ವಿಜಯ್-ಪ್ರದೀಪ್ ಗುಪ್ತಾ 
ದೇಶ

ವಿಜಯ್ ಪಕ್ಷದ ಗೆಲುವನ್ನು ಊಹಿಸಿದ್ದಕ್ಕಾಗಿ ನಮ್ಮನ್ನು ನೋಡಿ ನಕ್ಕಿದ್ದರು: Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ!

ನಟ-ರಾಜಕಾರಣಿ ವಿಜಯ್ ಅವರ TVK ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಾಗ ಜನರು ತಮ್ಮನ್ನು ನೋಡಿ 'ನಗುತ್ತಿದ್ದರು' ಎಂದು ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ ಹೇಳಿದ್ದಾರೆ.

ನವದೆಹಲಿ: ನಟ-ರಾಜಕಾರಣಿ ವಿಜಯ್ ಅವರ TVK ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಾಗ ಜನರು ತಮ್ಮನ್ನು ನೋಡಿ 'ನಗುತ್ತಿದ್ದರು' ಎಂದು ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ ಹೇಳಿದ್ದಾರೆ. ಎಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ಗಳಲ್ಲಿ ಟಿವಿಕೆ ಗೆಲುವು ಸಾಧಿಸುತ್ತದೆ ಎಂದು ಊಹಿಸಿದ್ದ ಏಕೈಕ ಸಮೀಕ್ಷೆ ಸಂಸ್ಥೆಯಾಗಿದ್ದು, 234 ಸದಸ್ಯರ ವಿಧಾನಸಭೆಯಲ್ಲಿ ಪಕ್ಷ ಸುಮಾರು 98 ರಿಂದ 120 ಸ್ಥಾನಗಳು ಸಿಗುತ್ತವೆ ಎಂದು ಭವಿಷ್ಯ ನುಡಿದಿತ್ತು.

ಏಪ್ರಿಲ್ 23ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತ ಎಣಿಕೆಯ ಹಲವಾರು ಸುತ್ತಿನ ನಂತರ ಟಿವಿಕೆ ಅಥವಾ ತಮಿಳಗ ವೆಟ್ರಿ ಕಳಗಂ 107ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿಯ ಚುನಾವಣಾ ಪ್ರದರ್ಶನಕ್ಕೆ ಸಜ್ಜಾಗಿದೆ. ದೇಶಾದ್ಯಂತ ಯಾರೂ ನಮ್ಮ ಸಮೀಕ್ಷೆಯನ್ನು ನಂಬುತ್ತಿರಲಿಲ್ಲ. ಇದೆಲ್ಲವೂ ಕೇವಲ ಆಕಸ್ಮಿಕ ಎಂದು ಅವರು ಹೇಳಿದರು. ನಾವು ತಮಿಳುನಾಡು ಮತ್ತು ವಿಜಯ್ ಅವರ ಈ ರೀತಿಯ ಗೆಲುವಿನ ಬಗ್ಗೆ ಭವಿಷ್ಯ ನುಡಿದಾಗ ಎಲ್ಲಾ ರಾಜಕೀಯ ಪಂಡಿತರು, ವೀಕ್ಷಕರು ಮತ್ತು ಇತರ ಸಮೀಕ್ಷೆ ಸಂಸ್ಥೆಗಳು ಆಕ್ಸಿಸ್ ಮೈ ಇಂಡಿಯಾವನ್ನು ನೋಡಿ ನಗುತ್ತಿದ್ದವು ಎಂದು ಪ್ರದೀಪ್ ಗುಪ್ತಾ ಹೇಳಿದರು.

