ಕೋಲ್ಕತ್ತಾ: ಭಬಾನಿಪುರವು ಕೋಲ್ಕತ್ತಾ ಮತ್ತು ಅದರಾಚೆಗಿನ ಪ್ರದೇಶಗಳಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ಬಲವಾದ ಸಂಬಂಧ ಹೊಂದಿದೆ. ಅಲ್ಲದೇ ಇದು ಬಂಗಾಳ ರಾಜಕೀಯದಲ್ಲಿ ಆಳವಾಗಿ ಬೇರೂರಿದೆ.
1970 ರ ದಶಕದಲ್ಲಿ ಭಬಾನಿಪುರವು ಬಂಗಾಳಕ್ಕೆ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರಾಯ್ ಅವರನ್ನು ನೀಡಿತು. ಸುಬ್ರತಾ ಮುಖರ್ಜಿ ಮತ್ತು ಶೋಭೋಂದೇಬ್ ಚಟ್ಟೋಪಾಧ್ಯಾಯರಂತಹ ತೃಣಮೂಲ ಕಾಂಗ್ರೆಸ್‌ನ ಪ್ರಮುಖ ನಾಯಕರು ಕೂಡ ಈ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಮೇ 4 ರಂದು ಸುವೇಂದು ಅಧಿಕಾರಿ ಅವರು ತೃಣಮೂಲ ಮುಖ್ಯಸ್ಥೆಯನ್ನು 15,105 ಮತಗಳ ಅಂತರದಿಂದ ಸೋಲಿಸಿದ ನಂತರ ಇದು ಅವರಿಗೆ ಅತಿದೊಡ್ಡ ನಿರಾಸೆಯನ್ನುಂಟು ಮಾಡಿತು. ಭಬಾನಿಪುರದಲ್ಲಿ ಮಮತಾ ಬ್ಯಾನರ್ಜಿ ಸೋಲಲು ಇಲ್ಲಿವೆ ಪ್ರಮುಖ ಆರು ಕಾರಣಗಳು:
1. ಆಡಳಿತ ವಿರೋಧಿ ಅಲೆ: ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ ಸರ್ಕಾರ ತೀವ್ರ ಆಡಳಿತ ವಿರೋಧಿ ಅಲೆಯನ್ನು ಎದುರಿಸಿದಾಗ ಸುರಕ್ಷಿತ ಸ್ಥಾನಗಳು ಸಹ ಸುರಕ್ಷಿತವಾಗಿರುವುದಿಲ್ಲ. 2021 ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ "ಸುರಕ್ಷಿತ ಸ್ಥಾನ" ಅಂದುಕೊಂಡು ಮಮತಾ ಬ್ಯಾನರ್ಜಿ ಗೆ ಸ್ಥಳಾವಕಾಶ ಕಲ್ಪಿಸಲು ಅವರ ಆಪ್ತರಾದ ಶೋಭೋಂದೇಬ್ ಚಟ್ಟೋಪಾಧ್ಯಾಯ ಅವರನ್ನು ಸ್ಥಳಾಂತರಿಸಿ ಇಲ್ಲಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
2. ಸುವೇಂದು ಅಧಿಕಾರಿ ಅಂಶ: ಬಂಗಾಳ ಬಿಜೆಪಿ ಮಮತಾ ಬ್ಯಾನರ್ಜಿ ವಿರುದ್ಧ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇರಬಹುದು, ಆದರೆ ಗೃಹ ಸಚಿವ ಅಮಿತ್ ಶಾ, ಸುವೇಂದು ಅಧಿಕಾರಿಯನ್ನು ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿಸಿದರು. ಅವರು ಈಗಾಗಲೇ ನಂದಿಗ್ರಾಮ್‌ನಿಂದ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದರು. ಇದು ಬಿಜೆಪಿಯಲ್ಲಿ ಯಾರಾದರೂ ಮಮತಾ ಸೋಲಿಸುವವರು ಇದ್ದರೇ ಅದು ಸುವೇಂದು ಅಧಿಕಾರಿ ಮಾತ್ರ ಅಂತಾ ಹೇಳುವಂತೆ ಮಾಡಿತು.
3. ಮತ ಹಂಚಿಕೆ ಕುಸಿತ ಮತ್ತು ಸರಿಯಾದ ಸಂಘಟನೆ ಮಾಡದಿರುವುದು: 2021 ರಲ್ಲಿ ಭಬಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರ ಮತ ಹಂಚಿಕೆಯು ಶೇ. 72 ರಷ್ಟಿತ್ತು. ಆದರೆ ಅದು 2026ರಲ್ಲಿ ಶೇ. 42 ಕ್ಕೆ ಗಮನಾರ್ಹವಾಗಿ ಕುಸಿಯಿತು. ಇದು ಮತದಾರರ ಬೆಂಬಲ ಬಿಜೆಪಿಗೆ ಬದಲಾಗಿದೆ ಎಂಬುದನ್ನು ಸೂಚಿಸಿದೆ. ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್‌ರೂಮ್ ಮತ್ತು ಬೀದಿ ಬದಿ ಪ್ರಚಾರಗಳಲ್ಲಿ ತೀವ್ರ ಮುಖಾಮುಖಿಯೊಂದಿಗೆ, ಮಮತಾ ಬ್ಯಾನರ್ಜಿ ಬಂಗಾಳದಾದ್ಯಂತ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾಗ, ಭಬಾನಿಪುರದಲ್ಲಿ ಬಿಜೆಪಿ ನೆಲದ ಮೇಲೆ ಉತ್ತಮ ಹಿಡಿತ ಸಾಧಿಸಿತು. 2024 ರ ಲೋಕಸಭಾ ಫಲಿತಾಂಶದಲ್ಲಿ ಭಬಾನಿಪುರ ವ್ಯಾಪ್ತಿಯ ಒಟ್ಟು ಎಂಟು ವಾರ್ಡ್‌ಗಳಲ್ಲಿ,ಐದು ವಾರ್ಡ್‌ಗಳಲ್ಲಿ ಬಿಜೆಪಿಗೆ ಮುನ್ನಡೆ ನೀಡಿತು. ತೃಣಮೂಲ ಕಾಂಗ್ರೆಸ್ ಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಹೊಂದಿತ್ತು.
