ಸುವೇಂದು ಅಧಿಕಾರಿ-ಮಮತಾ ಬ್ಯಾನರ್ಜಿ online desk
ದೇಶ

ಸುವೇಂದು ಪ್ರಮಾಣವಚನ ಬೆನ್ನಲ್ಲೇ CM ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ X, FB ಬಯೋ ಅಪ್‌ಡೇಟ್ ಮಾಡಿದ ಮಮತಾ!

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಅವರು X, FBಯಲ್ಲಿ ತಮ್ಮ ಬಯೋ ಅಪ್‌ಡೇಟ್ ಮಾಡಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ನವೀಕರಿಸಿದ್ದಾರೆ ಮತ್ತು ತಮ್ಮನ್ನು "ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ(15, 16 ಮತ್ತು 17ನೇ ವಿಧಾನಸಭೆ)" ಎಂದು ಬರೆದುಕೊಂಡಿದ್ದಾರೆ.

18ನೇ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ನಂತರ ಶನಿವಾರ ಕೇಸರಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಮತಾ ಬ್ಯಾನರ್ಜಿ ಅವರು X, FBಯಲ್ಲಿ ತಮ್ಮ ಬಯೋ ಅಪ್‌ಡೇಟ್ ಮಾಡಿದ್ದಾರೆ.

ರಾಜ್ಯದಲ್ಲಿ 34 ವರ್ಷಗಳ ಎಡರಂಗ ಆಡಳಿತವನ್ನು ಕೊನೆಗೊಳಿಸಿ, 2011 ರಲ್ಲಿ ಮೊದಲ ಬಾರಿಗೆ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದ ಮಮತಾ ಬ್ಯಾನರ್ಜಿ, ಸತತ ಮೂರು ಅವಧಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.

ಈ ಬಾರಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಸುಮಾರು 100 ಸ್ಥಾನಗಳಲ್ಲಿನ ವ್ಯತ್ಯಾಸ ಇದ್ದು, ಅಕ್ರಮವಾಗಿ ತಮ್ಮ ಪಕ್ಷವನ್ನು ಸೋಲಿಸಲಾಗಿದೆ ಎಂದು ಆರೋಪಿಸಿದ್ದರು.

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ ಅವಧಿ ಮುಗಿದ ಕಾರಣ ರಾಜ್ಯಪಾಲರು 17ನೇ ವಿಧಾನಸಭೆಯನ್ನು ವಿಸರ್ಜಿಸಿದ್ದರು.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

120 ಶಾಸಕರ ಬಲ ಸಿಗುತ್ತಿದ್ದಂತೆ ಲೋಕಭವನದತ್ತು ವಿಜಯ್ ದೌಡು: ಸರ್ಕಾರ ರಚನೆಗೆ TVK ಹಕ್ಕು ಮಂಡನೆ!

ವಿಜಯ್ -VCK ಡೀಲ್ ಅಂತಿಮ! EPS ನಿಗೂಢ ಪೋಸ್ಟ್ ಅರ್ಥವೇನು?

ತುಮಕೂರು: ಕಾರು - ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

'ಪ್ರಮಾಣವಚನಕ್ಕೂ ಮುನ್ನ ದಳಪತಿ ವಿಜಯ್-ತ್ರಿಶಾ ಮದುವೆಯಾಗಬೇಕು': ರಾಖಿ ಸಾವಂತ್ ಶಾಕಿಂಗ್ ಹೇಳಿಕೆ

ತಮಿಳುನಾಡು ರಾಜಕೀಯ ಹೈಡ್ರಾಮ ಕೊನೆಗೂ ಅಂತ್ಯ: ನಟ ವಿಜಯ್ ಗೆ ಸಿಕ್ತು ಮ್ಯಾಜಿಕ್ ನಂಬರ್; VCK, IUML ಬೆಂಬಲ!

SCROLL FOR NEXT