ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರಾಜ್ಯಪಾಲರ ಗದ್ದಲ ಎದಿದ್ದೆ. ಈ ವರ್ಷದ ಪ್ರಥಮ ಅಧಿವೇಶನದಲ್ಲಿ ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲು ರಾಜ್ಯಪಾಲ ಆರ್.ಎನ್. ರವಿ ಮಂಗಳವಾರ "ನಿರಾಕರಿಸಿದ್ದಾರೆ. ರಾಜ್ಯಪಾಲರ "ಮೈಕ್ ಸ್ವಿಚ್ ಆಫ್ ಆಗಿತ್ತು ಎಂದು ಲೋಕ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಕೊಟ್ಟ ಸ್ಪಷ್ಟನೆ ಏನು: 234 ಸದಸ್ಯ ಬಲದ ಸದನದಲ್ಲಿ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡದೆ ರಾಜ್ಯಪಾಲರು ಹೊರ ನಡೆದಿದ್ದಾರೆ. ನಂತರ ಯಾಕೆ ಭಾಷಣ ಓದಲಿಲ್ಲ ಎಂಬುದಕ್ಕೆ 13 ಅಂಶಗಳ ವಿವರಣೆಯನ್ನು ಲೋಕಭವನ ನೀಡಿದೆ.
ರಾಜ್ಯಪಾಲರ ಮೈಕ್ ಅನ್ನು "ಪದೇ ಪದೇ ಸ್ವಿಚ್ ಆಫ್ ಮಾಡಲಾಗಿದ್ದು, ಮಾತನಾಡಲು ಅವರಿಗೆ ಅವಕಾಶ ನೀಡಲಿಲ್ಲ" ಎಂದು ಆರೋಪಿಸಲಾಗಿದೆ. ಈ ಭಾಷಣದಲ್ಲಿ ಹಲವಾರು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳಿವೆ. ಜನರಿಗೆ ತೊಂದರೆ ನೀಡುವ ಹಲವಾರು ನಿರ್ಣಾಯಕ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅದರಲ್ಲಿ ಹೇಳಲಾಗಿದೆ.
ತಮಿಳುನಾಡು 12 ಲಕ್ಷ ಕೋಟಿ ರೂ. ಗೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಿದೆ ಎಂದು ಹೇಳುವುದು ಸತ್ಯಕ್ಕೆ ದೂರವಾಗಿದೆ ಎಂದು ಲೋಕಭವನ ಆರೋಪಿಸಿದೆ.
ನಿರೀಕ್ಷಿತ ಹೂಡಿಕೆದಾರರೊಂದಿಗಿನ ಅನೇಕ ಒಪ್ಪಂದಗಳು ಕಾಗದದ ಮೇಲೆ ಮಾತ್ರ ಉಳಿದಿವೆ. ವಾಸ್ತವಿಕವಾಗಿ ಅದರಲ್ಲಿ ಒಂದು ಭಾಗದಷ್ಟು ಹೂಡಿಕೆಯಾಗಿಲ್ಲ. ತಮಿಳುನಾಡು ಕಡಿಮೆ ಹೂಡಿಕೆದಾರರನ್ನು ಆಕರ್ಷಿತವಾಗುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ನಾಲ್ಕು ವರ್ಷಗಳ ಹಿಂದೆ ತಮಿಳುನಾಡು, ವಿದೇಶಿ ನೇರ ಬಂಡವಾಳವನ್ನು ಸ್ವೀಕರಿಸುವ ರಾಜ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಇಂದು ಅದು ಆರನೇ ಸ್ಥಾನದಲ್ಲಿ ಉಳಿಯಲು ಹೆಣಗಾಡುತ್ತಿದೆ ಎಂದು ಟೀಕಿಸಿದೆ.
ರಾಷ್ಟ್ರಗೀತೆಯನ್ನು ಮತ್ತೊಮ್ಮೆ ಅವಮಾನಿಸಲಾಗಿದ್ದು, ಮೂಲಭೂತ ಸಾಂವಿಧಾನಿಕ ಕರ್ತವ್ಯವನ್ನು ಕಡೆಗಣಿಸಲಾಗಿದೆ. ಇದಲ್ಲದೆ, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಲಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ತೀವ್ರವಾಗಿ ಹೆಚ್ಚುತ್ತಿವೆ. ಆದಾಗ್ಯೂ ಈ ಭಾಷಣದಲ್ಲಿ ಅವುಗಳ ಮೇಲೆ ಯಾವುದೇ ಕ್ರಮದ ಉಲ್ಲೇಖವಿಲ್ಲ ಎಂದು ಲೋಕಭವನದ ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.