ರಷ್ಯಾದ ಕಾರ್ಗೋ ಹಡಗು ಅಕ್ವ ಟೈಟಾನ್ 
ದೇಶ

ಹಾರ್ಮುಜ್ ಜಲಸಂಧಿ ಸಂಕಷ್ಟ: ನ್ಯೂ ಮಂಗಳೂರು ಬಂದರು ತಲುಪಿದ Pyxis Pioneer ಕಾರ್ಗೊ ಹಡಗು-Video

ರಷ್ಯನ್ ಕಚ್ಚಾ ತೈಲವನ್ನು ಹೊತ್ತಿದ್ದ ಈ ಹಡಗು ಮೂಲತಃ ಚೀನಾಕ್ಕೆ ತೆರಳುತ್ತಿತ್ತು. ಆದರೆ ಈ ವಾರದ ಆರಂಭದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಯು-ಟರ್ನ್ ತೆಗೆದುಕೊಂಡಿದೆ.

ಹಾರ್ಮುಜ್ ಜಲಸಂಧಿ ಸಂಕಷ್ಟದ ನಡುವೆಯಲ್ಲಿ, ರಷ್ಯಾದ ಕಾರ್ಗೋ ಹಡಗು ಅಕ್ವ ಟೈಟಾನ್ ಇಂದು ಭಾನುವಾರ ನ್ಯೂ ಮಂಗಳೂರು ಬಂದರಿಗೆ ತಲುಪಿದ್ದು, ಚೀನಾದಿಂದ ಭಾರತಕ್ಕೆ ಬರುತ್ತಿದ್ದ ಮಧ್ಯದಲ್ಲೇ ತನ್ನ ಮಾರ್ಗವನ್ನು ಬದಲಿಸಿಕೊಂಡಿದೆ. ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಸರಬರಾಜಿನಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ತೋರಿಸುತ್ತದೆ.

ರಷ್ಯನ್ ಕಚ್ಚಾ ತೈಲವನ್ನು ಹೊತ್ತಿದ್ದ ಈ ಹಡಗು ಮೂಲತಃ ಚೀನಾಕ್ಕೆ ತೆರಳುತ್ತಿತ್ತು. ಆದರೆ ಈ ವಾರದ ಆರಂಭದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಯು-ಟರ್ನ್ ತೆಗೆದುಕೊಂಡಿದೆ. ಬ್ಲೂಮ್ಬರ್ಗ್ ವರದಿ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಕನಿಷ್ಠ ಏಳು ಹಡಗುಗಳು ಇದೇ ರೀತಿ ಭಾರತಕ್ಕೆ ಮರುನಿರ್ದೇಶಿತವಾಗಿವೆ.

ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಣೆ ಮಾಡುತ್ತಿದ್ದ Pyxis Pioneer ಹಡಗು ಕೂಡ ಮಂಗಳೂರಿಗೆ ತಲುಪಿದ್ದು, ಭಾರತದ ಇಂಧನ ಸರಬರಾಜಿಗೆ ಬಲ ತುಂಬಿದೆ.

ಅಮೆರಿಕಾ–ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕ ಇಂಧನ ಮಾರ್ಗಗಳು ಅಸ್ತವ್ಯಸ್ತಗೊಂಡಿವೆ. ಆದರೆ ಇರಾನ್ ಜೊತೆ ಭಾರತದ ರಾಜತಾಂತ್ರಿಕ ಸಂಪರ್ಕದ ಪರಿಣಾಮ, ಭಾರತೀಯ ಧ್ವಜದ ಹಡಗುಗಳಿಗೆ ಈ ಪ್ರಮುಖ ಜಲಮಾರ್ಗದಲ್ಲಿ ಸಂಚಾರಕ್ಕೆ ಅನುಮತಿ ದೊರೆತಿದ್ದು, ಸರಬರಾಜಿನ ಆತಂಕವನ್ನು ಕಡಿಮೆ ಮಾಡಿದೆ.

