ಸಾಂದರ್ಭಿಕ ಚಿತ್ರ 
ದೇಶ

ಗ್ರಾಹಕರಿಗೆ ಗುಡ್ ನ್ಯೂಸ್: ಹಾರ್ಮುಜ್ ಮೂಲಕ ಗುಜರಾತ್ ತಲುಪಿದ LPG ಹೊತ್ತ ಮತ್ತೊಂದು ಹಡಗು

ಕುವೈತ್‌ನ ಮಿನಾ ಅಲ್ ಅಹ್ಮದಿ ಬಂದರಿನಿಂದ ಲೋಡ್ ಮಾಡಲಾದ ಎಂಟಿ ಜಗ್ ವಸಂತ್ ಶುಕ್ರವಾರ ರಾತ್ರಿ 8.30ಕ್ಕೆ ಆಗಮಿಸಿದೆ ಎಂದು ವದಿನಾರ್ ಬಂದರಿಗೆ ಆಗಮಿಸಿದೆ.

ಜಾಮ್‌ನಗರ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ 47,000 ಮೆಟ್ರಿಕ್ ಟನ್ (MT) ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಹೊತ್ತ ಭಾರತೀಯ ಹಡಗು 'ಜಗ್ ವಸಂತ್' ಗುಜರಾತ್‌ನ ಜಾಮ್‌ನಗರದ ವದಿನಾರ್ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕುವೈತ್‌ನ ಮಿನಾ ಅಲ್ ಅಹ್ಮದಿ ಬಂದರಿನಿಂದ ಲೋಡ್ ಮಾಡಲಾದ ಎಂಟಿ ಜಗ್ ವಸಂತ್ ಶುಕ್ರವಾರ ರಾತ್ರಿ 8.30ಕ್ಕೆ ಆಗಮಿಸಿದೆ ಎಂದು ವದಿನಾರ್ ಬಂದರಿನ ಒಂದು ಭಾಗವಾಗಿರುವ ದೀನ್‌ದಯಾಳ್ ಬಂದರು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಹಡಗು ಲಂಗರು ಹಾಕುವ ಸ್ಥಳದಲ್ಲಿ ಹಡಗಿನಿಂದ ಹಡಗಿಗೆ(STS) ವರ್ಗಾವಣೆಗೆ ಇದು ಸಿದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"230 ಮೀಟರ್ ಉದ್ದದ ಈ ಹಡಗು ಪ್ರಸ್ತುತ 17,600 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮತ್ತೊಂದು ಹಡಗಿನ ಎಂಟಿ ರೋಸ್ ಗ್ಯಾಸ್‌ಗೆ ವರ್ಗಾಯಿಸುತ್ತಿದೆ. ಈ ಪ್ರಕ್ರಿಯೆಯು ಸುಮಾರು 15 ಗಂಟೆಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ" ಎಂದು ಬಂದರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಡಗಿನಲ್ಲಿದ್ದ 14 ಸಿಬ್ಬಂದಿ ಸುರಕ್ಷಿತರಾಗಿದ್ದು, ವೈದ್ಯಕೀಯವಾಗಿ ಸದೃಢರಾಗಿದ್ದಾರೆ ಎಂದು ಕಡಲಾಚೆಯ ಟರ್ಮಿನಲ್ ಅನ್ನು ನಿರ್ವಹಿಸುವ ದೀನದಯಾಳ್ ಬಂದರಿನ ವಕ್ತಾರ ಓಂಪ್ರಕಾಶ್ ದದ್ಲಾನಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR Stage 3: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮೇ 30 ರಿಂದ- ಚುನಾವಣಾ ಆಯೋಗ

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

ಹಾರ್ಮುಜ್ ದಾಟಿದ LPG ಹೊತ್ತ ಭಾರತದ ಎರಡು ಹಡಗು; ದಾಳಿಯಿಂದ ಮುಳುಗಿದ ಮತ್ತೊಂದು ಟ್ಯಾಂಕರ್‌!

ಉತ್ತರ ಪ್ರದೇಶದಲ್ಲಿ ಭಾರಿ ಗಾಳಿ ಸಹಿತ ಮಳೆ; ಬರೊಬ್ಬರಿ 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ವ್ಯಕ್ತಿ, ಕೈಕಾಲು ಮುರಿತ Video Viral

11 ಕೋಟಿ ಸಂಪಾದನೆ, 60 ಕೋಟಿ ಖರ್ಚು: Rahul Gandhi ವಿದೇಶ ಪ್ರವಾಸಗಳಿಗೆ ಹಣ ಕೊಡ್ತೀರೋದು ಯಾರು?: BJP ಪ್ರಶ್ನೆ

SCROLL FOR NEXT