ಧಾನಿ ನರೇಂದ್ರ ಮೋದಿ ಅವರಿಗೆ ಸೆಶೆಲ್ಸ್ ದೇಶವು ಪ್ರದಾನ ಮಾಡಿದ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಗೌರವ ಕುರಿತು ಕಾಂಗ್ರೆಸ್ ನಾಯಕಿ ಟೀಕೆ 
ದೇಶ

'ಜನರ ತೆರಿಗೆ ದುಡ್ಡಲ್ಲಿ ಪ್ರಧಾನಿ ಮೋದಿ ಫಾರಿನ್ ಟ್ರಿಪ್ ಮಾಡ್ತಾರೆ, ಪ್ರಶಸ್ತಿ ಕೊಟ್ಟರೆ ಓಡಿ ಹೋಗಿ ತಗೊಳ್ತಾರೆ': ವಿರೋಧ ಪಕ್ಷಗಳ ಟೀಕೆ

ಪ್ರಧಾನ ಮಂತ್ರಿ ಮೋದಿಗೆ ಪ್ರಶಸ್ತಿಗಳು ತುಂಬಾ ಇಷ್ಟ. ವಿದೇಶ ಪ್ರವಾಸಗಳೂ ಅಷ್ಟೇ ಇಷ್ಟ. ಅವರು ನಮ್ಮ ತೆರಿಗೆದಾರರ ಹಣದಿಂದ ಸೆಶೆಲ್ಸ್ ದೇಶಕ್ಕೆ 500 ಕೋಟಿ ರೂಪಾಯಿ ಅನುದಾನ ಮತ್ತು 1,250 ಕೋಟಿ ರೂಪಾಯಿ ಸಾಲದ ನೆರವು ನೀಡಿ ಪ್ರಶಸ್ತಿ ತೆಗೆದುಕೊಂಡರು ಎಂದು ವ್ಯಂಗ್ಯವಾಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಶೆಲ್ಸ್ ದೇಶವು ಪ್ರದಾನ ಮಾಡಿದ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಗೌರವದ ಕುರಿತು ವಿರೋಧ ಪಕ್ಷದ ನಾಯಕರು ಭಾರೀ ಟೀಕೆ ಮಾಡುತ್ತಿದ್ದಾರೆ. ಪ್ರಶಸ್ತಿಯ ಪ್ರಮಾಣಪತ್ರದಲ್ಲಿರುವ ಕಾಗುಣಿತದ ದೋಷಗಳನ್ನು ಉಲ್ಲೇಖಿಸಿ ಅದರ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಪ್ರಶಸ್ತಿಗಳು ತುಂಬಾ ಇಷ್ಟ. ವಿದೇಶ ಪ್ರವಾಸಗಳೂ ಅಷ್ಟೇ ಇಷ್ಟ. ಅವರು ನಮ್ಮ ತೆರಿಗೆದಾರರ ಹಣದಿಂದ ಸೆಶೆಲ್ಸ್ ದೇಶಕ್ಕೆ 500 ಕೋಟಿ ರೂಪಾಯಿ ಅನುದಾನ ಮತ್ತು 1,250 ಕೋಟಿ ರೂಪಾಯಿ ಸಾಲದ ನೆರವು ನೀಡಿದರು. ಪ್ರತಿಯಾಗಿ ಸೆಶೆಲ್ಸ್ ಕಾಗುಣಿತದ ತಪ್ಪುಗಳಿರುವ ಪ್ರಮಾಣಪತ್ರವೊಂದನ್ನು ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊನ್ನೆ ಭಾನುವಾರ ಸೆಶೆಲ್ಸ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಅವರು 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಸೆಶೆಲ್ಸ್ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೋದಿ ಅವರಿಗೆ, ಪರಿಸರ ಸಂರಕ್ಷಣೆಯತ್ತ ತೋರಿದ ಬದ್ಧತೆ ಹಾಗೂ ಸಣ್ಣ ದ್ವೀಪ ರಾಷ್ಟ್ರಗಳ ಆಶಯಗಳನ್ನು ಮುನ್ನಡೆಸಿದ ಕೊಡುಗೆಗಾಗಿ ಈ ಗೌರವ ನೀಡಲಾಗಿದೆ.

