ಅಸ್ಸಾಂನ ಕಲಿಯಾಬೋರ್‌ನಲ್ಲಿ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಯ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಭಾರತದಾದ್ಯಂತ ಮತದಾರರ 'ಮೊದಲ ಆಯ್ಕೆ' BJP: ಪ್ರಧಾನಿ ಮೋದಿ

ಅಸ್ಸಾಂನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ದಶಕಗಳ ಕಾಲದ ಆಡಳಿತದಲ್ಲಿ ಮತಗಳಿಗೆ ಪ್ರತಿಯಾಗಿ ಕಾಂಗ್ರೆಸ್ ರಾಜ್ಯದಲ್ಲಿ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸಿದೆ ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷ (BJP) ತನ್ನ ಆಡಳಿತ ಮತ್ತು ಅಭಿವೃದ್ಧಿಯ ದಾಖಲೆಯಿಂದಾಗಿ ದೇಶಾದ್ಯಂತ ಮತದಾರರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಅಸ್ಸಾಂನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ದಶಕಗಳ ಕಾಲದ ಆಡಳಿತದಲ್ಲಿ ಮತಗಳಿಗೆ ಪ್ರತಿಯಾಗಿ ಕಾಂಗ್ರೆಸ್ ರಾಜ್ಯದಲ್ಲಿ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ಅಕ್ರಮ ವಲಸೆ ಹೆಚ್ಚಾಗಿದ್ದು, ಅರಣ್ಯಗಳು, ವನ್ಯಜೀವಿ ಕಾರಿಡಾರ್‌ಗಳು ಮತ್ತು ಸಾಂಪ್ರದಾಯಿಕ ಸಂಸ್ಥೆಗಳ ಮೇಲೆ ಅತಿಕ್ರಮಣಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಭೂಮಿಯನ್ನು ಅತಿಕ್ರಮಿಸಿದ್ದ ನುಸುಳುಕೋರರನ್ನು ಹೊರಹಾಕುವ ಮೂಲಕ ಬಿಜೆಪಿ ಸರ್ಕಾರ ಅಸ್ಸಾಂನ ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸುತ್ತಿದೆ. ಕಾಂಗ್ರೆಸ್ ಜನರ ನಂಬಿಕೆಯನ್ನು ಕಳೆದುಕೊಂಡಿದೆ, ಮತದಾರರು ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಬಿಜೆಪಿಯ ಮೇಲೆ ವಿಶ್ವಾಸ ಇಡುವುದನ್ನು ಮುಂದುವರೆಸಿದ್ದಾರೆ ಎಂದರು.

ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ ಮೋದಿ, 20 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಮತಗಳು ಮತ್ತು ಸ್ಥಾನಗಳನ್ನು ಗಳಿಸಿದೆ ಎಂದು ಹೇಳಿದರು. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ತೋರಿಸಿದರು. ಕೇರಳದಲ್ಲಿ ಬಿಜೆಪಿ ಈಗ ಮೇಯರ್ ನ್ನು ಹೊಂದಿದೆ ಎಂದು ಹೇಳಿದರು.

ಭಾರತದಾದ್ಯಂತ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಬಿಜೆಪಿಯನ್ನು ನಂಬುತ್ತಾರೆ ಎಂಬುದನ್ನು ಈ ಫಲಿತಾಂಶಗಳು ತೋರಿಸುತ್ತವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!

ಗೋಲ್ಡನ್ ಟೆಂಪಲ್‌ನ ಕೊಳದಲ್ಲಿ ಕೈ, ಕಾಲು ತೊಳೆದು ಬಾಯಿ ಮುಕ್ಕಳಿಸಿ ಅಪವಿತ್ರಗೊಳಿಸಿದ Muslim ವ್ಯಕ್ತಿ, Video!

Guillain-Barré Syndrome ಗೆ ಮಧ್ಯಪ್ರದೇಶದಲ್ಲಿ 2 ಸಾವು! ಏನಿದು ಸೋಂಕು? ಹೇಗೆ ಹರಡುತ್ತದೆ?

'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ, ಮೂವರ ಬಂಧನ!

ಮೊಟ್ಟೆಯಿಡುವ ಸಮಯ! ಆಲಿವ್ ರಿಡ್ಲಿಗಳ ಆತಿಥ್ಯಕ್ಕೆ ಸಿದ್ಧವಾದ ಕುಂದಾಪುರ!

SCROLL FOR NEXT