ಚೆನ್ನೈ: ನವದೆಹಲಿಯಲ್ಲಿ ಬಿಜೆಪಿ ನಾಯಕರು ನನ್ನ ಅವಮಾನಿಸಿದರು, ಆದರೆ ಫೆಬ್ರವರಿ 27 ರಂದು ಡಿಎಂಕೆ ಸೇರಿದ ನಂತರ ಸಂತೋಷ ಕಂಡುಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಹೆೇಳಿದ್ದಾರೆ.
ಕಂಬಮ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಪನ್ನೀರ್‌ಸೆಲ್ವಂ, ಕೇಂದ್ರ ಸಚಿವರ ಕಚೇರಿಗೆ ಆಹ್ವಾನಿಸಲಾಗಿತ್ತು ಆದರೆ, ಸಭೆ ನಡೆಸಲು ನಿರಾಕರಿಸಲಾಯಿತು .ಕೆಲವು ತಿಂಗಳ ಹಿಂದೆ ಬಿಜೆಪಿ ನಾಯಕರು ಅವಮಾನಿಸಿದರು ಎಂದು ಹೇಳಿದರು.
ತಾಳ್ಮೆಗೂ ಮಿತಿಗಳಿವೆ. ನಾನು ಅಂತಿಮವಾಗಿ ಡಿಎಂಕೆ ಸೇರಲು ಆಯ್ಕೆ ಮಾಡಿಕೊಂಡೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣದ ನಂತರ ನಾನು ತೀವ್ರ ಕಷ್ಟಗಳು ಮತ್ತು ಅನೇಕ ಸವಾಲುಗಳನ್ನು ಎದುರಿಸಿದೆ.
ಫೆಬ್ರವರಿ 27 ರಂದು ಸಿಎಂ ಎಂ ಕೆ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಸೇರಿದಾಗ ನನ್ನ ಸಂತೋಷ ಅನುಭವಿಸಿದೆ. ಸಿ ಎನ್ ಅಣ್ಣಾದೊರೈ ಸ್ಥಾಪಿಸಿದ ಚಳವಳಿಗೆ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ನಾನು ಅವರಿಗೆ ಋಣಿಯಾಗಿರುತ್ತೇನೆ ಎಂದಿದ್ದಾರೆ.