ಅಭಿಜೀತ್ ದೀಪ್ಕೆ ಹಾಗೂ ತಾಯಿ 
ದೇಶ

BJP ಸೇರಿ, ಇಲ್ಲದಿದ್ದರೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ: ಅಭಿಜೀತ್ ದೀಪ್ಕೆಗೆ 'ವಿಡಿಯೋ ಬೆದರಿಕೆ' ಬಿಚ್ಚಿಟ್ಟ ತಾಯಿ!

ಹೌದು, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಬಿಜೆಪಿ ಸೇರಿ, ಇಲ್ಲದಿದ್ದರೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಬೆದರಿಕೆಯ ವಿಡಿಯೋ ಬಂದಿತ್ತು ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ.

ನವದೆಹಲಿ: ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ 'ವಿಡಿಯೋ ಮೂಲಕ ಬೆದರಿಕೆ' ಹಾಕಲಾಗಿತ್ತು ಎಂಬ ಆಘಾತಕಾರಿ ವಿಚಾರವನ್ನು ಸ್ವತಃ ಅವರ ತಾಯಿ ಬಿಚ್ಚಿಟ್ಟಿದ್ದಾರೆ.

ಹೌದು, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಬಿಜೆಪಿ ಸೇರಿ, ಇಲ್ಲದಿದ್ದರೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಬೆದರಿಕೆಯ ವಿಡಿಯೋ ಬಂದಿತ್ತು ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ.

ನವದೆಹಲಿಯಿಂದ ಅಭಿಜೀತ್ ದೀಪ್ಕೆ ಮನೆಗೆ ಹಿಂದಿರುಗುವ ಮುನ್ನ ಮರಾಠಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಅವರ ತಾಯಿ ಅನಿತಾ ದೀಪ್ಕೆ, ಈ ಬೆದರಿಕೆಯಿಂದಾಗಿ ನಾವು ನಮ್ಮ ಮನೆಯಿಂದ ಓಡಿಹೋಗಿ ಕೊಂಕಣ ಪ್ರದೇಶದ ಸಂಬಂಧಿಕರ ಮನೆಯಲ್ಲಿ 16 ದಿನಗಳ ಕಾಲ ಆಶ್ರಯ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ನಿವಾಸಿಗಳಾಗಿರುವ ಅಭಿಜೀತ್ ಅವರ ತಾಯಿ ಮತ್ತು ತಂದೆ ಭಗವಾನ್ ದೀಪ್ಕೆ ಅವರು ಮರಾಠಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದು, ಬೆದರಿಕೆ ಬಂದ ನಂತರ ತಮ್ಮ ನಿವಾಸವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಪುತ್ರ ಒತ್ತಾಯಿಸಿದ್ದ ಎಂದು ತಾಯಿ ತಿಳಿಸಿದ್ದಾರೆ.

ಆರಂಭದಲ್ಲಿ ಈ ವಿಷಯವನ್ನು ಕುಟುಂಬದವರಿಗೆ ತಿಳಿಸದ ಅಭಿಜೀತ್ ದೀಪ್ಕೆ, ಬಳಿಕ ಬಿಜೆಪಿ ಸೇರಲು ನಿರಾಕರಿಸಿದರೆ ತಮ್ಮ ಪೋಷಕರನ್ನೇ ಗುರಿಯಾಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಒಳಗೊಂಡ ವಿಡಿಯೋ ಬಂದಿರುವುದಾಗಿ ತಿಳಿಸಿದ್ದ ಎಂದು ಅನಿತಾ ದೀಪ್ಕೆ ಹೇಳಿದ್ದಾರೆ.

ಆ ವಿಡಿಯೋವನ್ನು ನೋಡದಂತೆ ಪುತ್ರ ಸಲಹೆ ನೀಡಿದ್ದ. ಅಲ್ಲದೆ, ತಮ್ಮ ಸುರಕ್ಷತೆಯ ದೃಷ್ಟಿಯಿಂದ ತಾವು ಕೆಲ ದಿನಗಳ ಕಾಲ ಮನೆಯಿಂದ ದೂರವಿರಬೇಕೆಂದು ಒತ್ತಾಯಿಸಿದ್ದ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ "ಅಂತಹ ಬೆದರಿಕೆಗಳಿಗೆ ತಾನು ಹೆದರುವುದಿಲ್ಲ ಎಂದು ಮಗ ನಮಗೆ ಹೇಳಿದ್ದ ಎಂದಿದ್ದಾರೆ.

ಈ ವೇಳೆ ಮಾತನಾಡಿದ ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್ ದೀಪ್ಕೆ, ಸಾರ್ವಜನಿಕ ಜೀವನ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರಿಗೆ ಟೀಕೆ ಅನಿವಾರ್ಯ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Madras ನಿರ್ದೇಶಕ ಕಾಮಕೋಟಿ 'ಗೋಮೂತ್ರ ತಜ್ಞ': ಪ್ರಿಯಾಂಕಾ ಗಾಂಧಿ ಹೇಳಿಕೆ ಖಂಡಿಸಿ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ಪತ್ರ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ Zalim' ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video

ಚೆನ್ನಮ್ಮ ಉತ್ತರ ಕ್ರಿಯಾದಿ: ಸಮಾಧಿ ಮುಂದೆ ಪತ್ನಿ ನೆನೆದು ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ

ಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಪ್ರಕರಣ; ಮೂವರ DNA ಹೊಂದಾಣಿಕೆ ದೃಢ- FSL ವರದಿ