ಸಿಎಂ ಡಿಕೆ ಶಿವಕುಮಾರ್,ಸಿಎಂ ವಿಜಯ್ ಸಾಂದರ್ಭಿಕ ಚಿತ್ರ 
ದೇಶ

ಕಾವೇರಿಗೆ ಸಂಧಾನ ಸೂತ್ರ: ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ ಬರುವುದು ಡೌಟು? ಇದೇ ಕಾರಣ...!

ಮುಖ್ಯಮಂತ್ರಿ ವಿಜಯ್ ಅವರ ಬೆಂಗಳೂರು ಪ್ರವಾಸದ ಕುರಿತು ಈ ಹಿಂದೆ ನೀಡಿದ ಹೇಳಿಕೆಯಿಂದ ತಮಿಳುನಾಡು ಕೃಷಿ ಸಚಿವ ವಿನೋತ್ ಹಿಂದೆ ಸರಿದಿದ್ದು, ಅಧಿಕೃತ ಘೋಷಣೆಗಾಗಿ ಕಾಯುವಂತೆ ಪತ್ರಕರ್ತರಿಗೆ ಮನವಿ ಮಾಡಿದ್ದಾರೆ.

ಚೆನ್ನೈ: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಮತ್ತಿತರ ನದಿ ನೀರು ಹಂಚಿಕೆ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆಗಾಗಿ ಕರ್ನಾಟಕ ಸರ್ಕಾರ ನೀಡಿದ ಆಹ್ವಾನವನ್ನು ತಿರಸ್ಕರಿಸುವಂತೆ, ತಮಿಳುನಾಡಿನ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭಾನುವಾರ ಆಗ್ರಹಿಸಿವೆ.

ಈ ಮಧ್ಯೆ ಮುಖ್ಯಮಂತ್ರಿ ವಿಜಯ್ ಅವರ ಬೆಂಗಳೂರು ಪ್ರವಾಸದ ಕುರಿತು ಈ ಹಿಂದೆ ನೀಡಿದ ಹೇಳಿಕೆಯಿಂದ ತಮಿಳುನಾಡು ಕೃಷಿ ಸಚಿವ ವಿನೋತ್ ಹಿಂದೆ ಸರಿದಿದ್ದು, ಅಧಿಕೃತ ಘೋಷಣೆಗಾಗಿ ಕಾಯುವಂತೆ ಪತ್ರಕರ್ತರಿಗೆ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ, ಆಗಸ್ಟ್ 3 ರಂದು ವಿಜಯ್ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದರು.

ಮೈಲಾಡುತುರೈನಲ್ಲಿ ನಡೆದ ರೈತ ಸಮನ್ವಯ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಪಿ.ಆರ್. ಪಾಂಡಿಯನ್, "ತಮಿಳುನಾಡಿನ ಮುಖ್ಯಮಂತ್ರಿಗಳು ಕರ್ನಾಟಕದ ಮುಖ್ಯಮಂತ್ರಿಯ ಆಹ್ವಾನವನ್ನು ತಿರಸ್ಕರಿಸಲೇಬೇಕು ಎಂದು ಹೇಳಿದರು.

ನೇರ ಮಾತುಕತೆಗಳು ಅಶಾಂತಿಗೆ ಕಾರಣವಾಗಬಹುದು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. "ಹಿಂದೆ ಇಂತಹ ಮಾತುಕತೆಗಳನ್ನು ನಡೆಸಿದಾಗ ಭಿನ್ನಾಭಿಪ್ರಾಯಗಳು ಮತ್ತು ಸಂಘರ್ಷಗಳು ಉಂಟಾಗಿದ್ದವು. ನೀರು ಹಂಚಿಕೆಗೆ ಸಂಬಂಧಿಸಿದ ಎಲ್ಲಾ ಚರ್ಚೆಗಳು ಕಡ್ಡಾಯವಾಗಿ 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ'ದ (CWMA) ಮೂಲಕವೇ ನಡೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

"ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆ ಮತ್ತು ನೀರು ಬಿಡುಗಡೆಯ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ತೆರಳುವುದು ಕಾನೂನುಬಾಹಿರವಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೂ ಅಮಾನ್ಯವಾಗಿದೆ ಮತ್ತು ಸಂವಿಧಾನದ ಪ್ರಕಾರವೂ ಅಮಾನ್ಯವಾಗಿದೆ ಎಂದು ಪಾಂಡಿಯನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!