ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು 
ದೇಶ

'ವಿದ್ಯಾರ್ಥಿಗಳ ಹೋರಾಟವನ್ನೂ ದುರ್ಬಲಗೊಳಿಸಬೇಡಿ': ರಾಹುಲ್ ಗಾಂಧಿ ವಿರುದ್ಧ AAP ತೀಕ್ಷ್ಣ ವಾಗ್ದಾಳಿ

ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರವಾಗಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿರುವ ಎಎಪಿ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿಯನ್ನು ತೀವ್ರ ಟೀಕಿಸಿದೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ನಡೆಸಿದ ಧರಣಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (AAP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಹೋರಾಟವನ್ನೂ ದುರ್ಬಲಗೊಳಿಸಬೇಡಿ ಎಂದು ಕಿಡಿಕಾರಿದೆ.

ದೆಹಲಿಯಲ್ಲಿ ನಡೆಯುತ್ತಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರವಾಗಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿರುವ ಎಎಪಿ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿಯನ್ನು ತೀವ್ರ ಟೀಕಿಸಿದೆ.

ಈ ಪ್ರತಿಭಟನೆಯು ಕಾಕ್ರೋಚ್ ಜನತಾ ಪಕ್ಷ (CJP) ನಡೆಸುತ್ತಿರುವ ಹೋರಾಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದುರ್ಬಲಗೊಳಿಸಿದ್ದು, ಕಾಂಗ್ರೆಸ್ ಬಿಜೆಪಿಯೊಂದಿಗೆ 'ಜುಗಲ್‌ಬಂದಿ' ನಡೆಸುತ್ತಿದೆ ಎಂದು ಎಎಪಿ ಆರೋಪಿಸಿದೆ.

'ರಾಹುಲ್‌ಗೆ ಅವಕಾಶ, CJPಗೆ ನಿರ್ಲಕ್ಷ್ಯ'

ಎಎಪಿಯ ಹಿರಿಯ ನಾಯಕಿ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಈ ಕುರಿತು ಮಾತನಾಡಿ, ಕಾಂಗ್ರೆಸ್ ಪ್ರತಿಭಟನೆಯನ್ನು 'ಬಿಜೆಪಿಯೊಂದಿಗೆ ಜುಗಲ್‌ಬಂದಿ' ಎಂದು ಟೀಕಿಸಿದ್ದಾರೆ.

"ಸೋನಂ ವಾಂಗ್ಚುಕ್ ಹಾಗೂ CJP ಬೆಂಬಲಿಗರು ಒಂದು ತಿಂಗಳಿನಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಅವರೊಂದಿಗೆ ಮಾತುಕತೆಗೆ ಮುಂದಾಗಲಿಲ್ಲ.

ಮತ್ತೊಂದೆಡೆ ರಾಹುಲ್ ಗಾಂಧಿಗೆ ಪ್ರಧಾನಿಯ ನಿವಾಸದ ಎದುರು ಧರಣಿ ನಡೆಸಲು ಅವಕಾಶ ನೀಡಲಾಯಿತು. ಒಂದು ಗಂಟೆಯೊಳಗೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ವಾಹ್! ಏನು ಜುಗಲ್‌ಬಂದಿ!" ಎಂದು ಅವರು 'ಎಕ್ಸ್‌'ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

'CJP ಹೋರಾಟವನ್ನು ದುರ್ಬಲಗೊಳಿಸಲು ರಾಹುಲ್ ಪ್ರತಿಭಟನೆ'

ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, "CJP ಹೋರಾಟವನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಮೋದಿ ಅವರು ರಾಹುಲ್ ಗಾಂಧಿಯಿಂದ ತಮ್ಮ ಮನೆಯ ಎದುರೇ ಪ್ರತಿಭಟನೆ ನಡೆಸಿಸಿದರು ಎನ್ನಿಸುತ್ತದೆ" ಎಂದು ಎಕ್ಸ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

'ಕಾಂಗ್ರೆಸ್ ನಾಯಕರು ಮೌನ'

ದೆಹಲಿ ಎಎಪಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, ಕಾಂಗ್ರೆಸ್ ನಾಯಕರು CJP ಹೋರಾಟದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು. "GenZ ಚಳವಳಿಯ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರು ಮೌನವಾಗಿದ್ದಾರೆ. ಆದರೆ ಅವರ ಸಾಮಾಜಿಕ ಜಾಲತಾಣಗಳು ಮತ್ತು ಅವರಿಗೆ ಬೆಂಬಲ ನೀಡುವ ಇನ್‌ಫ್ಲುಯೆನ್ಸರ್‌ಗಳು ಮೊದಲ ದಿನದಿಂದಲೇ CJP ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

ರಾಹುಲ್, ಪ್ರಿಯಾಂಕಾ ನೇತೃತ್ವದಲ್ಲಿ ಧರಣಿ

ಇದಕ್ಕೂ ಮೊದಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಲೋಕ್ ಕಲ್ಯಾಣ ಮಾರ್ಗ ನಿವಾಸದ ಎದುರು ಧರಣಿ ನಡೆಸಿದರು. NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿರುವುದನ್ನು ಖಂಡಿಸಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮಾತುಕತೆ ವಿಫಲ, ನಾಯಕರ ಬಂಧನ

ಸುಮಾರು 20 ನಿಮಿಷಗಳ ಬಳಿಕ, ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಧರಣಿ ಕೈಬಿಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದರು. ಆದರೆ ರಾಹುಲ್ ಅದನ್ನು ನಿರಾಕರಿಸಿದರು. ಸ್ವಲ್ಪ ಸಮಯದ ಬಳಿಕ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

5 ರಾಜ್ಯಗಳ ಚುನಾವಣೆ: ರಾಜಕೀಯ ಪಕ್ಷಗಳ ಖರ್ಚು- ದೇಣಿಗೆ ಮಾಹಿತಿ ಬಹಿರಂಗ; ಆಡಳಿತಾರೂಢ ಬಿಜೆಪಿಗೆ ಬಂದಿದ್ದೆಷ್ಟು?

ಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕನ ರಾಜೀನಾಮೆ; ಸುರಕ್ಷತಾ ಕಾರ್ಯನಿರ್ವಾಹಕರಿಂದಲೂ ಬೆಂಬಲ!

ಸಂಘರ್ಷ ಮತ್ತಷ್ಟು ತೀವ್ರ: ಇಂಧನ ಟ್ಯಾಂಕರ್ ಗಳ ಮೇಲಿನ ದಾಳಿಗೆ ಸೇಡು, ಅಮೆರಿಕದ Submarine ಸೀಜ್ ಮಾಡಿದ ಇರಾನ್!

ಸಂಸಾರ, ಸಿಮ್ ಕಾರ್ಡ್, CID ಬಲೆ: ನಾಪತ್ತೆಯಾಗಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರು 8 ತಿಂಗಳ ಬಳಿಕ ಪತ್ತೆ; ಒಬ್ಬಳು ಗರ್ಭಿಣಿ!

KBCಗೆ ಅಮಿತಾಬ್ ಬಚ್ಚನ್ ವಿದಾಯ? ಈ ಬಗ್ಗೆ ಬಿಗ್ ಬಿ ಹೇಳಿದ್ದೇನು?