ರೇಣುಕಾ 
ದೇಶ

ಹೈದರಾಬಾದ್‌: ಬಾಯ್​ಫ್ರೆಂಡ್​ಗೆ ವಿಡಿಯೋ ಕಾಲ್ ಮಾಡಿ ಹೋಟೆಲ್‌ನಲ್ಲೇ ವಿವಾಹಿತ ಯುವತಿ ಆತ್ಮಹತ್ಯೆ!

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಅಲ್ವಾಲ್ ನಿವಾಸಿ ರೇಣುಕಾ ಎಂದು ಗುರುತಿಸಲಾಗಿದೆ. ಈ ಯುವತಿ ವಿವಾಹಿತಳಾಗಿದ್ದು, ಆಕೆಗೆ ಒಂದು ಮಗು ಸಹ ಇದೆ.

ಹೈದರಾಬಾದ್: ಹೈದರಾಬಾದ್‌ನ ಹೋಟೆಲ್ ಕೋಣೆಯಲ್ಲಿ 26 ವರ್ಷದ ಯುವತಿಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಸಾವಿಗೂ ಮುನ್ನ ತನ್ನ ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಅಲ್ವಾಲ್ ನಿವಾಸಿ ರೇಣುಕಾ ಎಂದು ಗುರುತಿಸಲಾಗಿದೆ. ಈ ಯುವತಿ ವಿವಾಹಿತಳಾಗಿದ್ದು, ಆಕೆಗೆ ಒಂದು ಮಗು ಸಹ ಇದೆ. ನಗರದ ರೆಸ್ಟೋರೆಂಟ್ ಹಾಗೂ ಪಬ್‌ನ ಉದ್ಯೋಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ರೇಣುಕಾ ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೈದರಾಬಾದ್‌ನ ಲಂಗರ್ ಹೌಜ್ ಪ್ರದೇಶದ ಹೋಟೆಲ್‌ಗೆ ಒಬ್ಬ ವ್ಯಕ್ತಿಯೊಂದಿಗೆ ಬಂದಿದ್ದರು. ಗುರುವಾರ ರಾತ್ರಿ ಸುಮಾರು 10.30ಕ್ಕೆ ಆ ವ್ಯಕ್ತಿ ಹೋಟೆಲ್‌ನಿಂದ ಹೊರಟುಹೋದರೆ, ರೇಣುಕಾ ಆ ಕೋಣೆಯಲ್ಲಿಯೇ ಇದ್ದರು.

ಹೋಟೆಲ್ ದಾಖಲೆಗಳ ಪ್ರಕಾರ, ಯುವತಿ ನಿನ್ನೆ ರಾತ್ರಿ 11.56 ರ ಸುಮಾರಿಗೆ ಊಟಕ್ಕೆ ಆರ್ಡರ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಆಕೆ ತನ್ನ ಸ್ನೇಹಿತನಿಗೆ ವಿಡಿಯೋ ಕಾಲ್ ಮಾಡಿ ಕರೆಯಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

"ಮಹಿಳೆ ತನ್ನ ಸ್ನೇಹಿತ ಸತ್ಯ ಜೊತೆ ರಾತ್ರಿ 12.24 ರ ಸುಮಾರಿಗೆ ವಿಡಿಯೋ ಕರೆಯಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಬುಧವಾರ ಬೆಳಗ್ಗೆ ಅವರು ಒಬ್ಬ ವ್ಯಕ್ತಿಯೊಂದಿಗೆ ಹೋಟೆಲ್‌ಗೆ ಬಂದಿದ್ದರು" ಎಂದು ಲಂಗರ್ ಹೌಜ್ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಸೈಯದ್ ಮುನ್ವರ್ ಅಲಿ ತಿಳಿಸಿದ್ದಾರೆ.

ಹೋಟೆಲ್ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ತಂಡ ಹೋಟೆಲ್‌ಗೆ ಧಾವಿಸಿ, ಪ್ರಾಥಮಿಕ ತಪಾಸಣೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದೆ.

ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹೋಟೆಲ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಾರೆ. ಮಹಿಳೆಯ ಮೊಬೈಲ್ ಫೋನ್ ಅನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಆಕೆಯ ಸಾವಿಗೆ ಕಾರಣವಾದ ಘಟನೆಗಳ ಕುರಿತು ಅವರೊಂದಿಗೆ ಇದ್ದ ವ್ಯಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ.

"ಪ್ರಕರಣ ದಾಖಲಿಸಲಾಗಿದ್ದು, ನಾವು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಮಹಿಳೆಯ ಸಾವಿನ ಹಿಂದಿನ ನಿಖರವಾದ ಕಾರಣ, ತನಿಖೆ ಪೂರ್ಣಗೊಂಡ ನಂತರವೇ ತಿಳಿಯಲಿದೆ" ಎಂದು ಎಸ್‌ಐ ಅಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

D Boss, D Boss ಜೈಕಾರಕ್ಕೆ ಗರಂ: ನಿಮ್ಮಂತವರಿಂದಲೇ ತೊಂದರೆ ಆಗ್ತೀರೋದು, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಬುದ್ಧಿ ಮಾತು, Video!

ಶಿವಮೊಗ್ಗ: ನಡು ರಸ್ತೆಯಲ್ಲೇ ಕಬ್ಬಿಣದ ರಾಡ್ ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, Video ವೈರಲ್ ಬಳಿಕ ಆರೋಪಿ ಬಂಧನ!

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನ್ಯೂ ಟೀಂ ಘೋಷಣೆ; ರಾಮ್ ಮಾಧವ್, ಸ್ಮೃತಿ ಜೊತೆ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!