ಇಂಡಿಗೋ ವಿಮಾನ online desk
ದೇಶ

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಅವಘಡ; ತಪ್ಪಿದ ದೊಡ್ಡ ದುರಂತ!

ಗುಡುಗು ಸಹಿತ ಭಾರೀ ಮಳೆಯ ನಡುವೆ ನಿಂತಿದ್ದ ವಿಮಾನಕ್ಕೆ ಸಿಡಿಲಿ ಬಡಿದಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಶುಕ್ರವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಅಗರ್ತಲಾಕ್ಕೆ ಹಾರಲು ಸಿದ್ಧವಾಗಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(AAI)ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಡುಗು ಸಹಿತ ಭಾರೀ ಮಳೆಯ ನಡುವೆ ನಿಂತಿದ್ದ ವಿಮಾನಕ್ಕೆ ಸಿಡಿಲಿ ಬಡಿದಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಡಿಲು ಬಡಿದಾಗ ಇಂಡಿಗೋ ವಿಮಾನ 6E6068(VT-IPW ಏರೋಬ್ರಿಡ್ಜ್ 56L ನಲ್ಲಿ ನಿಂತಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ, ವಿಮಾನಯಾನ ಸಂಸ್ಥೆಯು, ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿತು. ನಂತರ ಅವರು ಮತ್ತೊಂದು ವಿಮಾನದಲ್ಲಿ(VT-ICD) ಪ್ರಯಾಣ ಮುಂದುವರೆಸಿದರು ಎಂದು ಅಧಿಕಾರಿ ಹೇಳಿದ್ದಾರೆ.

ಇಂಡಿಗೋ ಪ್ರಕಾರ, ಇಬ್ಬರು ಗ್ರೌಂಡ್ ಸಿಬ್ಬಂದಿಗೆ ಸ್ವಲ್ಪ "ಎಫೆಕ್ಟ್" ಆಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ನಂತರ ಅವರನ್ನು "ಸಾಮಾನ್ಯ" ಎಂದು ಘೋಷಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ಕೋಲ್ಕತ್ತಾ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಾಹನ ಸಂಚಾರ ಅಡಚಣೆ ಉಂಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರೆಂಟಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ

TMC ಬ್ಯಾಂಕ್ ಖಾತೆಯಲ್ಲಿ ರೂ. 675 ಕೋಟಿ ಹಣ: 'ಪಾರ್ಟಿ ಫಂಡ್‌ ನಿಯಂತ್ರಣದ ಮೇಲೆ ಬಂಡಾಯ ಬಣ ಕಣ್ಣು! ಆಂತರಿಕ ಸಂಘರ್ಷ ಮತ್ತಷ್ಟು ತೀವ್ರ

ಕ್ರಾಸ್ ವೋಟಿಂಗ್: ಬಿ.ವೈ ವಿಜಯೇಂದ್ರ, ಆರ್ ಅಶೋಕಗೆ ಹೈಕಮಾಂಡ್ ಬುಲಾವ್; ಯಾರ ತಲೆದಂಡವಾಗುತ್ತೆ?

ಆಕೆ 'ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು: Trump ವಿವಾದಾತ್ಮಕ ಹೇಳಿಕೆ, ಮೆಲೋನಿ ಛೀಮಾರಿ! Video

ಬೆಂಗಳೂರು: ಪೊಲೀಸ್ ID Card ತೋರಿಸಿ 20 ಲಕ್ಷ ರೂ. ದರೋಡೆ! CID ಇನ್ಸ್ ಪೆಕ್ಟರ್ ಪರಾರಿ, ತೀವ್ರ ಹುಡುಕಾಟ