ನರ್ತಕಿಯ ಪ್ರೇಕ್ಷಕರತ್ತ ಎಸೆದ ಗಾಯಕ 
ದೇಶ

ಇದೆಂತಾ ವಿಕೃತಿ..?: ವೇದಿಕೆ ಮೇಲಿಂದ ಮಹಿಳಾ ಡ್ಯಾನ್ಸರ್ ಳನ್ನು ಹೊತ್ತು ಪ್ರೇಕ್ಷಕರತ್ತ ಎಸೆದ ಗಾಯಕ! Video

ಭೋಜ್‌ಪುರಿ ಗಾಯಕ ಧನಂಜಯ್ ಶರ್ಮಾ ಮಹಿಳಾ ನರ್ತಕಿಯನ್ನು ದೈಹಿಕವಾಗಿ ಎತ್ತಿ ಜನಜಂಗುಳಿಯತ್ತ ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪಾಟ್ನಾ: ಆಘಾತಕಾರಿ ಬೆಳವಣಿಗೆಯಲ್ಲಿ ಭೋಜ್‌ಪುರಿ ಗಾಯಕನೋರ್ವ ಮಹಿಳಾ ಡ್ಯಾನ್ಸರ್ ಳನ್ನು ಹೊತ್ತು ಪ್ರೇಕ್ಷಕರತ್ತ ಎಸೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಭೋಜ್‌ಪುರಿ ಗಾಯಕ ಧನಂಜಯ್ ಶರ್ಮಾ ಮಹಿಳಾ ನರ್ತಕಿಯನ್ನು ದೈಹಿಕವಾಗಿ ಎತ್ತಿ ಜನಜಂಗುಳಿಯತ್ತ ಎಸೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಗಾಯಕನ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭೋಜ್‌ಪುರಿ ಗಾಯಕ ಧನಂಜಯ್ ಶರ್ಮಾ ಪ್ರದರ್ಶನ ನೀಡುತ್ತಿದ್ದಾಗ ವೇದಿಕೆಯ ಕೆಳಗಡೆ ಇದ್ದ ಜನ ಸಮೂಹ ಉತ್ಸಾಹದಿಂದ ಕೂಗುತ್ತಿದ್ದರು. ಒಂದೆಡೆ ಗಾಯಕ ಹಾಡು ಹಾಡುತ್ತಿದ್ದರೆ ಮತ್ತೊಂದೆಡೆ ಮಹಿಳಾ ನರ್ತಕಿ ಡ್ಯಾನ್ಸ್ ಮಾಡುತ್ತಿದ್ದರು.

ಈ ವೇಳೆ ನೋಡ ನೋಡುತ್ತಲೇ ಮಹಿಳಾ ಡ್ಯಾನ್ಸರ್ ರನ್ನು ಎತ್ತಿಕೊಂಡ ಗಾಯಕ ಧನಂಜಯ್ ಶರ್ಮಾ, ಆಕೆಯನ್ನು ವೇದಿಕೆಯ ಮುಂಭಾಗಕ್ಕೆ ಹೊತ್ತೊಯ್ದು ಕೆಳಗಿದ್ದ ಜನರ ಮೇಲೆ ಎಸೆಯುತ್ತಾರೆ.

ಈ ವೇಳೆ ಅಲ್ಲಿ ನೆರದಿದ್ದವರು ಆಕೆಯನ್ನು ಹಿಡಿದುಕೊಳ್ಳಲು ಮುಗಿಬೀಳುತ್ತಾರೆ. ಈ ವೇಳೆ ಕೆಳಗೆ ಬಿದ್ದ ಡ್ಯಾನ್ಸರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆಯಿಂದ ಡ್ಯಾನ್ಸರ್ ಆಘಾತಕ್ಕೊಳಗಾಗಿದ್ದಾರೆ.

ವ್ಯಾಪಕ ಆಕ್ರೋಶ

ಉತ್ತರ ಭಾರತದಲ್ಲಿ ಮಹಿಳಾ ನರ್ತಕಿಯರನ್ನು ಅಮಾನುಷವಾಗಿ ನಡೆಸಿಕೊಳ್ಳುವುದು ಸಾಮಾನ್ಯ.. ಸಾಕಷ್ಟು ಬಾರಿ ವೇದಿಕೆ ಮೇಲಿದ್ದ ನರ್ತಕಿಯನ್ನು ಎಳೆದುಕೊಂಡು ಪ್ರೇಕ್ಷಕರು ಕಿರುಕುಳ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಆದರೆ ಹಾಲಿ ಪ್ರಕರಣದಲ್ಲಿ ಗಾಯಕನೇ ನರ್ತಕಿಯನ್ನು ಪ್ರೇಕ್ಷಕರತ್ತ ಎಸೆದಿರುವುದು ಆತನ ವಿಕೃತ ಮನಸ್ಥಿತಿ ತೋರುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಗಾಯಕಿಯ ಒಪ್ಪಿಗೆ ಇಲ್ಲದೇ ಅಕೆಯನ್ನು ಮುಟ್ಟುವುದೇ ತಪ್ಪು.. ಅಂತಹುದರಲ್ಲಿ ಆಕೆಯನ್ನು ಜನ ಸಮೂಹದತ್ತ ಎಸೆದಿರುವುದು ಅಕ್ಷಮ್ಯ.. ಇದು ದೈಹಿಕ ಹಲ್ಲೆಯ ಸ್ಪಷ್ಟ ಪ್ರದರ್ಶನ ಮತ್ತು ಮಹಿಳಾ ಸುರಕ್ಷತೆಯ ಸಂಪೂರ್ಣ ನಿರ್ಲಕ್ಷ್ಯ ಎಂದು ಮತ್ತೆ ಕೆಲವರು ಕಿಡಿಕಾರಿದ್ದಾರೆ.

ಪೊಲೀಸ್ ಕ್ರಮ

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಬಿಹಾರ ಪೊಲೀಸರು ಅಧಿಕೃತವಾಗಿ ಮಧ್ಯಪ್ರವೇಶಿಸಿದ್ದಾರೆ. ವೈರಲ್ ಕ್ಲಿಪ್ ಅನ್ನು ಗಮನಿಸಿದ ಹಿರಿಯ ಅಧಿಕಾರಿಗಳು, ಈ ವಿಷಯದ ಬಗ್ಗೆ ತಕ್ಷಣದ ತನಿಖೆಯನ್ನು ಪ್ರಾರಂಭಿಸಲು ಮುಜಫರ್‌ಪುರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್