ಸೌದಿ ದೊರೆ, ಪ್ರಧಾನಿ ಮೋದಿ 
ದೇಶ

ಸೌದಿ ದೊರೆ ಜತೆ ಪ್ರಧಾನಿ ಮೋದಿ ಮಾತುಕತೆ; ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಚರ್ಚೆ

ಪಶ್ಚಿಮ ಏಷ್ಯಾ ಪ್ರದೇಶದ ಇಂಧನ ಮೂಲಸೌಕರ್ಯದ ಮೇಲಿನ ಇರಾನ್ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸೌದಿ ಅರೇಬಿಯಾದ ದೊರೆ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದ್ದು, ಪಶ್ಚಿಮ ಏಷ್ಯಾದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಯುದ್ಧದ ಬಗ್ಗೆ ಚರ್ಚಿಸಿದ್ದಾರೆ.

ಕರೆಯ ಸಮಯದಲ್ಲಿ, ಪಶ್ಚಿಮ ಏಷ್ಯಾ ಪ್ರದೇಶದ ಇಂಧನ ಮೂಲಸೌಕರ್ಯದ ಮೇಲಿನ ಇರಾನ್ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

"ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಚರ್ಚಿಸಿದೆ. ಪ್ರಾದೇಶಿಕ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದು ನಾನು ಪುನರುಚ್ಚರಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಮತ್ತು ಹಡಗು ಮಾರ್ಗಗಳನ್ನು ಮುಕ್ತ ಹಾಗೂ ಸುರಕ್ಷಿತವಾಗಿಡುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆ. ಈ ಕಷ್ಟದ ಸಮಯದಲ್ಲಿ ಭಾರತೀಯ ಸಮುದಾಯದ ಯೋಗಕ್ಷೇಮವನ್ನು ನೋಡಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಿದೆ'' ಎಂದು ಮಾಹಿತಿ ನೀಡಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಇರಾನ್ ಮೇಲೆ ಜಂಟಿ ಸಮರ ನಡೆಸುತ್ತಿವೆ. ಪ್ರತಿಯಾಗಿ ಇರಾನ್ ಸೇನೆಯು ಇಸ್ರೇಲ್ ಮಾತ್ರವಲ್ಲದೆ ಅಮೆರಿಕದ ಜೊತೆ ಸ್ನೇಹದಿಂದ ಇರುವ ನೆರೆಯ ಗಲ್ಫ್ ರಾಷ್ಟ್ರಗಳ ಮೇಲೂ ದಾಳಿ ನಡೆಸುತ್ತಿದೆ. ಈ ಹಂತದಲ್ಲಿ ಸೌದಿ ಅರೇಬಿಯಾದ ಮೇಲೂ ದಾಳಿಯಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!

ಟ್ರಂಪ್ ಜೊತೆಗಿನ ಮೋದಿ ಕರೆಯಲ್ಲಿ ಮಸ್ಕ್ ಸೇರ್ಪಡೆ ಏಕೆ?: ಭಾರತ ಸರ್ಕಾರ ಹೇಳಿದ್ದೇನು?

IPL ಉದ್ಘಾಟನಾ ಪಂದ್ಯದಲ್ಲಿ RCB ಗೆ SRHನ ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ 'ಸಿಂಹಸ್ವಪ್ನರಾಗಲಿದ್ದಾರೆ': ಅಶ್ವಿನ್

Sex Video ಪ್ರಕರಣ: ಸ್ವಯಂ ಘೋಷಿತ 'ದೇವಮಾನವ' ಅಶೋಕ್ ವಿರುದ್ಧ 100ಕ್ಕೂ ಹೆಚ್ಚು ಮಹಿಳೆಯರಿಂದ SITಗೆ ದೂರು

ದಾವಣಗೆರೆ: ಧಮ್ ತೋರಿಸಲು ಹೋಗಿದ್ದ ಪ್ರದೀಪ್ ಈಶ್ವರ್​ಗೆ ಚಪ್ಪಲಿ-ಪೊರಕೆ ತೋರಿಸಿ, ಹುಚ್ಚ...ಹುಚ್ಚ... ಅಂತ ಕೂಗಿದ BJP ಕಾರ್ಯಕರ್ತರು!

SCROLL FOR NEXT