ಇತ್ತೀಚೆಗೆ ನಂದಾ ದೇವಿ ಮತ್ತು ಶಿವಾಲಿಕ್ ಸೇರಿದಂತೆ ಇತರ ಎಲ್‌ಪಿಜಿ ಹಡಗುಗಳೂ ಅಪಾಯಕರ ಹಾರ್ಮುಜ್ ಮಾರ್ಗವನ್ನು ದಾಟಿ ಭಾರತೀಯ ಬಂದರುಗಳಿಗೆ ತಲುಪಿವೆ. ಶಿವಾಲಿಕ್ ಹಡಗು ಸೋಮವಾರ ಮುಂದ್ರಾಗೆ ತಲುಪಿದರೆ, ನಂದಾ ದೇವಿ ಮಂಗಳವಾರ ಬೆಳಗ್ಗೆ ಗುಜರಾತಿನ ಕಂದ್ಲಾ ಬಂದರಿಗೆ ತಲುಪಿದೆ.

ಈ ಎರಡು ಹಡಗುಗಳು ಒಟ್ಟು ಸುಮಾರು 92,712 ಟನ್ ಎಲ್‌ಪಿಜಿ ಸಾಗಿಸಿಕೊಂಡು ಬಂದಿದ್ದು, ಇದು ದೇಶದ ಒಂದು ದಿನದ ಅಡುಗೆ ಅನಿಲ ಅವಶ್ಯಕತೆಗೆ ಸಮಾನವಾಗಿದೆ. ಈ ಹಡಗುಗಳು ಮಾರ್ಚ್ 13ರಂದು ಪ್ರಯಾಣ ಆರಂಭಿಸಿ, ಮಾರ್ಚ್ 14ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿವೆ.

ಬಾಲ್ಟಿಕ್ ಸಮುದ್ರದ ಬಂದರಿನಿಂದ ಜನವರಿ ಕೊನೆಯಲ್ಲಿ ಕಚ್ಚಾ ತೈಲ ತುಂಬಿಸಿಕೊಂಡಿದ್ದ ರಷ್ಯನ್ ಟ್ಯಾಂಕರ್ ಮೂಲತಃ ಚೀನಾದ ರಿಜಾವೊ ಬಂದರಿಗೆ ಹೋಗುತ್ತಿದ್ದರೂ, ದಕ್ಷಿಣ ಏಷ್ಯಾ ಸಮುದ್ರ ಪ್ರದೇಶದಲ್ಲಿ ತನ್ನ ಮಾರ್ಗವನ್ನು ಭಾರತದತ್ತ ಬದಲಿಸಿಕೊಂಡಿದೆ. ಅಮೆರಿಕಾ ಭಾರತಕ್ಕೆ ತಾತ್ಕಾಲಿಕವಾಗಿ ರಷ್ಯನ್ ತೈಲ ಖರೀದಿಯನ್ನು ಹೆಚ್ಚಿಸಲು ಅನುಮತಿ ನೀಡಿದ ನಂತರ ಈ ಬದಲಾವಣೆ ನಡೆದಿದೆ.

ಹಡಗು ಸಾಗಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಸಿನ್ಹಾ, ಈ ಟ್ಯಾಂಕರ್‌ ಹೆಸರು ಅಕ್ವ ಟೈಟನ್. ಇದನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಒಪ್ಪಂದ ಮೂಲಕ ಹಡಗು ಬಾಡಿಗೆ ಪಡೆದುಕೊಂಡಿದೆ. ಇದು ಮಾರ್ಚ್ 21ರಂದು ನ್ಯೂ ಮಂಗಳೂರು ಬಂದರಿಗೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಹಲವು ಹಡಗುಗಳು ಇದೇ ರೀತಿ ದಿಕ್ಕು ಬದಲಿಸಿದ್ದು, ಚೀನಾಕ್ಕೆ ಹೋಗಬೇಕಿದ್ದ ಸರಕುಗಳನ್ನು ಭಾರತ ಪಡೆದುಕೊಳ್ಳುತ್ತಿದೆ. ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆ ನಡುವೆ, ಕಡಿಮೆ ಬೆಲೆಯ ರಷ್ಯನ್ ಕಚ್ಚಾ ತೈಲವನ್ನು ಪಡೆಯಲು ಭಾರತೀಯ ರಿಫೈನರಿಗಳು ಸ್ಪರ್ಧಿಸುತ್ತಿವೆ.

