ಆದಿತ್ಯ ಠಾಕ್ರೆ 
ದೇಶ

ನಿರ್ಲಜ್ಜವಾಗಿ ನಿಷ್ಠೆ-ಗೌರವ ಮಾರಾಟ; ದುರಾಸೆಯಿಂದ ಜನಾದೇಶಕ್ಕೆ ದ್ರೋಹ: ಆದಿತ್ಯ ಠಾಕ್ರೆ ವಾಗ್ದಾಳಿ

ಪಕ್ಷಾಂತರ ಮಾಡಿದ ದುರಾಶೆಯ ಸಂಸದರೇ, ನೀವು ಈ ಕೆಳಗಿನ ವಿಷಯಗಳನ್ನು ಮೊದಲಿಗಿಂತಲೂ ಹೆಚ್ಚು ಬಲವಾಗಿ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ನಿಷ್ಠೆ, ಗೌರವವನ್ನು ಅತ್ಯಂತ ನಿರ್ಲಜ್ಜವಾಗಿ ಮಾರಾಟಕ್ಕಿಟ್ಟಿದ್ದೀರಿ. ಸರ್ಕಾರವು ಪಕ್ಷಪಾತಿಯಾಗಿದೆ.

ಮುಂಬಯಿ: ಮಹಾರಾಷ್ಟ್ರದಲ್ಲಿ ಆಪರೇಷನ್ ಟೈಗರ್​ಗೆ ಠಾಕ್ರೆ ಬಣದ ಆರು ಸಂಸದರು ಬಲಿಯಾಗಿರುವ ನಡುವೆಯೇ ಸೋಮವಾರಪಕ್ಷದ ಬಂಡಾಯ ಸಂಸದರ ವಿರುದ್ಧ ಆದಿತ್ಯ ಠಾಕ್ರೆತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ತಮ್ಮ ಸ್ಥಾನ, ನಿಷ್ಠೆ ಹಾಗೂ ಖ್ಯಾತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪಕ್ಷ ಬದಲಾಯಿಸಿದ ಸಂಸದರು ಮಹಾ ವಿಕಾಸ್ ಅಘಾಡಿ ಮತ್ತು ಇಂಡಿಯಾ ಬ್ಲಾಕ್ ವೇದಿಕೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಆದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷಾಂತರ ಮಾಡಿದ ದುರಾಶೆಯ ಸಂಸದರೇ, ನೀವು ಈ ಕೆಳಗಿನ ವಿಷಯಗಳನ್ನು ಮೊದಲಿಗಿಂತಲೂ ಹೆಚ್ಚು ಬಲವಾಗಿ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ನಿಷ್ಠೆ, ಗೌರವವನ್ನು ಅತ್ಯಂತ ನಿರ್ಲಜ್ಜವಾಗಿ ಮಾರಾಟಕ್ಕಿಟ್ಟಿದ್ದೀರಿ. ಸರ್ಕಾರವು ಪಕ್ಷಪಾತಿಯಾಗಿದೆ.

ಸಾರ್ವಜನಿಕರ ಹಣವನ್ನು ರಾಜಕೀಯವಾಗಿ ನಿಧಿಗಳಂತೆ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.ಈಗ ಪಕ್ಷ ಬದಲಾಯಿಸುತ್ತಿರುವವರೆಲ್ಲರೂ ಎನ್‌ಡಿಎ ವಿರುದ್ಧವಾಗಿ, ಎಂವಿಎ ಮತ್ತು ಇಂಡಿಯಾ ಮೈತ್ರಿಕೂಟದಡಿ ಗೆಲುವು ಸಾಧಿಸಿದ್ದಾರೆ. ಇವರೆಲ್ಲರಿಗೂ ಚುನಾವಣೆಯಲ್ಲಿ ಶಿವಸೇನೆ(ಯುಬಿಟಿ), ಕಾಂಗ್ರೆಸ್, ಎನ್​ಸಿಪಿ(ಎಸ್​ಪಿ) ಪಕ್ಷಗಳ ನಾಯಕರು ಪ್ರಚಾರ ಮಾಡಿದ್ದರು. ಈಗ ಸೈದ್ಧಾಂತಿಕ ವಾದಗಳ ಮೂಲಕ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್