4. ಪ್ರಚಾರದತ್ತ ಬಿಜೆಪಿ ಗಮನ: ಬಿಜೆಪಿ ಈ ಚುನಾವಣೆಯನ್ನು ಟಿಎಂಸಿ ಭಯದ ವಿರುದ್ಧದ ಚುನಾವಣೆ ಎಂದು ಬಿಂಬಿಸಿತು. ಆ ಸಂದೇಶ ಕೂಡಾ ಕೆಲಸ ಮಾಡಿದೆ ಎಂದು ತೋರಿಸುತ್ತದೆ. ಬಿಜೆಪಿ ಮಮತಾ ಬ್ಯಾನರ್ಜಿ ವಿರುದ್ಧ ವೈಯಕ್ತಿಕ ದಾಳಿಯಲ್ಲಿ ತೊಡಗಲಿಲ್ಲ, ಅವರು ಪರ್ಯಾಯ ರೀತಿಯಲ್ಲಿ ಪ್ರಚಾರ ಮಾಡಿದರು. ಬಂಗಾಳಕ್ಕಾಗಿ ತಮ್ಮ ಪ್ಲಾನ್ ಗಳನ್ನು ಹೇಳಿಕೊಂಡರು. ಮತ್ತೊಂದೆಡೆ, ಮತದಾರರು ತೃಣಮೂಲ ಕಾಂಗ್ರೆಸ್‌ನಿಂದ ಬದಲಾವಣೆ, ಭ್ರಷ್ಟಾಚಾರ ಮತ್ತು ಬೆದರಿಕೆ-ಸಂಸ್ಕೃತಿಯ ಅಗತ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಪಕ್ಷದ ಕೆಲ ನಾಯಕರು ಹೆಸರನ್ನು ದುರುಪಯೋಗಪಡಿಸಿಕೊಂಡ ಕಾರಣ ತೃಣಮೂಲ ಕಾಂಗ್ರೆಸ್ ವಿರುದ್ಧ ಸಾರ್ವಜನಿಕರ ಕೋಪ ಹೆಚ್ಚಾಯಿತು.
5. ನಕಲಿ ಮತದಾರರನ್ನು" ತೆಗೆದುಹಾಕಲು ಪಶ್ಚಿಮ ಬಂಗಾಳದಾದ್ಯಂತ SIR ಅಂಶ: ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ನಡೆಸಲಾಯಿತು. ಹಿಂದೆ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಪ್ರತಿಯೊಂದು ಸರ್ಕಾರಕ್ಕೂ ಸಹಾಯ ಮಾಡಿದ ನಕಲಿ ಮತದಾರರನ್ನು ತೆಗೆದುಹಾಕಲಾಯಿತು, ಭಬಾನಿಪುರದಿಂದ ದೊಡ್ಡ ಪ್ರಮಾಣದ ಮತದಾರರನ್ನು ಅಳಿಸಿಹಾಕಿದ್ದು ಸ್ಪರ್ಧೆಯನ್ನು ಮತ್ತಷ್ಟು ಬಿಗಿಗೊಳಿಸಿತು.
6. RG ಕರ್ ಆಸ್ಪತ್ರೆಯ ಅತ್ಯಾಚಾರ ಕೇಸ್ RG ಕರ್ ಆಸ್ಪತ್ರೆಯಲ್ಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ಬಂಗಾಳದಲ್ಲಿ ನಡೆದ ಮೊದಲ ಚುನಾವಣೆ ಇದಾಗಿದೆ. ತೃಣಮೂಲ ಕಾಂಗ್ರೆಸ್ ವಿರುದ್ಧ ಸಂತ್ರಸ್ತೆ ತಾಯಿ ರತ್ನಾ ದೇಬ್ನಾಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿತು. ಇದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಭೀಕರ ಅಪರಾಧದತ್ತ ಮತ್ತೆ ಗಮನ ಸೆಳೆಯಿತು. ಇದು ವೈದ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋಲ್ಕತ್ತಾದಲ್ಲಿ ಮುಷ್ಕರ ನಡೆಸುವವರೆಗೂ ತಮ್ಮ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಹಾಲಿ ಮುಖ್ಯಮಂತ್ರಿಯ ವಿರುದ್ಧವೂ ಕೆಲಸ ಮಾಡಿದೆ.