ತಮಿಳುನಾಡು ಮುಖ್ಯಮಂತ್ರಿ ವಿಜಯ್ 
ದೇಶ

ತಿರುಚಿರಾಪಳ್ಳಿ ವಿಧಾನಸಭೆ ಕ್ಷೇತ್ರಕ್ಕೆ TVK ಮುಖ್ಯಸ್ಥ ವಿಜಯ್ ರಾಜೀನಾಮೆ!

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದರು.

ಚೆನ್ನೈ: ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಪೆರಂಬೂರು ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ ಎಂದು ರಾಜ್ಯ ವಿಧಾನಸಭಾ ಸಚಿವಾಲಯ ತಿಳಿಸಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ವಿಜಯ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿ, ಸಚಿವರಾದ ಕೆಎ ಸೆಂಗೋಟ್ಟೈಯನ್ ಮತ್ತು ಪಿ ವೆಂಕಟರಮಣ್ ಮೂಲಕ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಕೆ ಶ್ರೀನಿವಾಸನ್ ಅವರಿಗೆ ಪತ್ರವನ್ನು ಕಳುಹಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದರು.

234 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ 120 ಶಾಸಕರ ಬೆಂಬಲ ಪಡೆದ ವಿಜಯ್ ಜೊತೆಗೆ, ರಾಜ್ಯಪಾಲ ಅರ್ಲೇಕರ್ ಅವರು 'ಬಸ್ಸಿ' ಎನ್ ಆನಂದ್, ಆಧವ್ ಅರ್ಜುನ, ಕೆಎ ಸೆಂಗೋಟ್ಟೈಯನ್, ಕೆಜಿ ಅರುಣ್‌ರಾಜ್, ಪಿ ವೆಂಕಟರಮಣನ್, ಸಿಟಿಆರ್ ನಿರ್ಮಲ್ ಕುಮಾರ್, ಎ ರಾಜ್‌ಮೋಹನ್, ಕೀರ್ತನಾ ಮತ್ತು ಕೆಟಿ ಪ್ರಭು ಅವರನ್ನೊಳಗೊಂಡ ಹೊಸ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಿದರು.

51 ವರ್ಷದ ವಿಜಯ್ ಜೊತೆಗೆ ವೇದಿಕೆ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮೈತ್ರಿಕೂಟದ ಪಾಲುದಾರರಾದ ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ನಾಯಕರು ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾದಲ್ಲಿ ಭೀಕರ ದುರಂತ: ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ಸಾವು, 20 ಮಂದಿ ರಕ್ಷಣೆ; TMC ಅವಧಿಯ ಯೋಜನೆಗಳಿಗೆ CM ಸುವೇಂದು ಬ್ರೇಕ್..!

ಇರಾನ್ ಸಂಘರ್ಷಕ್ಕೆ $70 ಬಿಲಿಯನ್ ತುರ್ತು ನಿಧಿ ಕೋರಿದ ಅಮೆರಿಕಾ: ಟ್ರಂಪ್ ವಿರುದ್ಧ ಸಿಡಿದೆದ್ದ Republican senator, ಸ್ವಪಕ್ಷದಲ್ಲೇ ಭಿನ್ನಮತ ಸ್ಫೋಟ..!

ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದ್ರೆ ಕೇರ್ ಮಾಡಬೇಡಿ: ಲಾಬಿಗಳಿಗೆ ಮಣಿಯಬೇಡಿ- ಡಿಕೆಶಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್

Passport ಪೌರತ್ವದ ಪ್ರಮಾಣಪತ್ರವಲ್ಲ, Travel document ಅಷ್ಟೇ: MEA ಸ್ಪಷ್ಟನೆ, ಹೊಸ ಚರ್ಚೆಗೆ ನಾಂದಿ..!

ಭೂಕಂಪದ ರೌದ್ರನರ್ತನಕ್ಕೆ Venezuela ತತ್ತರ; Caracasನಲ್ಲಿ ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..!