 ಗಂಟೆ ಜಿಯಾವುದ್ದೀನ್ ಎಂಬ ಚಾಲಕನ ಕಾರು ಹತ್ತಿದ್ದಾಳೆ. ಮೊದಲಿಗೆ ಸೆಕ್ಟರ್ 31, ನಂತರ ಬಸ್ ನಿಲ್ದಾಣ, ಅದಾದ ಮೇಲೆ ಸೈಬರ್ ಸಿಟಿಗೆ ಕರೆದೊಯ್ಯುವಂತೆ ತಿಳಿಸಿದ್ದಾಳೆ. ನಂತರ ಜಿಯಾವುದ್ದೀನ್ ಬಳಿ ಆಕೆ ಸ್ವಲ್ಪ ಹಣ ಕೇಳಿದ್ದಾಳೆ. ಈ ವೇಳೆ ಚಾಲಕ 700 ರೂ ಹಣ ನೀಡಿದ್ದಾನೆ, ಅದರಲ್ಲಿ ಆಕೆ ವಿವಿಧ ಸ್ಥಳಗಳಲ್ಲಿ ತಿಂದು ಕುಡಿದಿದ್ದಾಳೆ. ಮಧ್ಯಾಹ್ನದ ವೇಳೆಗೆ ಹಣ ಪಾವತಿಸಿ ಪ್ರಯಾಣವನ್ನು ಕೊನೆಗೊಳಿಸುವಂತೆ ನಾನು ಒತ್ತಾಯಿಸಿದಾಗ ಆಕೆ ಕೋಪಗೊಂಡ, ಹಣ ಕೇಳಿದರೆ ಪೊಲೀಸರ ಬಳಿ ಲೈಂಗಿಕ ಕಿರುಕುಳ ಮತ್ತು ಕಳ್ಳತನದ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ.

ನಂತರ ಚಾಲಕ ಸೆಕ್ಟರ್ 29 ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾನೆ. ಅಲ್ಲಿ ಗಲಾಟೆ ಮಾಡಿಕೊಂಡು ಆಕೆ ಪೊಲೀಸ್ ಠಾಣೆಯಿಂದ ಹೊರ ಹೋದ ನಂತರ ಚಾಲಕ ಪೂರ್ತಿ ಕಥೆ ಬಿಚ್ಚಿಟ್ಟಿದ್ದಾನೆ. ಜ್ಯೋತಿ ದಲಾಲ್ ಎಂಬ ಈ ಮಹಿಳೆ ಈ ಹಿಂದೆ ಕ್ಯಾಬ್ ಚಾಲಕ ಮತ್ತು ಸಲೂನ್ ನವರಿಗೆ ವಂಚಿಸಿದ್ದಾಳೆ ಎಂಬುದನ್ನು ಪೊಲೀಸರಿಗೆ ತಿಳಿಸಿದ್ದಾನೆ. ಜ್ಯೋತಿ ದಲಾಲ್ ಸಲೂನ್‌ಗೆ 20,000 ರೂ. ಹಾಗೂ ಕ್ಯಾಬ್ ಚಾಲಕನಿಗೆ 2,000 ರೂ. ನೀಡಲು ನಿರಾಕರಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.

ಫೆಬ್ರವರಿ 2024 ರಲ್ಲಿ, ಪ್ರಯಾಣ ದರದ ಬಗ್ಗೆ ದಲಾಲ್ ಕ್ಯಾಬ್ ಚಾಲಕನೊಂದಿಗೆ ಜಗಳವಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. "ಜ್ಯೋತಿ ದಲಾಲ್ ವಿರುದ್ಧ ವಂಚನೆ ಮತ್ತು ಬಿಎನ್‌ಎಸ್‌ನ ಇತರ ವಿಭಾಗಗಳ ಅಡಿಯಲ್ಲಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು" ಎಂದು ಸೆಕ್ಟರ್ 29 ಪೊಲೀಸ್ ಠಾಣೆಯ ಎಸ್‌ಎಚ್‌ಒ ರವಿ ಕುಮಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

I-PAC ಮೇಲೆ ಇಡಿ ದಾಳಿ ಖಂಡಿಸಿ ಅಮಿತ್ ಶಾ ಕಚೇರಿ ಹೊರಗೆ ಪ್ರತಿಭಟನೆ: ಟಿಎಂಸಿ ಸಂಸದರ ಬಂಧನ; Video

KGF 2, ಪುಷ್ಪ 2 ದಾಖಲೆಗಳು ಉಡೀಸ್: 24 ಗಂಟೆಗಳಲ್ಲಿ 220ಕ್ಕೂ ಹೆಚ್ಚು ಮಿಲಿಯನ್ ವೀಕ್ಷಣೆ ಪಡೆದ ಯಶ್‌ರ Toxic Teaser!

ಬದಲಾದ ಸಮೀಕರಣ: ಸರ್ಕಾರಿ ಒಪ್ಪಂದಗಳಿಗೆ ಬಿಡ್ ಮಾಡುವ ಚೀನೀ ಸಂಸ್ಥೆಗಳ ಮೇಲಿನ ನಿರ್ಬಂಧ ರದ್ದತಿಗೆ ಭಾರತ ಮುಂದು!

ಜೀವ ಬೆದರಿಕೆ ಮೂಲಕ ನನ್ನನ್ನು ತಡೆಯಲು ಸಾಧ್ಯವಿಲ್ಲ, ಬಂಗಾಳಕ್ಕಾಗಿ ಪ್ರಾಣ ತ್ಯಜಿಸಲು ಸಿದ್ಧ: ಗವರ್ನರ್ ಬೋಸ್

ಪಕ್ಷಗಳು ತತ್ವ-ಸಿದ್ಧಾಂತ ಮರೆತಿವೆ; ಭೀತಿ ಹುಟ್ಟಿಸಿ, ಹಣದಿಂದ ನಾಯಕರನ್ನು ಖರೀದಿಸುತ್ತಿವೆ: ಬಿಜೆಪಿ ವಿರುದ್ಧ ಅಜಿತ್ ಪವಾರ್ ವಾಗ್ದಾಳಿ

SCROLL FOR NEXT