ಆದರೆ, ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶಸ್ತಿಯ ಪ್ರಮಾಣಪತ್ರದಲ್ಲಿನ ಕಾಗುಣಿತದ ತಪ್ಪುಗಳನ್ನು ಗಮನಿಸಿದ್ದಾರೆ. ಅದರಲ್ಲಿ 'Republic' ಎಂಬ ಪದವನ್ನು 'Repubblic' ಎಂದು ಹಾಗೂ 'Seychelles' ಅನ್ನು 'Seycheeles' ಎಂದು ತಪ್ಪಾಗಿ ಮುದ್ರಿಸಲಾಗಿದೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಕೂಡ ಪ್ರಧಾನಿ ಮೋದಿ ಅವರನ್ನು ಟೀಕಿಸಿ, ಅವಸರದಲ್ಲಿ ಪ್ರಶಸ್ತಿ ಸಿದ್ಧಪಡಿಸಿದ್ದರಿಂದ ಅದರ ಮೇಲಿನ ದೇಶದ ಹೆಸರನ್ನೇ ತಪ್ಪಾಗಿ ಮುದ್ರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುಮಾರು 1.30 ಲಕ್ಷ ಜನಸಂಖ್ಯೆಯ ಸೆಶೆಲ್ಸ್ ದೇಶ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಎಂಬ ಹೊಸ ಪ್ರಶಸ್ತಿಯನ್ನು ಸೃಷ್ಟಿಸಿ ನರೇಂದ್ರ ಮೋದಿ ಅವರಿಗೆ ನೀಡಿದೆ. ಈ ಪ್ರಶಸ್ತಿಯನ್ನು ಈ ಹಿಂದೆ ಯಾರಿಗೂ ನೀಡಲಾಗಿರಲಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಇದೇ ವೇಳೆ, ಇದಕ್ಕೂ ಮೊದಲು ಇಸ್ರೇಲ್ ಸಹ ಇದೇ ರೀತಿಯ ವಿಶೇಷ ಗೌರವ ನೀಡಿತ್ತು. ಅದಕ್ಕೂ ಮೊದಲು ಕೆಲ ವಿದೇಶಿಗರು ಫಿಲಿಪ್ ಕೋಟ್ಲರ್ ಪ್ರಶಸ್ತಿಯನ್ನು ನೀಡಿದ್ದರು. ಈ ಪ್ರಶಸ್ತಿಗಳನ್ನೂ ಮೋದಿ ಅವರಿಗಿಂತ ಮೊದಲು ಅಥವಾ ನಂತರ ಬೇರೆ ಯಾರಿಗೂ ನೀಡಲಾಗಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕ ವಿಜಯ್ ವಸಂತ್ , ಸೆಶೆಲ್ಸ್ ಈ ಪ್ರಶಸ್ತಿಯನ್ನು ಘೋಷಿಸಿದ ಕೇವಲ ನಾಲ್ಕು ದಿನಗಳಲ್ಲೇ ಪ್ರಧಾನಿ ಮೋದಿ ಅದನ್ನು ಸ್ವೀಕರಿಸಲು ಅಲ್ಲಿಗೆ ತೆರಳಿದ್ದರು ಎಂದು ಉಲ್ಲೇಖಿಸಿದ್ದಾರೆ.

ಈ ಭೇಟಿ 1,500 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆಯೊಂದಿಗೂ ಹೊಂದಿಕೆಯಾಗಿರುವುದು ಗಮನಾರ್ಹ. ಈ ಪ್ರಶಸ್ತಿ ತುಂಬಾ ವಿಶಿಷ್ಟವಾಗಿದೆ. ಇದನ್ನು ಈ ಹಿಂದೆ ಯಾರೂ ಪಡೆದಿಲ್ಲ, ಬಹುಶಃ ಮುಂದೆಯೂ ಯಾರಿಗೂ ಸಿಗದಿರಬಹುದು ಎಂದು ಅವರು ಟೀಕಿಸಿದ್ದಾರೆ.

ಟಿಎಂಸಿ ನಾಯಕ ಸಾಕೇತ್ ಗೋಖಲೆ ಈ ಬೆಳವಣಿಗೆಯನ್ನು ರಾಷ್ಟ್ರಕ್ಕೆ ದೊಡ್ಡ ಅವಮಾನ ಎಂದು ಕರೆದಿದ್ದಾರೆ.