ಆಡಳಿತ ಡಿಎಂಕೆ ಮೈತ್ರಿಕೂಟವನ್ನು 'ಕಡಿಮೆ ಅಂದಾಜು ಮಾಡಲಾಯಿತೇ' ಎಂದು ಕೇಳಿದಾಗ, ಗುಪ್ತಾ ಅವರು 92 ರಿಂದ 100 ಸ್ಥಾನಗಳು ಮತ್ತು ಶೇಕಡಾ 35ರಷ್ಟು ಮತ ಪಾಲನ್ನು ಅಂದಾಜಿಸಿದ್ದರು. ಅವರ ಮತ ಪಾಲು ಈಗ ಶೇಕಡಾ 32ರಷ್ಟಿದೆ ಎಂದು ಹೇಳಿದರು. ಟಿವಿಕೆಗೆ ಶೇಕಡಾ 35ರಷ್ಟು ಮತ ಪಾಲು ಪಡೆಯುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದು ಅದು ಈ ಸಮಯದಲ್ಲಿಯೂ ಅಷ್ಟೇ ಇದೆ. ನಾವು ಎಐಎಡಿಎಂಕೆ ಮೈತ್ರಿಕೂಟ (ಮತ ಪಾಲು) ಸುಮಾರು ಶೇಕಡಾ 23ರಷ್ಟಿರುತ್ತದೆ ಎಂದು ಊಹಿಸಿದ್ದೇವೆ. ಅವರು ಪ್ರಸ್ತುತ ಶೇ. 27ರಷ್ಟಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಎರಡನೇ ಸ್ಥಾನ ಪಡೆಯುತ್ತದೆ. ಎಡಪ್ಪಾಡಿ ಕರುಪ್ಪ ಪಳನಿಸ್ವಾಮಿ ಅವರ ಎಐಎಡಿಎಂಕೆ ಮೂರನೇ ಸ್ಥಾನದಲ್ಲಿರುತ್ತದೆ ಎಂದು ಅವರು ಬಹಳ ಖಚಿತ ಎಂದು ಹೇಳಿದರು. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಡಿಎಂಕೆ 61 ಸ್ಥಾನಗಳಲ್ಲಿ ಮುಂದಿದೆ, ಆದರೆ ಎಐಎಡಿಎಂಕೆ 45 ಸ್ಥಾನಗಳಲ್ಲಿ ಮುಂದಿದೆ.

ವಿಜಯ್, ಟಿವಿಕೆ ಉತ್ತಮ ಪ್ರದರ್ಶನ ನೀಡಲು ಕಾರಣ:

ಯುವ ಪೀಳಿಗೆ ವಿಜಯ್ ಅವರ ಹಿಂದೆ ಒಟ್ಟುಗೂಡಿದೆ ಎಂದು ಪ್ರದೀಪ್ ಗುಪ್ತಾ ಹೇಳಿದರು. ವಿಜಯ್ ಮತ್ತು ಟಿವಿಕೆ 18 ರಿಂದ 39 ವರ್ಷದೊಳಗಿನವರಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸುತ್ತಾರೆ ಎಂದು ಅವರು ಭವಿಷ್ಯ ನುಡಿದರು. ಇದು ತಮಿಳುನಾಡಿನ ಮತದಾರರಲ್ಲಿ ಶೇ. 42ರಷ್ಟು ಕೊಡುಗೆ ನೀಡುತ್ತದೆ. ಅವರು 40 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ಸಾಕಷ್ಟು ಉತ್ತಮ ಮತಗಳನ್ನು ಗಳಿಸಲಿದ್ದು ಇದು ಸುಮಾರು ಶೇ. 25 ರಿಂದ 30 ರಷ್ಟಿದೆ ಎಂದು ಅವರು ಹೇಳಿದರು. ಡಿಎಂಕೆ ನಂತರ ಟಿವಿಕೆ ಅತಿ ಹೆಚ್ಚು ಮಹಿಳಾ ಮತಗಳನ್ನು ಪಡೆಯುತ್ತದೆ ಎಂದು ಅವರು ಅಂದಾಜಿಸಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ? ಕೆ.ಸಿ. ವೇಣುಗೋಪಾಲ್ ಹೇಳಿದ್ದೇನು?

ಭದ್ರಕೋಟೆ ಕೊಳತ್ತೂರಿನಲ್ಲಿ MK Stalin ಗೆ ಭಾರಿ ಮುಖಭಂಗ: DMK ಯಿಂದ ಹೊರಬಂದು ಸಿಎಂ ಸೋಲಿಸಿದ TVK ಅಭ್ಯರ್ಥಿ!

ತಮಿಳುನಾಡಿನಲ್ಲಿ ರಜನಿಕಾಂತ್, ಕಮಲ್ ಹಾಸನ್ "ಮಾಡದ್ದನ್ನು, ಮಾಡಿ ತೋರಿಸಿದ ವಿಜಯ್! ಏನೆಲ್ಲಾ ವರ್ಕೌಟ್ ಮಾಡಿದ್ರು ಗೊತ್ತಾ?

ಬಂಗಾಳ ಗೆಲುವಿನೊಂದಿಗೆ NDA ಆಡಳಿತದ ರಾಜ್ಯಗಳ ಸಂಖ್ಯೆ 21ಕ್ಕೆ ಏರಿಕೆ; INDIA ಬಣದ ರಾಜ್ಯಗಳ ಸಂಖ್ಯೆ ಎಷ್ಟು?

Karnataka By-poll & Assembly elections 2026 LIVE updates (KL, TN, AS, WB): ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್ ಗೆಲುವು; ತಮಿಳುನಾಡಿನಲ್ಲಿ ನಟ ವಿಜಯ್ ಮ್ಯಾಜಿಕ್; ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಗೆಲುವು; ಕೇರಳದಲ್ಲಿ ಯುಡಿಎಫ್ ಅಲೆ

SCROLL FOR NEXT