ಕಂಗನಾ, ರಾಹುಲ್ ಗಾಂಧಿ 
ದೇಶ

ರಾಹುಲ್ ಗಾಂಧಿಯನ್ನು 'ಟಪೋರಿ' ಎಂದು ಕರೆದ ಕಂಗನಾ; ಕಾರಣ ಏನು ಗೊತ್ತಾ? Video

"ನಾವು ಮಹಿಳೆಯರು, ಅವರು(ರಾಹುಲ್ ಗಾಂಧಿ) ನಡೆದುಕೊಳ್ಳುವ ರೀತಿ ನೋಡಿದ್ರೆ ನಮಗೆ ತುಂಬಾ ಇರುಸುಮುರುಸಾಗುತ್ತದೆ. ಅವರು 'ಟಪೋರಿ'ಯಂತೆ ಬಂದು ಸಂದರ್ಶನಗಳನ್ನು ನೀಡುವವರನ್ನು ಕೆಣಕುತ್ತಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತರ ಸಂಸದರೊಂದಿಗೆ ವರ್ತಿಸಿದ ರೀತಿಯನ್ನು ಪ್ರಶ್ನಿಸಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಕಂಗನಾ ರನೌತ್ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ಸಂದರ್ಶನ ನೀಡುವವರನ್ನು "ಕೆಣಕುತ್ತಿದ್ದಾರೆ" ಎಂದು ಬುಧವಾರ ಆರೋಪಿಸಿದ್ದಾರೆ.

ANI ಜೊತೆ ಮಾತನಾಡಿದ ರನೌತ್, "ನಾವು ಮಹಿಳೆಯರು, ಅವರು(ರಾಹುಲ್ ಗಾಂಧಿ) ನಡೆದುಕೊಳ್ಳುವ ರೀತಿ ನೋಡಿದ್ರೆ ನಮಗೆ ತುಂಬಾ ಇರುಸುಮುರುಸಾಗುತ್ತದೆ. ಅವರು 'ಟಪೋರಿ'ಯಂತೆ ಬಂದು ಸಂದರ್ಶನಗಳನ್ನು ನೀಡುವವರನ್ನು ಕೆಣಕುತ್ತಾರೆ. ಆದರೆ ಅವರು ತಮ್ಮ ಸಹೋದರಿಯ ನಡವಳಿಕೆ ನೋಡಿ ಕಲಿಯಬೇಕು. ಇದು ನಾಚಿಕೆಗೇಡಿನ ಸಂಗತಿ" ಎಂದು ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಸಂಸತ್ತಿನ ಮಕರ ದ್ವಾರ ಪ್ರವೇಶದ್ವಾರದಲ್ಲಿ ಚಹಾ ಮತ್ತು ಬಿಸ್ಕತ್ತು ಸೇವಿಸಿದ ಘಟನೆಗೆ ಕ್ಷಮೆಯಾಚಿಸಬೇಕೆಂದು 84 ಮಾಜಿ ಅಧಿಕಾರಿಗಳು, 116 ಮಾಜಿ ಸೈನಿಕರು ಮತ್ತು ನಾಲ್ವರು ವಕೀಲರು ಪತ್ರ ಬರೆದ ನಂತರ ಕಂಗನಾ ಈ ಹೇಳಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್‌ಪಿ ವೈದ್ ನೇತೃತ್ವದಲ್ಲಿ ಬರೆದ ಪತ್ರದಲ್ಲಿ, ಮಾರ್ಚ್ 12 ರ ಘಟನೆ "ತೀವ್ರ ಕಳವಳಕಾರಿ" ಮತ್ತು "ಸಂಸದೀಯ ಅಧಿಕಾರದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯ" ಎಂದು ಹೇಳಲಾಗಿದೆ.

ಎಎನ್‌ಐ ಜೊತೆ ಮಾತನಾಡಿದ ಎಸ್‌ಪಿ ವೈದ್ ಅವರು, ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ವಿರೋಧ ಪಕ್ಷದ ನಾಯಕನ ನಡವಳಿಕೆಗೆ ತಕ್ಕುದಲ್ಲ ಮತ್ತು ಇದು ದುರಹಂಕಾರ"ವನ್ನು ತೋರಿಸುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್