ಅಮೆರಿಕಾ ಅನುಮತಿ ನೀಡಿದ ನಂತರ, ಭಾರತೀಯ ಕಂಪನಿಗಳು ಕೇವಲ ಒಂದು ವಾರದಲ್ಲೇ ಸುಮಾರು 30 ಮಿಲಿಯನ್ ಬ್ಯಾರಲ್ ರಷ್ಯನ್ ತೈಲವನ್ನು ಖರೀದಿಸಲು ಮುಂದಾಗಿವೆ. ಪಾಶ್ಚಾತ್ಯ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾ ತನ್ನ ತೈಲ ರಫ್ತಿಗೆ ಏಷ್ಯಾದ ಬೇಡಿಕೆಗೆ ಹೆಚ್ಚು ಅವಲಂಬಿತವಾಗಿದೆ. ಚೀನಾ ಪ್ರಮುಖ ಖರೀದಿದಾರವಾಗಿದ್ದರೂ, ಸ್ಪಾಟ್ ಮಾರುಕಟ್ಟೆಯಲ್ಲಿ ತುರ್ತು ಖರೀದಿ ಕಡಿಮೆಯಿರುವುದರಿಂದ ಭಾರತ ಅವಕಾಶವನ್ನು ಬಳಸಿಕೊಂಡಿದೆ.

Vortexa Ltd. ಮಾಹಿತಿ ಪ್ರಕಾರ, ಕನಿಷ್ಠ ಏಳು ರಷ್ಯನ್ ಟ್ಯಾಂಕರ್‌ಗಳು ಮಧ್ಯದಲ್ಲೇ ಮಾರ್ಗ ಬದಲಿಸಿ ಚೀನಾದಿಂದ ಭಾರತಕ್ಕೆ ತಿರುಗಿವೆ.

ಇನ್ನೊಂದು ಬೆಳವಣಿಗೆಯಲ್ಲಿ, Zouzou N. ಎಂಬ ಸುಯೆಝ್‌ಮ್ಯಾಕ್ಸ್ ಟ್ಯಾಂಕರ್ ಭಾರತದಲ್ಲಿನ ಸಿಕ್ಕಾ ಬಂದರಿಗೆ ಮಾರ್ಚ್ 25ರ ಸುಮಾರಿಗೆ ತಲುಪುವ ನಿರೀಕ್ಷೆಯಿದೆ. ಇದು ಕಜಾಖಿಸ್ತಾನದ ಸಿಪಿಸಿ ಬ್ಲೆಂಡ್ ಕಚ್ಚಾ ತೈಲವನ್ನು ಸಾಗಿಸುತ್ತಿದೆ. ಈ ಹಡಗು ಮೊದಲು ರಷ್ಯಾದ ಕಪ್ಪು ಸಮುದ್ರ ತೀರದ ನೊವೊರೋಸ್ಸಿಸ್ಕ್‌ನಿಂದ ಹೊರಟು, ರಿಜಾವೊ ಸಮೀಪಕ್ಕೆ ಹೋಗಿ ನಂತರ ಭಾರತದತ್ತ ತನ್ನ ಮಾರ್ಗವನ್ನು ಬದಲಿಸಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ತಾರಕಕ್ಕೇರಿದ ಅಮೆರಿಕಾ-ಇರಾನ್ ಸಂಘರ್ಷ; ಟ್ರಂಪ್ ಬೆದರಿಕೆಗೆ ಮಣಿಯದ ಟೆಹ್ರಾನ್, ವಿದ್ಯುತ್ ಸ್ಥಾವರ ನಾಶಪಡಿಸಿದರೆ ಭೀಕರ ಪ್ರತಿದಾಳಿ ಎಚ್ಚರಿಕೆ

West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

ಕರ್ನಾಟಕ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಧಿಕೃತ ಘೋಷಣೆ, ನಾಳೆ ನಾಮಪತ್ರ ಸಲ್ಲಿಕೆ

ಉಡುಪಿ: 'ಸಮಾಧಾನ ಮಹೋತ್ಸವ' ವಿರೋಧಿಸಿ ಪ್ರತಿಭಟನೆ; ಹಿಂದು ಜಾಗರಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ಸೇರಿ 38 ಮಂದಿ ವಶಕ್ಕೆ

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ, ಆರೋಪಿಗಾಗಿ ಪೊಲೀಸರ ಶೋಧ

SCROLL FOR NEXT