ಪ್ರಧಾನಿ ನರೇಂದ್ರ ಮೋದಿ 
ದೇಶ

ಜಾಗತಿಕ ಸಂಘರ್ಷಗಳ ಪರಿಣಾಮ ಕಡಿಮೆ ಮಾಡಲು ಸರ್ಕಾರ ಕೆಲಸ, ಕಾಂಗ್ರೆಸ್ ಭೀತಿ ಸೃಷ್ಟಿಸಲು ಯತ್ನ: ಪ್ರಧಾನಿ ಮೋದಿ

ಬರಾಕ್ ಕಣಿವೆ ಒಂದು ಕಾಲದಲ್ಲಿ ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಕೇಂದ್ರವಾಗಿತ್ತು. ಕಾಂಗ್ರೆಸ್ ಈಶಾನ್ಯವನ್ನು ತೊರೆದಂತೆಯೇ, ಬರಾಕ್ ಕಣಿವೆಯನ್ನು ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಸಿಲ್ಚಾರ್ (ಅಸ್ಸಾಂ): ಜಾಗತಿಕ ಸಂಘರ್ಷಗಳಿಂದಾಗುವ ಜನರ ಮೇಲಿನ ಪರಿಣಾಮಗಳನ್ನು ಕಡಿಮೆ ಮಾಡಲು ಕೇಂದ್ರವು ಕೆಲಸ ಮಾಡುತ್ತಿದೆ. ಆದರೆ, ದೇಶದಲ್ಲಿ ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುವ ಮೂಲಕ ವಿರೋಧ ಪಕ್ಷ ಕಾಂಗ್ರೆಸ್ 'ಬೇಜವಾಬ್ದಾರಿಯಿಂದ' ವರ್ತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದರು.

ಅಸ್ಸಾಂನ ಸಿಲ್ಚಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಈಶಾನ್ಯವನ್ನು ನಿರ್ಲಕ್ಷಿಸಿತು ಮತ್ತು ಸ್ವಾತಂತ್ರ್ಯದ ಸಮಯದಲ್ಲಿ ಗಡಿಗಳನ್ನು ರೂಪಿಸಲು ಅವಕಾಶ ಮಾಡಿಕೊಡುವ ಮೂಲಕ, ಬರಾಕ್ ಕಣಿವೆಯು ಸಮುದ್ರಕ್ಕೆ ನೇರ ಪ್ರವೇಶವನ್ನು ಕಳೆದುಕೊಂಡಿತು ಎಂದು ಆರೋಪಿಸಿದರು.

'ಜಗತ್ತು ಯುದ್ಧಗಳನ್ನು ಎದುರಿಸುತ್ತಿರುವಾಗ, ದೇಶದ ಜನರ ಮೇಲೆ ಅವುಗಳ ಪರಿಣಾಮವನ್ನು ಕಡಿಮೆ ಮಾಡುವುದು ನಮ್ಮ ಪ್ರಯತ್ನ. ಕಾಂಗ್ರೆಸ್ ಜವಾಬ್ದಾರಿಯುತ ರಾಜಕೀಯ ಪಕ್ಷದ ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ಆದರೆ, ಅದು ಹಾಗೆ ಮಾಡುವಲ್ಲಿ ವಿಫಲವಾಗಿದೆ. ಅದು ಜನರಲ್ಲಿ ಭೀತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ' ಎಂದು ದೂರಿದರು.

'ಅವರಿಗೆ ಅಸ್ಸಾಂ ಅಥವಾ ರಾಷ್ಟ್ರದ ಬಗ್ಗೆ ಯಾವುದೇ ದೃಷ್ಟಿಕೋನವಿಲ್ಲ. ಆದರೆ, ಮೋದಿಯನ್ನು ನಿಂದಿಸುವುದು, ವದಂತಿಗಳನ್ನು ಹರಡುವುದು ಮತ್ತು ಜನರನ್ನು ದಾರಿ ತಪ್ಪಿಸುವುದು ಹೇಗೆ ಎಂಬುದು ಮಾತ್ರ ತಿಳಿದಿದೆ' ಎಂದರು.

ಬರಾಕ್ ಕಣಿವೆ ಒಂದು ಕಾಲದಲ್ಲಿ ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಕೇಂದ್ರವಾಗಿತ್ತು. ಕಾಂಗ್ರೆಸ್ ಈಶಾನ್ಯವನ್ನು ತೊರೆದಂತೆಯೇ, ಬರಾಕ್ ಕಣಿವೆಯನ್ನು ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತ ಸ್ವತಂತ್ರಗೊಂಡಾಗ, ಬರಾಕ್ ಕಣಿವೆಯ ಸಮುದ್ರ ಪ್ರವೇಶವನ್ನು ಕಡಿತಗೊಳಿಸುವ ಗಡಿಯನ್ನು ಎಳೆಯಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿತು' ಎಂದು ಅವರು ಆರೋಪಿಸಿದರು.

'ಒಂದು ಕಾಲದಲ್ಲಿ ಕೈಗಾರಿಕಾ ಕೇಂದ್ರವೆಂದು ಹೆಸರಾಗಿದ್ದ ಬರಾಕ್ ಕಣಿವೆಯ ಶಕ್ತಿಯೇ ಆಗ ಕುಸಿಯಿತು. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಕಾಂಗ್ರೆಸ್ ಸರ್ಕಾರಗಳು ಅಧಿಕಾರದಲ್ಲಿದ್ದವು, ಆದರೆ ಈ ಪ್ರದೇಶವು ಅಭಿವೃದ್ಧಿ ಕಾಣಲಿಲ್ಲ. ಇಂದು ಬಿಜೆಪಿ ಸರ್ಕಾರ ಅದನ್ನು ಬದಲಿಸಲು ಕೆಲಸ ಮಾಡುತ್ತಿದೆ' ಎಂದು ಅವರು ಹೇಳಿದರು.

ರಾಜ್ಯದ ಯುವಕರನ್ನು ಕಾಂಗ್ರೆಸ್ ಹಿಂಸಾಚಾರ ಮತ್ತು ಭಯೋತ್ಪಾದನೆಯ ಹಾದಿಗೆ ತಳ್ಳಿದೆ. ಆದರೆ, ಬಿಜೆಪಿ ರಾಜ್ಯವು ಅವರಿಗೆ ಅವಕಾಶಗಳ ಸಾಗರವಾಗುವಂತೆ ನೋಡಿಕೊಂಡಿದೆ. ಕಾಂಗ್ರೆಸ್ ಕಾರ್ಯನಿರ್ವಹಿಸಲು ಅಥವಾ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದಾಗ, ಬಿಜೆಪಿ ಮಧ್ಯಪ್ರವೇಶಿಸಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಅಭಿವೃದ್ಧಿಯಲ್ಲಿ ಹಿಂದುಳಿದವರಿಗೆ ಆದ್ಯತೆ ನೀಡುವುದು ಬಿಜೆಪಿ ಮಂತ್ರವಾಗಿದೆ ಎಂದು ಪ್ರಧಾನಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video