ಲೋಕಸಭೆ ಸ್ಪೀಕರ್ ಓಂ ಬಿರ್ಲಾ  
ದೇಶ

ಎಂಟು ಸಂಸದರ ಅಮಾನತು ರದ್ದು; ಇನ್ನು ಮುಂದೆ ಬ್ಯಾನರ್, ಪೋಸ್ಟರ್ ಪ್ರದರ್ಶಿಸದಂತೆ ಸ್ಪೀಕರ್ ಎಚ್ಚರಿಕೆ

ಹಲವಾರು ವಿರೋಧ ಪಕ್ಷದ ಸದಸ್ಯರ ಮನವಿಯ ನಂತರ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಸುಗಮ ಕಲಾಪಕ್ಕಾಗಿ 'ಲಕ್ಷ್ಮಣ ರೇಖೆ' ಬರೆಯುವ ಅವಶ್ಯಕತೆಯಿದೆ ಎಂದು ಹೇಳಿದರು.

ನವದೆಹಲಿ: ಫೆಬ್ರವರಿ 3 ರಂದು "ಅಶಿಸ್ತಿನ" ವರ್ತನೆಗಾಗಿ ವಿರೋಧ ಪಕ್ಷಗಳ ಎಂಟು ಸಂಸದರ ಅಮಾನತು ಆದೇಶವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದ್ದಾರೆ. ಆದರೆ ಸದನದ ಒಳಗೆ ಅಥವಾ ಸಂಸತ್ತಿನ ಸಂಕೀರ್ಣದಲ್ಲಿ ಯಾವುದೇ ಬ್ಯಾನರ್, ಪೋಸ್ಟರ್‌ಗಳು, ಫೋಟೋಗಳು ಅಥವಾ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸಂಸದ ಕೆ ಸುರೇಶ್ ಅವರು, ವಿರೋಧ ಪಕ್ಷಗಳ ಎಂಟು ಸದಸ್ಯರ ಅಮಾನತು ರದ್ದುಗೊಳಿಸುವಿಕೆಯನ್ನು ಪರಿಗಣಿಸುವಂತೆ ಸದನಕ್ಕೆ ಮನವಿ ಮಾಡಿದರು. ಸದನದಲ್ಲಿ ಏನಾಯಿತು ಎಂಬುದು ವಿಷಾದನೀಯ ಮತ್ತು ಸದನದ ಸುಗಮ ಕಾರ್ಯನಿರ್ವಹಣೆಗೆ ತಮ್ಮ ಪಕ್ಷವು ಸಹಕರಿಸಲು ಸಿದ್ಧ ಎಂದು ಹೇಳಿದರು.

ಹಲವಾರು ವಿರೋಧ ಪಕ್ಷದ ಸದಸ್ಯರ ಮನವಿಯ ನಂತರ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಸುಗಮ ಕಲಾಪಕ್ಕಾಗಿ 'ಲಕ್ಷ್ಮಣ ರೇಖೆ' ಬರೆಯುವ ಅವಶ್ಯಕತೆಯಿದೆ ಎಂದು ಹೇಳಿದರು ಮತ್ತು ಇದನ್ನು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯ ಒಪ್ಪಿಕೊಂಡರು.

ಸ್ಪೀಕರ್ ಬಿರ್ಲಾ ಅವರು ಸದನದಲ್ಲಿ ಅಥವಾ ಸಂಸತ್ತಿನ ಸಂಕೀರ್ಣದ ಒಳಗೆ ಯಾವುದೇ ಫಲಕಗಳು, ಪೋಸ್ಟರ್‌ಗಳು, ಫೋಟೋಗಳು ಅಥವಾ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಚಿತ್ರಗಳನ್ನು ಪ್ರದರ್ಶಿಸದಂತೆ ನೋಡಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ತಿನಲ್ಲಿ ಕಲಾಪಗಳು ಸುಗಮವಾಗಿ ನಡೆಯಬೇಕು ಮತ್ತು ಎಲ್ಲರೂ ಸಹಕರಿಸಬೇಕು ಎಂಬುದು ಎಲ್ಲರ ಅಭಿಪ್ರಾಯ ಎಂದು ಬಿರ್ಲಾ ಹೇಳಿದರು.

ನಂತರ ರಿಜಿಜು ಏಳು ಕಾಂಗ್ರೆಸ್ ಸಂಸದರು ಮತ್ತು ಒಬ್ಬ ಸಿಪಿಐ-ಎಂ ಸದಸ್ಯರ ಅಮಾನತು ರದ್ದುಗೊಳಿಸುವ ನಿರ್ಣಯವನ್ನು ಮಂಡಿಸಿದರು ಮತ್ತು ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.

ಕಾಂಗ್ರೆಸ್‌ ಸಂಸದರಾದ ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಸಿ ಕಿರಣ್ ಕುಮಾರ್ ರೆಡ್ಡಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಮ್ ಟ್ಯಾಗೋರ್, ಪ್ರಶಾಂತ್ ಪಡೋಲೆ ಮತ್ತು ಡೀನ್ ಕುರಿಯಾಕೋಸ್ ಹಾಗೂ ಸಿಪಿಐ(ಎಂ)ನ ಎಸ್. ವೆಂಟಕೇಸನ್ ಅವರನ್ನು ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿರುವ ಬಜೆಟ್ ಅಧಿವೇಶನದ ಸಂಪೂರ್ಣ ಅವಧಿಗೆ ಅಮಾನತುಗೊಳಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ ವೈರಲ್..! ಅಮಾನತು

'ಸಚಿವರೇ ಇಲ್ಲ.. ಏನ್ ಮಾಡ್ಬೇಕು..?' ಆಗ ಯುಟಿ ಖಾದರ್, ಈಗ ಹೊರಟ್ಟಿ..: ಅಧಿವೇಶನಕ್ಕೆ ಸಚಿವರ ಗೈರು ಕುರಿತು ಪರಿಷತ್ ಸಭಾಪತಿ ಅಸಮಾಧಾನ!

ಬಂಗಾಳ ಚುನಾವಣೆ: 291 ಸ್ಥಾನಗಳಲ್ಲಿ ಮಾತ್ರ TMC ಸ್ಪರ್ಧೆ; ಉಳಿದ ಸ್ಥಾನಗಳ ಕಥೆ ಏನು?

Bengaluru Rain: ಯುಗಾದಿ ಮುನ್ನವೇ ಬೆಂಗಳೂರಿನ ಗಾಳಿ ಸಹಿತ ಮಳೆ, ಸುರಿದ ಆಲಿಕಲ್ಲು.. 3-4 ದಿನ ವರ್ಷಧಾರೆ ಸಾಧ್ಯತೆ!

ಭಾರತದ ಪದವೀಧರರಲ್ಲಿ ಶೇ. 40 ರಷ್ಟು ಜನರಿಗೆ ಉದ್ಯೋಗ ಸಿಗುತ್ತಿಲ್ಲ: ವರದಿ

SCROLL FOR NEXT