ಸೆಶೆಲ್ಸ್ ನಿಂದ ಮೋದಿ ಅವರಿಗೆ ದೊರೆತಿರುವ ಈ ಹೊಸ ವಿದೇಶಿ ಪ್ರಶಸ್ತಿ ಎಷ್ಟು 'ಪ್ರತಿಷ್ಠಿತ' ಎಂದರೆ, ಅದು ಅಕ್ಷರಶಃ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದಂತಿದೆ. ಜೂನ್ 24ರಂದು ಈ ಪ್ರಶಸ್ತಿಯನ್ನು ರಚಿಸಲಾಯಿತು. ಕೇವಲ ನಾಲ್ಕು ದಿನಗಳ ನಂತರ ಅದನ್ನು ಮೋದಿ ಅವರಿಗೆ ನೀಡಲಾಯಿತು. ಆಶ್ಚರ್ಯಕರ ಸಂಗತಿ ಎಂದರೆ, ಪ್ರಶಸ್ತಿಯ ಪ್ರಮಾಣಪತ್ರದಲ್ಲೇ 'Republic' ಮತ್ತು 'Seychelles' ಪದಗಳ ಕಾಗುಣಿತ ತಪ್ಪಾಗಿದೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮೋದಿ ಅವರು ಭೇಟಿ ನೀಡುವ ಪ್ರತಿಯೊಂದು ದೇಶದಿಂದಲೂ ನಾಗರಿಕ ಗೌರವ ನಿರೀಕ್ಷಿಸುತ್ತಾರೆ. ಇದನ್ನು ಅರಿತಿರುವ ಕೆಲವು ದೇಶಗಳು ಅವರನ್ನು ಸಂತೋಷಪಡಿಸಲು ಹೊಸ ಹೊಸ ಪ್ರಶಸ್ತಿಗಳನ್ನೇ ಸೃಷ್ಟಿಸುತ್ತಿವೆ. ಮೋದಿ ಅವರ ಕೀಳರಿಮೆ ಮತ್ತು ದುರ್ಬಲ ಅಹಂ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಮುಜುಗರ ಉಂಟುಮಾಡುತ್ತಿದೆ ಎಂದು ಗೋಖಲೆ ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಭಾರತದ ಜಲ ಬಾಂಬ್‌ಗೆ ಪಾಕ್ ನಡುಕ": ನಮ್ಮ ಪಾಲಿನ ನೀರು ಮುಟ್ಟಿದರೆ ಆ ಕೈಗಳನ್ನೇ ಕತ್ತರಿಸುತ್ತೇವೆ- ಶತ್ರು ರಾಷ್ಟ್ರದಿಂದ ಮತ್ತೆ ಗೊಡ್ಡು ಬೆದರಿಕೆ..!

'One Nation, One Election' ಮಸೂದೆ ಮತ್ತಷ್ಟು ವಿಳಂಬ?: ಮುಂಗಾರು ಅಧಿವೇಶನದಲ್ಲೂ JPC ವರದಿ ಅನುಮಾನ..!

ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿ: ಪ್ರಧಾನಿ ಮೋದಿಗೆ ಮತ್ತೆ ಅಮೆರಿಕ ಆಹ್ವಾನ, ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ..!

JDS ನಲ್ಲಿ ಇರೋದೆ 18 ಶಾಸಕರು, ಅವರಿಗೆ 70-80 ಕ್ಷೇತ್ರ ಬೇಕಂತೆ! ಸ್ವರೂಪ್ ರಾಜಕೀಯಕ್ಕೆ ಹೊಸಬ- ಪ್ರತಿದಿನ 'ಲಾಟರಿ' ಹೊಡೆಯಲ್ಲ; ಪ್ರೀತಂಗೌಡ

BJP vs BJP: ಮುತ್ತಪ್ಪ ರೈ ಕೈಕೆಳಗೆ ಲೂಟಿ ಹೊಡೆಯುತ್ತಿದ್ದ ವ್ಯಕ್ತಿಗೆ ದುಡ್ಡಿನ ಅಮಲು; ವಿಶ್ವನಾಥ್ ವಿರುದ್ಧ ಡಿವಿಎಸ್ ವಾಗ್ದಾಳಿ