ಸಾಂದರ್ಭಿಕ ಚಿತ್ರ 
ದೇಶ

ಕೊಚ್ಚಿಯಲ್ಲಿ ಇರಾನ್ ಹಡಗಿನ ಫೋಟೋ, ವಿಡಿಯೋ ಮಾಡಿದ ಟಿವಿ ವರದಿಗಾರ, ಕ್ಯಾಮೆರಾಮನ್ ಬಂಧನ

ಬಂದರಿನ ಪೊಲೀಸರು ಪ್ರಮುಖ ಟಿವಿ ಚಾನೆಲ್‌ನ ವರದಿಗಾರ, ಅದರ ಕ್ಯಾಮೆರಾಮನ್ ಮತ್ತು ಸ್ಪೀಡ್ ಬೋಟ್ ಚಾಲಕನನ್ನು ಬಂಧಿಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೊಚ್ಚಿ: ಕೊಚ್ಚಿಯಲ್ಲಿರುವ ಕೊಚ್ಚಿನ್ ಬಂದರಿನ ಹೈ ಸೆಕ್ಯುರಿಟಿ ವಲಯಕ್ಕೆ ಶನಿವಾರ ಅಕ್ರಮವಾಗಿ ಪ್ರವೇಶಿಸಿ ಇರಾನ್ ಹಡಗಿನ ಫೋಟೋ ಮತ್ತು ವಿಡಿಯೋಗಳನ್ನು ತೆಗೆದ ಆರೋಪದ ಮೇಲೆ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ದೋಣಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು, ಭಾರತ ಸರ್ಕಾರದ ರಾಜತಾಂತ್ರಿಕ ನಿರ್ಧಾರದ ಭಾಗವಾಗಿ ಇಲ್ಲಿ ಲಂಗರು ಹಾಕಿದ ಇರಾನಿನ ಹಡಗಿನ ಛಾಯಾಚಿತ್ರ ಮತ್ತು ವಿಡಿಯೋ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂದರಿನ ಪೊಲೀಸರು ಪ್ರಮುಖ ಟಿವಿ ಚಾನೆಲ್‌ನ ವರದಿಗಾರ, ಅದರ ಕ್ಯಾಮೆರಾಮನ್ ಮತ್ತು ಸ್ಪೀಡ್ ಬೋಟ್ ಚಾಲಕನನ್ನು ಬಂಧಿಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಆರೋಪಿಗಳು ಇಂದು ಬೆಳಗ್ಗೆ 7.50 ರ ಸುಮಾರಿಗೆ ವಿಲ್ಲಿಂಗ್ಟನ್ ದ್ವೀಪದಲ್ಲಿರುವ ಕೊಚ್ಚಿನ್ ಬಂದರಿನ ಹೈ ಸೆಕ್ಯುರಿಟಿ ಪ್ರದೇಶವಾದ ಸದರ್ನ್ ಕಾಯಿಲ್ ಬರ್ತ್(SCB)ಗೆ ಕಾನೂನುಬಾಹಿರವಾಗಿ ಪ್ರವೇಶಿಸಿದ್ದಾರೆ.

ಆರೋಪಿಗಳು ತಾವು ಮಾಡಿದ ವಿಡಿಯೋದ ದೃಶ್ಯಗಳನ್ನು ಪ್ರಸಾರ ಮಾಡಲು ಪ್ರಯತ್ನಿಸಿದ್ದು, ಇದು ದೇಶದ, ವಿಶೇಷವಾಗಿ ರಾಜ್ಯದ ಭದ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಬಂದರು ಅಪರಾಧ ಪೊಲೀಸರು. ಬಿಎನ್‌ಎಸ್‌ನ ಸೆಕ್ಷನ್ 329 (3) (ಕ್ರಿಮಿನಲ್ ಅತಿಕ್ರಮಣ) ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!