ಹಿಂದೂಗಳ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ 
ದೇಶ

'ನಾವಿರೋದ್ರಿಂದ ಹಿಂದೂಗಳು ಸುರಕ್ಷಿತ.. ಇಲ್ಲ ಅಂದ್ರೆ ಆ ಸಮುದಾಯದವ್ರು ಮುಗಿಸಿಬಿಡುತ್ತಿದ್ದರು': Mamata Banerjee ಹೇಳಿಕೆ, ಬಿಜೆಪಿ ಕಿಡಿ

ಟಿಎಂಸಿ ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹೇಳಿಕೆಗಳನ್ನು ನೀಡಿದ್ದು, ಈ ಹೇಳಿಕೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಇರುವುದರಿಂದಲೇ ಹಿಂದೂಗಳು ಸುರಕ್ಷಿತವಾಗಿದ್ದು, ಒಂದೇ ವೇಳೆ ನಮ್ಮ ಸರ್ಕಾರ ಇಲ್ಲದೇ ಹೋಗಿದ್ದರೆ ಆ ಸಮುದಾಯದವರು ಒಂದೇ ಸೆಕೆಂಡಿನಲ್ಲಿ ಮುಗಿಸಿಬಿಡುತ್ತಿದ್ದರು ಎಂಬ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್ 9, 2026 ರಂದು ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಹೇಳಿಕೆಗಳನ್ನು ನೀಡಿದ್ದು, ಈ ಹೇಳಿಕೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ನಡೆದ ಧರಣಿಯಲ್ಲಿ, ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, "ನಾವು ಅಸ್ತಿತ್ವದಲ್ಲಿದ್ದೇವೆ, ಅದಕ್ಕಾಗಿಯೇ ನೀವೆಲ್ಲರೂ ಸುರಕ್ಷಿತರಾಗಿದ್ದೀರಿ. ನಾವು ಇಲ್ಲಿ ಇಲ್ಲದಿದ್ದರೆ, ಒಂದು ನಿರ್ದಿಷ್ಟ ಸಮುದಾಯವು ಗುಂಪಾಗಿ ಒಟ್ಟುಗೂಡಿ ನಿಮ್ಮನ್ನು ಸುತ್ತುವರೆದು ಒಂದು ಸೆಕೆಂಡಿನಲ್ಲಿ ಮುಗಿಸಿಬಿಡುತ್ತಿದ್ದರು ಎಂದು ಹೇಳಿದ್ದಾರೆ.

ಬಿಜೆಪಿ ಆಕ್ರೋಶ, ಕ್ರಮಕ್ಕೆ ಚುನಾವಣಾ ಆಯೋಗಕ್ಕೆ ಪಟ್ಟು

ಇನ್ನು ಬಂಗಾಳಿ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಮಾಡಲಾದ ಈ ಹೇಳಿಕೆಯನ್ನು ಬಂಗಾಳ ಬಿಜೆಪಿ ತೀವ್ರ ವಿರೋಧಿಸಿದ್ದು, 2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೋಮು ವಿಭಜನೆಯನ್ನು ಹುಟ್ಟುಹಾಕುವ ಪ್ರಯತ್ನ ಎಂದು ಟೀಕಿಸಿದೆ.

ಬಿಜೆಪಿ ನಾಯಕರು ಮತ್ತು ನೆಟಿಜನ್‌ಗಳು ಟಿಎಂಸಿ ಅಧಿಕಾರದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಂತೆ ಹಿಂದೂ ದ್ವೇಷವನ್ನು ಆಶ್ರಯಿಸುತ್ತಿದೆ ಎಂದು ಆರೋಪಿಸಿದೆ.

ಬಂಗಾಳಿ ಹಿಂದೂಗಳಿಗೆ ಬಹಿರಂಗ ಎಚ್ಚರಿಕೆ

ಇನ್ನು ಇದೇ ವಿಚಾರವಾಗಿ ಟೀಕಾ ಪ್ರಹಾರವನ್ನೇ ನಡೆಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, 'ಇತ್ತೀಚಿನ ಸಾರ್ವಜನಿಕ ಭಾಷಣ ಅಥವಾ ಧರಣಿ ಕಾರ್ಯಕ್ರಮದ ಸಂದರ್ಭದಲ್ಲಿ ಬಂಗಾಳಿ ಹಿಂದೂಗಳಿಗೆ ಮಮತಾ ಬ್ಯಾನರ್ಜಿ "ಬಹಿರಂಗ ಎಚ್ಚರಿಕೆ" ನೀಡಿದ್ದಾರೆ.

ಇದು ತೃಣಮೂಲ ಪಕ್ಷದ ನೆಲದ ಬೆಂಬಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹತಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಅಂತಹ ಹೇಳಿಕೆಗಳ ಮೂಲಕ "ಬಹಿರಂಗ ಬಂಗಾಳಿ ಹಿಂದೂ ದ್ವೇಷ"ವನ್ನು ಆಶ್ರಯಿಸುತ್ತಿದೆ ಎಂದು ಭಂಡಾರಿ ಆರೋಪಿಸಿದ್ದಾರೆ. ಇದನ್ನು ವಿಶಾಲವಾದ ಧ್ರುವೀಕರಣದ ಭಾಗವಾಗಿ ರೂಪಿಸುತ್ತಿದೆ ಎಂದು ಭಂಡಾರಿ ಆರೋಪಿಸಿದ್ದಾರೆ.​

SIR ವಿರೋಧಿಸಿ ಧರಣಿ

ಇನ್ನು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಯ ಐದನೇ ದಿನದಂದು ಸಾಂಕೇತಿಕವಾಗಿ 'SIR' ಮತ್ತು 'Vanish' ಎಂಬ ಚಿತ್ರಗಳನ್ನು ಕಾಗದದ ಮೇಲೆ ಚಿತ್ರಿಸುತ್ತಿರುವುದು ಕಂಡುಬಂದಿದೆ.

ಈ ಮೂಲಕ ಮತದಾರರ ಅಳಿಸುವಿಕೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಧ್ಯ ಕೋಲ್ಕತ್ತಾದ ಮೆಟ್ರೋ ಚಾನೆಲ್‌ನಲ್ಲಿ ಧರಣಿ ವೇದಿಕೆಯಲ್ಲಿ, ಬ್ಯಾನರ್ಜಿ ಸ್ಟ್ಯಾಂಡ್‌ನಲ್ಲಿ ಇರಿಸಲಾದ ಹಸಿರು ಬೋರ್ಡ್‌ನಲ್ಲಿ ಬಣ್ಣಗಳಿಂದ ಚಿತ್ರಿಸುತ್ತಿರುವುದು ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel