ಭೂ ಕುಸಿತದ ರಭಸಕ್ಕೆ ಕೊಚ್ಚಿ ಬಂದ ಟ್ಯಾಂಕರ್ 
ದೇಶ

ವಯನಾಡು: ಭೂ ಕುಸಿತದ ರಭಸಕ್ಕೆ ಕೊಚ್ಚಿ ಬಂದ ಟ್ಯಾಂಕರ್! ನದಿಗೆ ಬಿದ್ದ ಖಾಸಗಿ ಬಸ್, ಮೂವರು ಸಾವು, ಏಳು ಮಂದಿಗೆ ಗಾಯ, ಭಯಾನಕ Video

ಮಿನಾಕ್ಷಿ ಸೇತುವೆ ಬಳಿ ನಿರ್ಮಾಣ ಹಂತದ ವೈನಾಡು-ಮಲ್ಲಾಪುರಂ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲಿ ಸುನಾಮಿಯಂತೆ ಮಣ್ಣು ಮಿಶ್ರಿತ ಕೆಸರು ನುಗ್ಗಿಬಂದಿದ್ದು, ಭೂ ಕುಸಿತದ ರಭಸಕ್ಕೆ ಟ್ಯಾಂಕರ್ ಕೊಚ್ಚಿ ಬಂದಿದೆ

ವೈನಾಡು: ಕೇರಳದ ವೈನಾಡು ಜಿಲ್ಲೆಯ ಕಾಲಡಿ ಬಳಿ ಮಂಗಳವಾರ ಭಯಾನಕ ರೀತಿಯಲ್ಲಿ ಭೂ ಕುಸಿತ ಸಂಭವಿಸಿದೆ. ಮೆಪ್ಪಾಡಿಯ ಕಾಲಡಿ ಸಂಭವಿಸಿದ ಭೂ ಕುಸಿತದಲ್ಲಿ ಮೂವರು ಮೃತಪಟ್ಟಿದ್ದು, ಇತರ 7 ಮಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದು, ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಮಿನಾಕ್ಷಿ ಸೇತುವೆ ಬಳಿ ನಿರ್ಮಾಣ ಹಂತದ ವೈನಾಡು-ಮಲ್ಲಾಪುರಂ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲಿ ಸುನಾಮಿಯಂತೆ ಮಣ್ಣು ಮಿಶ್ರಿತ ಕೆಸರು ನುಗ್ಗಿಬಂದಿದ್ದು, ಭೂ ಕುಸಿತದ ರಭಸಕ್ಕೆ ಟ್ಯಾಂಕರ್ ಕೊಚ್ಚಿ ಬಂದಿದೆ. ಇದರಿಂದ ಭೀತಿಗೊಂಡ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ದಿಕ್ಕಾ ಪಾಲಾಗಿ ಓಡಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭೂ ಕುಸಿತದಿಂದ ಖಾಸಗಿ ಬಸ್ ವೊಂದು ಮೀನಾಕ್ಷಿ ನದಿ ಬಿದಿದ್ದೆ. ನೀರಿನಲ್ಲಿ ಅರ್ಧಭಾಗ ಬಸ್ ಮುಳುಗಿದ್ದು, ಬಸ್ ನಲ್ಲಿದ್ದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಆರಂಭಿಸಿದೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದೆ.

ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಉಂಟಾದ ಭೂಕುಸಿತದ ಅವಶೇಷಗಳಡಿ ಸಿಲುಕಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಈ ಹಿಂದೆ 2024ರಲ್ಲಿ ವೈನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ 250ಕ್ಕೂ ಹೆಚ್ಚು ಸಾವನ್ನಪ್ಪಿದ್ದರು. ಈಗ ಅದೇ ರೀತಿಯಲ್ಲಿ ಮತ್ತೊಂದು ಭಯಾನಕ ಭೂ ಕುಸಿತ ಸಂಭವಿಸಿದೆ.ವೈನಾಡಿನಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟೀಂ ಇಂಡಿಯಾಗೆ ಸಾಲು ಸಾಲು ಸೋಲು: ಜಿಂಬಾಬ್ವೆ ಸರಣಿಯಿಂದ ಮುಖ್ಯ ಕೋಚ್ ಗೌತಮ್ ಗಂಭೀರ್‌ರನ್ನೇ ಹೊರಗಿಟ್ಟ BCCI!

20 ವರ್ಷಗಳಲ್ಲೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಭಾರೀ ಕಡಿತಗೊಳಿಸಿದ ಸೌದಿ ಅರೇಬಿಯಾ; ಭಾರತಕ್ಕೆ ಬಂಪರ್‌!

Satluj Controversy: 'ಸತ್ಲುಜ್'ಅನ್ನು ಅಂತರ-ಇಲಾಖಾ ಸಮಿತಿಗೆ ಉಲ್ಲೇಖಿಸಲು ಕೇಂದ್ರ ನಿರ್ಧಾರ; ಏನಿದು ವಿವಾದ?

ಕಾಶ್ಮೀರ: ಉಗ್ರರ ಅಡಗುತಾಣ ಭೇದಿಸಿದ ಭಾರತೀಯ ಸೇನೆ; ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ!

ಮೆಲೋನಿ ರಾಣಿ, ಅವರ ಪಾಡಿಗೆ ಅವ್ರನ್ನ ಬಿಟ್ಟುಬಿಡಿ: ಟ್ರಂಪ್‌ಗೆ ಮಿತ್ರರಾಷ್ಟ್ರ ಬೆಲ್ಜಿಯಂ ರಕ್ಷಣಾ ಸಚಿವರ ಖಡಕ್ ವಾರ್ನಿಂಗ್!