ದಳಪತಿ ವಿಜಯ್ 
ದೇಶ

ಚುನಾವಣೆಯಲ್ಲ, ಪ್ರಜಾಪ್ರಭುತ್ವಕ್ಕಾಗಿ ಸಮರ: ಸಿನಿಮಾ ವಿವಾದ, CBI ತನಿಖೆ ನಡುವೆ ಗುಡುಗಿದ ದಳಪತಿ ವಿಜಯ್!

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ರಾಜಕೀಯದ ಪ್ರಮುಖ ಸಿದ್ಧಾಂತವಾದಿ ಸಿಎನ್ ಅಣ್ಣಾದೊರೈ ಅವರನ್ನು ಉಲ್ಲೇಖಿಸಿದರು.

ಮಾಮಲ್ಲಪುರಂ: ' ಜನ ನಾಯಗನ್' ನಿಷೇಧ ಹಾಗೂ ಕರೂರು ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆ ನಡುವೆ ನಟ ಕಮ್ ರಾಜಕಾರಣಿ ದಳಪತಿ ವಿಜಯ್, ಯಾವುದೇ ಒತ್ತಡಕ್ಕೆ ಶರಣಾಗುವುದಿಲ್ಲ ಎಂದು ಬಲವಾದ ಸಂದೇಶ ರವಾನಿಸಿದ್ದಾರೆ.

ಮಾಮಲ್ಲಪುರಂನಲ್ಲಿ 3,000 ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದ ಕಾರ್ಯತಂತ್ರದ ಸಭೆಯಲ್ಲಿ ಗುಡುಗಿದ್ದಾರೆ.

ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ TVK ಸ್ಪರ್ಧೆ ಸಾಧ್ಯತೆ ಹಿನ್ನೆಲೆಯಲ್ಲಿ"ಇದು ಕೇವಲ ಚುನಾವಣೆಯಲ್ಲ, ಪ್ರಜಾಪ್ರಭುತ್ವಕ್ಕಾಗಿ ಸಮರ. ನೀವು ಈ ಯುದ್ಧವನ್ನು ಎದುರಿಸುವ ನನ್ನ ಕಮಾಂಡೋಗಳು."ರಾಜಕೀಯದಲ್ಲಿರುವವರು, ಪಕ್ಷದಲ್ಲಿ ಹೆಸರು ಇರುವವರ ಕೂಡಾ ಅಣ್ಣಾ ಅವರನ್ನು ಮರೆತಿದ್ದಾರೆ ಎಂದು ಹೇಳುವ ಮೂಲಕ ಡಿಎಂಕೆ ಮತ್ತು AIADMKಯನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ರಾಜಕೀಯದ ಪ್ರಮುಖ ಸಿದ್ಧಾಂತವಾದಿ ಸಿಎನ್ ಅಣ್ಣಾದೊರೈ ಅವರನ್ನು ಉಲ್ಲೇಖಿಸಿದರು.

ಮತಗಟ್ಟೆಗಳು ಅಧಿಕಾರದಲ್ಲಿರುವ ಪಕ್ಷಗಳಿಗೆ ಬೋಗಸ್ ಮತ ಕೇಂದ್ರಗಳಾಗಿವೆ. ಪ್ರತಿ ಮತವನ್ನು ರಕ್ಷಿಸಿ, ಎಲ್ಲರನ್ನು ಭೇಟಿ ಮಾಡಿ." 'ದುಷ್ಟ ಶಕ್ತಿ' (DMK) ಮತ್ತು 'ಭ್ರಷ್ಟ ಶಕ್ತಿ' (AIADMK) ಎದುರಿಸಲು ಟಿವಿಕೆಗೆ ಮಾತ್ರ ಧೈರ್ಯವಿದೆ. ನಾಳೆಯಿಂದ ರಾಜ್ಯಾದ್ಯಂತ ಪ್ರಚಾರ ಪ್ರವಾಸ ಆರಂಭಿಸಲಾಗುವುದು. ರಾಜ್ಯ ಚುನಾವಣೆಗೂ ಮುನ್ನಾ ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಬೆಂಬಲ ಸಂಗ್ರಹಿಸಲಿದೆ. ಟಿವಿಕೆ ಇನ್ನೂ ಯಾವುದೇ ಪಕ್ಷದೊಂದಿಗೆ ಮೈತ್ರಿ ಘೋಷಿಸಿಲ್ಲ. ಸ್ನೇಹಿತರಿಲ್ಲದೆ ಏಕಾಂಗಿಯಾಗಿ ಗೆಲ್ಲುತ್ತೇವೆ ಎಂದು ವಿಜಯ್ ಹೇಳಿದರು.

ಇತ್ತೀಚೆಗಷ್ಟೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ 51ರ ಹರೆಯದ ಸೂಪರ್‌ಸ್ಟಾರ್ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಕರೂರಿನಲ್ಲಿ ವಿಜಯ್ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. ಇದೀಗ ಈ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ದೆಹಲಿಯಲ್ಲಿ ಎರಡು ಬಾರಿ ವಿಚಾರಣೆ ನಡೆಸಲಾಗಿದೆ. ವಿಜಯ್ ಅಭಿನಯದ ಜನ ನಾಯಗನ್ ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ ನೀಡಿ ಸುದ್ದಿಯಾಗಿದೆ. ಬಿಡುಗಡೆಗಾಗಿ ನಿರ್ಬಂಧ ತೆರವುಗೊಳಿಸಲು ನಟ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Padma Awards 2026: ಕರ್ನಾಟಕದ 8 ಮಂದಿ ಸೇರಿದಂತೆ ದೇಶಾದ್ಯಂತ 131 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಣೆ!

60 ಎಸೆತಗಳಲ್ಲಿ 155 ರನ್; ನ್ಯೂಜಿಲ್ಯಾಂಡ್ ವಿರುದ್ಧ ದಾಖಲೆಯ ಗೆಲುವು; T20 ಸರಣಿ ಭಾರತ ಕೈವಶ!

ಯುವರಾಜ್ ಸಿಂಗ್ 'ವಿಶ್ವ ದಾಖಲೆ' ಮುರಿಯುವಲ್ಲಿ ಜಸ್ಟ್ ಮಿಸ್! ಅಭಿಷೇಕ್ ಶರ್ಮಾ ಹೇಳಿದ್ದೇನು?

ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂ. ದರೋಡೆ: ಬೆಳಗಾವಿ ಎಸ್ ಪಿ ಹೇಳಿದ್ದೇನು?

ಮೈಸೂರು: ಕೌಟುಂಬಿಕ ಕಲಹ; ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ

SCROLL FOR NEXT