

ಬೆಲ್ಜಿಯಂ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ಯುಎಸ್ ಮಿತ್ರ ರಾಷ್ಟ್ರಗಳಲ್ಲೂ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕ ರಾಷ್ಟ್ರಗಳು ಟ್ರಂಪ್ ಅವರ ವರ್ತನೆಯನ್ನು ಖಂಡಿಸುತ್ತಿದ್ದಾರೆ. ಇದೀಗ ಬೆಲ್ಜಿಯಂ ಕೂಡಾ ಡೊನಾಲ್ಡ್ ಟ್ರಂಪ್ ವಿರುದ್ದ ಕಿಡಿಕಾರಿದೆ.
ಯುರೋಪ್ ಇನ್ನೂ ಐದರಿಂದ ಹತ್ತು ವರ್ಷಗಳ ಕಾಲ ಅಮೆರಿಕದ ಮಿಲಿಟರಿ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬೆಲ್ಜಿಯಂ ರಕ್ಷಣಾ ಸಚಿವ ಥಿಯೋ ಫ್ರಾಂಕೆನ್ ಹೇಳಿದ್ದಾರೆ. ಇದೇ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಗುರಿಯಾಗಿಸಿಕೊಳ್ಳುವುದರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜೂನ್‌ನಲ್ಲಿ ಫ್ರಾನ್ಸ್ ನಲ್ಲಿ ನಡೆದ G7 ಶೃಂಗಸಭೆ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂದು ಟ್ರಂಪ್ ಹೇಳಿದ್ದರು. ಅದಕ್ಕೆ ಮೆಲೋನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ.
ಖಂಡವು ತನ್ನದೇ ಆದ ಸ್ವತಂತ್ರ ಭದ್ರತಾ ಚೌಕಟ್ಟನ್ನು ಬಲಪಡಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವಾಗ ಯುರೋಪ್, ಯುನೈಟೆಡ್ ಸ್ಟೇಟ್ಸ್ ಅನ್ನು ದೂರವಿಡುವ ಕಾಲ ದೂರವಿಲ್ಲ ಎಂದು ಬೆಲ್ಜಿಯಂ ಸಚಿವರು ಹೇಳಿದ್ದಾರೆ.
ವಾಷಿಂಗ್ಟನ್‌ನೊಂದಿಗೆ ಕಾರ್ಯತಂತ್ರದ ತಾಳ್ಮೆಗೆ ಕರೆ ನೀಡಿದ ಫ್ರಾಂಕೆನ್, ಇಟಲಿ ಪ್ರಧಾನಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಖಂಡಿತ ನಮಗೆ ಅಮೆರಿಕ ಮಿತ್ರನಾಗಿ ಬೇಕು, ಆದರೆ ಮೆಲೋನಿಯನ್ನು ಮುಟ್ಟಬೇಡಿ. ಆಕೆ ಯುರೋಪಿನ ಮಧ್ಯ-ಬಲಪಂಥೀಯರ ರಾಣಿ. ಆಕೆ ಆಲ್ಫಾ. ಆಕೆನ್ನು ಬಿಟ್ಟುಬಿಡಿ" ಎಂದು ಫ್ಲೆಮಿಶ್ ರಾಷ್ಟ್ರೀಯತಾವಾದಿ ಸಚಿವ ಫ್ರಾಂಕೇನ್ ಪ್ರತಿಪಾದಿಸಿದರು.