ಗುಂಟೂರು: ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಂತರ ಉಸಿರುಕಟ್ಟಿ ತನ್ನ ಪತಿಯನ್ನು ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
ಮಹಿಳೆಗೆ ಬೇರೊಬ್ಬ ಪುರುಷನ ಜತೆ ಅಕ್ರಮ ಬಂಧವಿತ್ತು, ತಮ್ಮ ಸಂಬಂಧಕ್ಕೆ ಅಡ್ಡವಾಗಿದ್ದ ಪತಿಯನ್ನು ಕೊಲ್ಲಲು ಇಬ್ಬರೂ ಸೇರಿ ಸಂಚು ಹೂಡಿದ್ದರು. ಪತಿಗಾಗಿ ಬಿರಿಯಾನಿ ಸಿದ್ಧಪಡಿಸಿದ್ದಳು, ಅದರೊಳಗೆ ನಿದ್ರೆ ಮಾತ್ರೆಯ ಪುಡಿಯನ್ನು ಬೆರೆಸಿದ್ದಳು, ಪತಿ ನಿದ್ರೆಗೆ ಜಾರುತ್ತಿದ್ದಂತೆ ಪ್ರಿಯಕರನನ್ನು ಮನೆಗೆ ಕರೆದಿದ್ದಾಳೆ.
ನಂತರ ಇಬ್ಬರೂ ಸೇರಿ ಮಲಗಿದ್ದ ವ್ಯಕ್ತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗುಂಟೂರಿನ ಚಿಲುವೂರು ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಿದ್ದರು, ವಿಧಿವಿಜ್ಞಾನ ಪರೀಕ್ಷೆಯ ನಂತರ ಆ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಮೃತ ವ್ಯಕ್ತಿ ಹೆಸರು ಲೋಕಂ ಶಿವನಾಗರಾಜು, ಪತ್ನಿ ಲಕ್ಷ್ಮಿ ಮಾಧುರಿ ಮತ್ತಾಕೆಯ ಪ್ರಿಯಕರ ಗೋಪಿ ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ. ಅಪರಾಧ ನಡೆಯುವ ಮೊದಲು ಮಾಧುರಿ ಗೋಪಿ ಜೊತೆ ವಿವಾಹೇತರ ಸಂಬಂಧ ಹೊಂಂದಿದ್ದಳು. ಶಿವನಾಗರಾಜು ಊಟ ಮಾಡಿ ಗಾಢ ನಿದ್ರೆಗೆ ಜಾರಿದ ನಂತರ ಲಕ್ಷ್ಮಿ ಗೋಪಿಯನ್ನು ಮನೆಗೆ ಕರೆಸಿದ್ದಳು.
ಇಬ್ಬರೂ ಶಿವನಾಗರಾಜು ಅವರ ಮುಖದ ಮೇಲೆ ದಿಂಬನ್ನು ಇಟ್ಟು ಸಾಯುವವರೆಗೂ ಉಸಿರುಗಟ್ಟಿಸಿದ್ದರು. ಮಾಧುರಿ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಬೆಳಗಿನ ಜಾವ ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಪತಿ ಸಾವಿನ ಕುರಿತು ಮಾಹಿತಿ ನೀಡಿದ್ದಳು.
ಶಿವನಾಗರಾಜು ಅವರ ತಂದೆ ಮತ್ತು ಸ್ನೇಹಿತರು ದೇಹವನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳ ಜೊತೆಗೆ ಗಾಯಗಳನ್ನು ಗಮನಿಸಿದಾಗ ಅನುಮಾನ ಉಂಟಾಯಿತು. ಅವರು ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದರು, ಇದರಿಂದ ಪೊಲೀಸರು ತನಿಖೆ ಆರಂಭಿಸಿದರು. ಮರಣೋತ್ತರ ಪರೀಕ್ಷೆಯಿಂದ ಆತನ ಕೊಲೆ ಮಾಡಲಾಗಿದೆ ಎಂಬ ವಿಷಯ ತಿಳಿದು ಬಂತು,.
ನಂತರ ಮಾಧುರಿ ಮತ್ತು ಗೋಪಿಯನ್ನು ಬಂಧಿಸಲಾಯಿತು. ಮಾಧುರಿಯ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪರಿಶೀಲನೆಯ ಸಮಯದಲ್ಲಿ ತನಿಖೆಯಿಂದ ಪ್ರಮುಖ ಮಾಹಿತಿ ಬಹಿರಂಗವಾಯಿತು. ಮಾಧುರಿ ತನ್ನ ಪತಿಯ ದೇಹದ ಬಳಿ ಕುಳಿತುಕೊಂಡು ಇಡೀ ರಾತ್ರಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಳು, ವಿಚಾರಣೆಯ ಸಮಯದಲ್ಲಿ, ಮಾಧುರಿ ಸಂಪೂರ್ಣ ತಪ್ಪೊಪ್ಪಿಗೆಯನ್ನು ನೀಡಿದ್ದು, ಗೋಪಿಯೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.