ಕೆನಡಾ ಪ್ರಧಾನಿ ಕಾರ್ನಿಯೊಂದಿಗೆ ಪ್ರಧಾನಿ ಮೋದಿ 
ದೇಶ

ಕೆನಡಾ ಪ್ರಧಾನಿ ಕಾರ್ನಿಯೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ; ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ

ಮಾತುಕತೆಯ ಸಮಯದಲ್ಲಿ, ಉಭಯ ನಾಯಕರು ಭಾರತ-ಕೆನಡಾ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ನಡುವಿನ ಬಲವಾದ ಸಹಕಾರ ಮತ್ತು ಪಾಲುದಾರಿಕೆಯ ಮೇಲೆ ಉಭಯ ನಾಯಕರು ಕೇಂದ್ರೀಕರಿಸಿದರು.

ದ್ವಿಪಕ್ಷೀಯ ಪಾಲುದಾರಿಕೆ ಬಲಪಡಿಸುವ ಸಂಬಂಧ ಇಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಮಾತುಕತೆ ನಡೆಸಿದರು.

ಮಾತುಕತೆಯ ಸಮಯದಲ್ಲಿ, ಉಭಯ ನಾಯಕರು ಭಾರತ-ಕೆನಡಾ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು.

ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಕಾರ್ನಿ ಅವರು ಫೆಬ್ರವರಿ 27 ರಂದು ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದು, ಇದು ಕಾರ್ನಿ ಇಂದು ಸಂಜೆ ನಿರ್ಗಮಿಸಲಿದ್ದಾರೆ.

ಇಂದು ಬೆಳಗ್ಗೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೆನಡಾ ಪ್ರಧಾನಿಯನ್ನು ಭೇಟಿ ಮಾಡಿ ಎರಡೂ ದೇಶಗಳ ನಡುವೆ ಭವಿಷ್ಯದ ಪಾಲುದಾರಿಕೆಯನ್ನು ರೂಪಿಸುವ ಅವರ ಬದ್ಧತೆಯನ್ನು ಶ್ಲಾಘಿಸಿದರು.

"ಇಂದು ಬೆಳಗ್ಗೆ ನವದೆಹಲಿಯಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಜೆ ಕಾರ್ನಿ ಅವರನ್ನು ಭೇಟಿ ಮಾಡಿದೆ. ಭವಿಷ್ಯದ ಪಾಲುದಾರಿಕೆಯನ್ನು ರೂಪಿಸುವ ಬಗ್ಗೆ ಅವರ ಬದ್ಧತೆಯನ್ನು ಶ್ಲಾಘಿಸುತ್ತೇನೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ-ಸಮೃದ್ಧಿಗೆ ‘ವಿಶ್ವಾಸಾರ್ಹ ಪಾಲುದಾರಿಕೆ’ ಅಗತ್ಯ: Quad ಸಭೆಯಲ್ಲಿ ಜೈಶಂಕರ್‌ ಮಹತ್ವದ ಕರೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

SCROLL FOR NEXT