ಸಾಂದರ್ಭಿಕ ಚಿತ್ರ 
ದೇಶ

ಜಾಗತಿಕ ಇಂಧನ ಬಿಕ್ಕಟ್ಟು: ಡೀಸೆಲ್ ಗಾಗಿ ಭಾರತದಿಂದ ನೆರವು ಕೋರಿದ ಬಾಂಗ್ಲಾದೇಶ! ಲಂಕಾ, ಮಾಲ್ಡೀವ್ಸ್ ನಿಂದಲೂ ಮನವಿ

ಬಾಂಗ್ಲಾದೇಶ ಪೆಟ್ರೋಲ್ ಮತ್ತು ಡೀಸೆಲ್‌ನ ತೀವ್ರ ಕೊರತೆ ಎದುರಿಸುತ್ತಿದ್ದು, ಭಾರತದಿಂದ ಡೀಸೆಲ್ ಪೂರೈಸುವಂತೆ ಮನವಿ ಸ್ವೀಕರಿಸಿರುವುದಾಗಿ ರಣಧೀರ್ ಜೈಸ್ವಾಲ್ ಗುರುವಾರ ತಿಳಿಸಿದ್ದಾರೆ.

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿರುವಂತೆಯೇ, ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಮನವಿ ಬಂದಿರುವುದಾಗಿ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ತಿಳಿಸಿದ್ದಾರೆ.

ಬಾಂಗ್ಲಾದೇಶ ಪೆಟ್ರೋಲ್ ಮತ್ತು ಡೀಸೆಲ್‌ನ ತೀವ್ರ ಕೊರತೆ ಎದುರಿಸುತ್ತಿದ್ದು, ಭಾರತದಿಂದ ಡೀಸೆಲ್ ಪೂರೈಸುವಂತೆ ಮನವಿ ಸ್ವೀಕರಿಸಿರುವುದಾಗಿ ಅವರು ಹೇಳಿದರು.

"ಭಾರತ ನಮ್ಮ ನೆರೆಹೊರೆ ರಾಷ್ಟ್ರಗಳಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಪ್ರಮುಖ ರಫ್ತುದಾರ ರಾಷ್ಟ್ರವಾಗಿದೆ. ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಜಲಮಾರ್ಗಗಳು, ರೈಲು ಮತ್ತು ಭಾರತ-ಬಾಂಗ್ಲಾದೇಶ ಫ್ರೆಂಡ್ ಶಿಪ್ ಪೈಪ್‌ಲೈನ್ ಮೂಲಕ ಬಾಂಗ್ಲಾದೇಶಕ್ಕೆ ಡೀಸೆಲ್ ಅನ್ನು ಪೂರೈಸುತ್ತಿದ್ದೇವೆ. ಅಂದಿನಿಂದ ಬಾಂಗ್ಲಾದೇಶಕ್ಕೆ ಡೀಸೆಲ್ ರಫ್ತು ಮುಂದುವರೆದಿದೆ ಎಂದು ಅವರು ತಿಳಿಸಿದರು.

ಬಾಂಗ್ಲಾದೇಶಕ್ಕೆ ಪೂರೈಕೆ ಮಾಡುವ ಮುನ್ನ ಭಾರತ ತನ್ನ ಡೀಸೆಲ್ ಲಭ್ಯತೆ ಮತ್ತು ಸಂಸ್ಕರಣಾ ಸಾಮರ್ಥ್ಯವನ್ನು ಪರಿಗಣಿಸುತ್ತದೆ. ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಿಂದಲೂ ಅಂತಹ ಮನವಿಗಳನ್ನು ಸ್ವೀಕರಿಸಿದ್ದೇವೆ ಎಂದು MEA ವಕ್ತಾರರು ತಿಳಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಿರಂತರವಾಗಿ ನಡೆಯುತ್ತಿರುವ ಇಂಧನ ವ್ಯಾಪಾರದ ಭಾಗವಾಗಿ ಭಾರತ-ಬಾಂಗ್ಲಾದೇಶ ಫ್ರೆಂಡ್ ಶಿಪ್ ಪೈಪ್‌ಲೈನ್ ಮೂಲಕ ಬಾಂಗ್ಲಾದೇಶಕ್ಕೆ ಡೀಸೆಲ್ ಪೂರೈಕೆ ಮಾಡಲಾಗುತ್ತಿದೆ ಎಂಬುದನ್ನು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

ಅಸ್ಸಾಂನ ನುಮಾಲಿಗಢ್ ಸಂಸ್ಕರಣಾಗಾರದಿಂದ ವಾಣಿಜ್ಯ ಆಧಾರದ ಮೇಲೆ ಬಾಂಗ್ಲಾದೇಶಕ್ಕೆ ಡೀಸೆಲ್ ಪೂರೈಸಲಾಗುತ್ತಿದೆ.

ಈ ಪೈಪ್‌ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಜಂಟಿಯಾಗಿ ಉದ್ಘಾಟಿಸಿದ್ದರು. ನುಮಾಲಿಗಢ್ ಸಂಸ್ಕರಣಾಗಾರದಿಂದ 2015 ರಿಂದ ಬಾಂಗ್ಲಾದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಕೆ ಮಾಡಲಾಗುತ್ತಿದೆ.

ನಿನ್ನೆ ಭಾರತದಿಂದ ಬಾಂಗ್ಲಾದೇಶಕ್ಕೆ 5,000 ಟನ್ ಡೀಸೆಲ್ ಆಮದು ಮಾಡಿಕೊಳ್ಳಲಾಗಿದೆ ಎಂದು ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಷನ್ (BPC) ಅಧ್ಯಕ್ಷ ಮುಹಮ್ಮದ್ ರೆಜಾನುರ್ ರೆಹಮಾನ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

80th Independence Day|ಯುವಜನತೆ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು: ಪ್ರಧಾನಿ ಮೋದಿ-Video

ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಡಿ ಕೆ ಶಿವಕುಮಾರ್ ಪ್ರಮುಖ ಘೋಷಣೆಗಳು-Video

'RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ': B L ಸಂತೋಷ್

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು