ತಸ್ಲಿಮಾ ನಸ್ರೀನ್ 
ದೇಶ

20 ವರ್ಷಗಳ ಬಳಿಕ ಕೋಲ್ಕತಾಗೆ ಮರಳುತ್ತಿರುವ ತಸ್ಲಿಮಾ ನಸ್ರೀನ್: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ

ಆಗಸ್ಟ್‌ 1 ರಂದು ರವೀಂದ್ರ ಸದನದಲ್ಲಿ ನಡೆಯವ ಮೂಲಭೂತವಾದ ವಿರೋಧಿ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತಾಗೆ ಆಗಮಿಸಲಿದ್ದಾರೆ .

ಕೋಲ್ಕತಾ : 2007ರಲ್ಲಿ ತಮ್ಮ ಬರಹಗಳ ಕಾರಣದಿಂದ ಸೃಷ್ಟಿಯಾಗಿದ್ದ ವಿರೋಧದಿಂದ ಕೋಲ್ಕತಾ ತೊರೆದಿದ್ದ ಬಾಂಗ್ಲಾದೇಶದ ಲೇಖಕಿ 20 ತಸ್ಲೀಮಾ ನಸ್ರೀನ್‌ ವರ್ಷಗಳ ಬಳಿಕ ಮತ್ತೆ ಕೋಲ್ಕತಾಗೆ ಮರಳಲು ಸಜ್ಜಾಗಿದ್ದಾರೆ.

ಆಗಸ್ಟ್‌ 1 ರಂದು ರವೀಂದ್ರ ಸದನದಲ್ಲಿ ನಡೆಯವ ಮೂಲಭೂತವಾದ ವಿರೋಧಿ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತಾಗೆ ಆಗಮಿಸಲಿದ್ದಾರೆ. ಎರಡು ದಶಕಗಳ ಬಳಿಕ ನಗರಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.

63 ವರ್ಷದ ತಸ್ಲಿಮಾ ನಸ್ರೀನ್ ಅವರ ಆತ್ಮಕಥನದಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಭಾರಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಹಿನ್ನೆಲೆಯಲ್ಲಿ ಅಂದಿನ ಎಡರಂಗ ಸರ್ಕಾರ (2001-2006) ಅವರ ಈ ಪುಸ್ತಕವನ್ನು ನಿಷೇಧಿಸಿತ್ತು ಮತ್ತು ತಸ್ಲಿಮಾ ಅವರು ಕೋಲ್ಕತ್ತದಿಂದ ಹೊರಹೋಗಬೇಕಾಯಿತು.

ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ಆಯೋಜಿಸಲಾಗಿರುವ 'ಮೂಲಭೂತವಾದ ವಿರೋಧಿ' ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತ್ತಗೆ ಬರಲು ಸಜ್ಜಾಗಿದ್ದಾರೆ. ಮೂರು ಪ್ರಮುಖ ಸಂಘಟನೆಗಳು ಜಂಟಿಯಾಗಿ ನೀಡಿದ ಆಹ್ವಾನದ ಮೇರೆಗೆ ಅವರು ಆಗಮಿಸುತ್ತಿದ್ದಾರೆ.

ಮೂಲತಃ ಬಾಂಗ್ಲಾದೇಶದವರಾದ ತಸ್ಲೀಮಾ ನಸ್ರಿನ್ ಲೇಖಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ತಮ್ಮ ಬರಹಗಳಿಂದಲೇ ಜಗತ್ತಿನಾದ್ಯಂತ ಹೆಚ್ಚು ಚರ್ಚೆ ವಿವಾದಗಳಿಗೆ ಒಳಗಾದ ವ್ಯಕ್ತಿಗಳಲ್ಲಿ ಒಬ್ಬರು. ಮಹಿಳೆಯರ ಹಕ್ಕು, ಧಾರ್ಮಿಕ ಮೂಲಭೂತವಾದ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿರ್ಭಯವಾಗಿ ಬರೆಯುತ್ತಿದ್ದುದು ಮೂಲಭೂತವಾದಿಗಳಿಗೆ ಕೆಂಗಣ್ಣಿಗೆ ಗುರಿಯಾಗಿ ಜೀವ ಬೆದರಿಕೆಗೆ ಒಳಗಾಗಿ ಬಾಂಗ್ಲಾ ತೊರೆಯುವಂತಾಯ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!