ಶಶಿ ತರೂರ್ 
ದೇಶ

ರಾಹುಲ್ ಭೇಟಿ ಬೆನ್ನಲ್ಲೇ ತರೂರ್ 'ಸ್ಟಾರ್ ಪ್ರಚಾರಕ' ಎಂದು ಹೆಸರಿಸಿದ ಕಾಂಗ್ರೆಸ್!

ಕೊಚ್ಚಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ನನ್ನ ಹೆಸರು ಕರೆಯಲಿಲ್ಲ ಎಂದು ಅಸಮಾಧಾನಗೊಂಡಿದ್ದ ಶಶಿ ತರೂರ್ ಕೇರಳದ ಚುನಾವಣಾ ಕಾರ್ಯತಂತ್ರದ ಸಭೆಯಿಂದ ದೂರು ಉಳಿದಿದ್ದರು.

ತಿರುವನಂತಪುರಂ: ಕೆಲವು ದಿನಗಳಿಂದ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡು ಬಿಜೆಪಿ ಸೇರ್ತಾರೆ ಎನ್ನಲಾಗುತ್ತಿದ್ದ ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಮುಂಬರುವ ಚುನಾವಣೆಯಲ್ಲಿ UDF ನ ಸ್ಟಾರ್ ಪ್ರಚಾರಕ ಎಂದು ಹೆಸರಿಸಲಾಗಿದೆ.

ಶಶಿ ತರೂರ್ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಅವರು (ತರೂರ್) ಕೇರಳದಲ್ಲಿ ಯುಡಿಎಫ್ ಚುನಾವಣಾ ಪ್ರಚಾರದಲ್ಲಿ ಮೊದಲ ಸಾಲಿನಲ್ಲಿರುತ್ತಾರೆ ಎಂದರು.

ತರೂರ್ ವಿಶ್ವ ಮಟ್ಟದಲ್ಲೂ ಪ್ರಸಿದ್ಧರಾಗಿದ್ದು, ಹೆಸರಾಂತ ಬರಹಗಾರರಾಗಿದ್ದು, ಜನರೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದ್ದಾರೆ. ಹಾಗಾಗಿ ಅವರು ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ತಿಳಿಸಿದರು.

ಕೇರಳ ಕಾಂಗ್ರೆಸ್ ಪಕ್ಷದ ಭಾಗವಾಗಿರುವ ಅವರು ಚುನಾವಣೆಯ ಕಾರಣ ರಾಜ್ಯದಲ್ಲಿಯೂ ಹೆಚ್ಚು ಸಕ್ರಿಯರಾಗುತ್ತಾರೆ. ಮುಂದಿನ ಎರಡು ತಿಂಗಳು ಅವರು ಇಲ್ಲಿಯೇ ಇರುತ್ತಾರೆ. ಕೇರಳದ ಎಲ್ಲಾ 140 ವಿಧಾನಸಭಾ ಕ್ಷೇತ್ರಗಳಿಗೆ ಅವರನ್ನು ಕರೆದುಕೊಂಡು ಹೋಗಲು ಪಕ್ಷ ಯೋಜಿಸುತ್ತಿದೆ ಎಂದು ಅವರು ಹೇಳಿದರು.

ಕೊಚ್ಚಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ನನ್ನ ಹೆಸರು ಕರೆಯಲಿಲ್ಲ ಎಂದು ಅಸಮಾಧಾನಗೊಂಡಿದ್ದ ಶಶಿ ತರೂರ್ ಕೇರಳದ ಚುನಾವಣಾ ಕಾರ್ಯತಂತ್ರದ ಸಭೆಯಿಂದ ದೂರು ಉಳಿದಿದ್ದರು. ಭಾರತ-ಪಾಕಿಸ್ತಾನದ ಉದ್ವಿಗ್ನತೆಗಳ ಕುರಿತಾದ ಟೀಕೆಗಳಿಂದ ಕಳೆದ ವರ್ಷ ಟೀಕೆಗಳನ್ನು ಎದುರಿಸಿದ್ದರು.

ಆದರೂ ಪಕ್ಷದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹೊಂದಿಸಿಕೊಂಡು ಉಭಯಪಕ್ಷೀಯ ವಿದೇಶಾಂಗ ನೀತಿಯನ್ನು ಬೆಂಬಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

12 ರೋಲ್ಸ್ ರಾಯ್ಸ್‌ ಸೇರಿ ಹಲವು ಐಷಾರಾಮಿ ಕಾರು, ಸಾವಿರಾರು ಕೋಟಿ ಒಡೆಯ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಬೆಂಗಳೂರು: ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ

BIFF ನಲ್ಲಿ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನಕ್ಕೆ ಪ್ರಕಾಶ್ ರಾಜ್ ಒತ್ತಾಯ: ಬಿಜೆಪಿ ವಾಗ್ದಾಳಿ!

ಹಿಂದೂ ಧರ್ಮದ ಬದ್ಧತೆ ಸಾಬೀತುಪಡಿಸಲು ಗೋಮಾಂಸ ರಫ್ತು ನಿಲ್ಲಿಸಿ: ಸಿಎಂ ಯೋಗಿಗೆ ಶಂಕರಾಚಾರ್ಯ ಸವಾಲು

News headlines 30-01-2026 | ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ ರಾಯ್ ಆತ್ಮಹತ್ಯೆ; ದಾಳಿ: 4 ಲಕ್ಷ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ; ಬಂಧನದ ಬಳಿಕ ಹೈಡ್ರಾಮ; ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯ

SCROLL FOR NEXT