ಮುಂಬೈ: ಬಾಲಿವುಡ್ ನಟ ಜೀತೇಂದ್ರ ಮತ್ತು ಅವರ ಪುತ್ರ ತುಷಾರ್ ಕಪೂರ್ ಮುಂಬೈನ ಉಪನಗರದಲ್ಲಿರುವ ವಾಣಿಜ್ಯ ಜಾಗವನ್ನು ಜಪಾನ್‌ನ ಎನ್‌ಟಿಟಿ ಗ್ರೂಪ್ ಗೆ 559 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ರಿಯಾಲ್ಟಿ ಸಂಸ್ಥೆಯೊಂದು ಮಂಗಳವಾರ ಹಂಚಿಕೊಂಡ ದಾಖಲೆಗಳು ತಿಳಿಸಿವೆ.
ಸ್ಕ್ವೇರ್ ಯಾರ್ಡ್ಸ್ ಹಂಚಿಕೊಂಡ ನೋಂದಣಿ ದಾಖಲೆಗಳ ಪ್ರಕಾರ, ಕಪೂರ್ ಮತ್ತು ಜೀತೇಂದ್ರ ಅವರ ಪ್ಯಾಂಥಿಯಾನ್ ಬಿಲ್ಡ್‌ಕಾನ್ ಪ್ರೈವೇಟ್ ಲಿಮಿಟೆಡ್ ಒಡೆತನದ ತುಷಾರ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಎನ್‌ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್, ಬಾಲಾಜಿ ಐಟಿ ಪಾರ್ಕ್‌ನಲ್ಲಿರುವ 30,195 ಚದರ ಮೀಟರ್‌ಗಿಂತಲೂ ಹೆಚ್ಚು ಜಾಗವನ್ನು 559.24 ಕೋಟಿ ರೂ.ಗೆ ಖರೀದಿಸಿದೆ.
ಈ ಆಸ್ತಿಯನ್ನು ಜನವರಿ 9 ರಂದು ನೋಂದಣಿ ಮಾಡಲಾಗಿದೆ.
ದಾಖಲೆಗಳ ಪ್ರಕಾರ, ಈ ಒಪ್ಪಂದವು ಉಪನಗರ ಚಾಂಡಿವಲಿಯಲ್ಲಿರುವ ಐಟಿ ಪಾರ್ಕ್‌ನಲ್ಲಿ ನೆಲ ಮತ್ತು ಹತ್ತು ಅಂತಸ್ತಿನ ಕಟ್ಟಡ, ಡಿಸಿ -10, ಡೇಟಾ ಸೆಂಟರ್ ಮತ್ತು ಪಕ್ಕದ ನಾಲ್ಕು ಅಂತಸ್ತಿನ ಡೀಸೆಲ್ ಜನರೇಟರ್ ಸ್ಥಳವನ್ನು ಒಳಗೊಂಡಿರುತ್ತದೆ.