ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ 
ದೇಶ

'ನಾಮ್ ನರೇಂದರ್-ಕಾಮ್ ಸರೆಂಡರ್: ಅದಾನಿ, ಎಪ್‌ಸ್ಟೀನ್ ಕೇಸ್‌ನಿಂದ ಮೋದಿ ಪ್ಯಾನಿಕ್ ಆಗಿದ್ದಾರೆ, LPG ಸಂಕಷ್ಟದಿಂದಲ್ಲ'

ದೇಶದ ಜನರನ್ನು ಭಯಗೊಳ್ಳಬೇಡಿ ಎಂದು ಹೇಳುವ ಪ್ರಧಾನಿ ಎಪ್ಸ್ಟೀನ್ ಫೈಲ್ಸ್ ವಿಷಯ ಮತ್ತು ಅಮೆರಿಕದಲ್ಲಿನ ಅದಾನಿ ಪ್ರಕರಣದಿಂದಾಗಿ ಪ್ರಧಾನಿ ಭಯಭೀತರಾಗಿದ್ದಾರೆ, ಹೀಗಾಗಿ ಲೋಕಸಭೆ ಅಧಿವೇಶನಕ್ಕೆ ಬರುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿ: ಜನರನ್ನು ಭಯಭೀತರಾಗಬೇಡಿ ಎಂದು ಹೇಳುವ ಪ್ರಧಾನ ಮಂತ್ರಿ ವಿವಿಧ ಕಾರಣಗಳಿಂದಾಗಿ ಸ್ವತಃ ಒಳಗೊಳಗೆ ಭಯಗೊಂಡಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸಂಬಂಧ ಸರ್ಕಾರದಿಂದ ಉತ್ತರ ಕೋರಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು,

ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಜನರನ್ನು ಭಯಗೊಳ್ಳಬೇಡಿ ಎಂದು ಹೇಳುವ ಪ್ರಧಾನಿ ಎಪ್ಸ್ಟೀನ್ ಫೈಲ್ಸ್ ವಿಷಯ ಮತ್ತು ಅಮೆರಿಕದಲ್ಲಿನ ಅದಾನಿ ಪ್ರಕರಣದಿಂದಾಗಿ ಪ್ರಧಾನಿ ಭಯಭೀತರಾಗಿದ್ದಾರೆ, ಹೀಗಾಗಿ ಲೋಕಸಭೆ ಅಧಿವೇಶನಕ್ಕೆ ಬರುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರಧಾನಿ ಕುರ್ಚಿ ಖಾಲಿಯಿರುವುದನ್ನು ನಿನ್ನೆ ನೀವು ನೋಡಿದ್ದೀರಿ. ಆದ್ದರಿಂದ, ಅವರು ದೇಶಕ್ಕೆ ಭಯಭೀತರಾಗಬೇಡಿ ಎಂದು ಹೇಳುತ್ತಿದ್ದಾರೆ ಆದರೆ ಸ್ವತಃ ಭಯಭೀತರಾಗಿದ್ದಾರೆ" ಎಂದು ಗಾಂಧಿ ಹೇಳಿದರು.

ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿ, 'ನಾಮ್ ನರೇಂದರ್, ಕಾಮ್ ಸರೆಂಡರ್ ' ಮತ್ತು 'ಮೋದಿ ಜಿ, ಎಲ್‌ಪಿಜಿ' ಮುಂತಾದ ಘೋಷಣೆಗಳನ್ನು ಕೂಗಿದರು. ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಮಹಿಳಾ ಸಂಸದರು ಇಟ್ಟಿಗೆಯ ಅಡುಗೆ ಒಲೆಯೊಂದಿಗೆ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video