ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ 
ದೇಶ

ಇದೆಂಥಾ ಲವ್! ಹಿಂದು ಮಹಿಳೆಯರು ಬೇಕು, ಆದ್ರೆ ಮತಾಂತರ ಯಾಕೆ ಆಗಿಲ್ಲ; ನಟ ಆಮೀರ್ ಖಾನ್ ವಿರುದ್ಧ ಮುಸ್ಲಿಂ ಲೀಡರ್ ಕಿಡಿ; Video

ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್, ಆಮೀರ್ ಖಾನ್ ವೈಯಕ್ತಿಕ ಜೀವನ ಮತ್ತು ಹಿಂದಿನ ವಿವಾಹಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಗಮನಾರ್ಹವಾಗಿ ಗಮನ ಸಳೆದಿದೆ.

ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಗೌರಿ ಸ್ಪ್ರಾಟ್ ಅವರ ವಿವಾಹವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಅಭಿನಂದನಾ ಸಂದೇಶಗಳಿಂದ ಹಿಡಿದು ಟೀಕೆಗಳವರೆಗೆ ಪ್ರತಿಕ್ರಿಯೆಗಳು ಬಂದಿವೆ.

ಈ ಚರ್ಚೆಯ ನಡುವೆ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್, ಆಮೀರ್ ಖಾನ್ ವೈಯಕ್ತಿಕ ಜೀವನ ಮತ್ತು ಹಿಂದಿನ ವಿವಾಹಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಗಮನಾರ್ಹವಾಗಿ ಗಮನ ಸಳೆದಿದೆ.

ಆಮೀರ್ ಖಾನ್ ನ ಮೂವರು ಪತ್ನಿಯರು ಹಿಂದೂಗಳೇ ಆಗಿದ್ದಾರೆ ಯಾಕೆ ಎಂದು ನಾಜಿಯಾ ಇಲಾಹಿ ಖಾನ್ ಪ್ರಶ್ನಿಸಿದ್ದಾರೆ. ಆಮೀರ್ ಉದ್ದೇಶಪೂರ್ವಕವಾಗಿಯೇ ಮದುವೆಗೆ ಹಿಂದೂ ಮಹಿಳೆಯರನ್ನು ಆಯ್ಕೆ ಮಾಡಿಕೊಂಡಿದ್ದು, ಮಕ್ಕಳನ್ನು ಪಡೆದ ನಂತರ ಅವರಿಗೆ ವಿಚ್ಛೇದನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದೂ ಮಹಿಳೆಯರನ್ನು ಮದುವೆಯಾಗಲು ಬಯಸುವ ಆಮೀರ್ ಖಾನ್, ಹಿಂದೂ ಧರ್ಮಕ್ಕೆ ಯಾಕೆ ಮತಾಂತರಗೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಆಮೀರ್ ಖಾನ್ ಮೊದಲ ಪತ್ನಿ ಹಿಂದೂ, ಅವರ ಎರಡನೇ ಪತ್ನಿ ಹಿಂದೂ, ಈಗ ಮೂರನೇ ಹೆಂಡತಿ ಕೂಡಾ ಹಿಂದೂ ಆಗಿದ್ದಾರೆ. ಮಗು ಪಡೆದ ನಂತರ ಆಕೆಗೂ ವಿಚ್ಚೇದನ ನೀಡಲಿದ್ದಾರೆ. ಅವರು ಎಂತಹ ದೊಡ್ಡ ನಟ, ಅವರು ದೇಶ- ವಿದೇಶದಾದ್ಯಂತ ಪ್ರಯಾಣಿಸುತ್ತಿರುತ್ತಾರೆ. ಮುಸ್ಲಿ ರಾಷ್ಟ್ರಗಳಿಗೂ ಭೇಟಿ ನೀಡ್ತಾ ಇರ್ತಾರೆ. ಮೂರು ಬಾರಿಯೂ ಹಿಂದೂ ಮಹಿಳೆಯರ ಪ್ರೀತಿಯಲ್ಲಿ ಬಿದಿದ್ದಾರೆ. ಆದರೆ ಒಂದು ಬಾರಿಯೂ ಮುಸ್ಲಿಂ ಮಹಿಳೆಯರ ಪ್ರೀತಿಯಲ್ಲಿ ಬಿದ್ದಿಲ್ಲ. ಇದೆಂಥಾ ಲವ್ ಅಂತಾ ಕಿಡಿಕಾರಿದ್ದಾರೆ.

ಆಮೀರ್ ಖಾನ್ ಹಿಂದೂ ಮಹಿಳೆಯರನ್ನು ಪ್ರೀತಿಸಿ, ಅವರನ್ನು ಮದುವೆಯಾಗಿ, ನಂತರ ಮಗುವನ್ನು ಪಡೆದು ಅವರಿಗೆ ವಿಚ್ಛೇದನ ನೀಡಲು ಬಯಸುವುದು ಉದ್ದೇಶಪೂರ್ವಕವೆಂದು ತೋರುತ್ತದೆ. ಅವರಿಗೆ ಹಿಂದೂ ಮಹಿಳೆಯರೇ ಇಷ್ಟ ಎಂದು ತೋರುತ್ತದೆ. ಹಾಗಾದ್ರೆ ಯಾಕೆ ಹಿಂದೂ ಆಗುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಗೆ ನಾಂದಿ ಹಾಡಿವೆ. ಇದು ನಟನ ವೈಯಕ್ತಿಕ ಜೀವನ ಮತ್ತು ಅವರ ಇತ್ತೀಚಿನ ವಿವಾಹದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್