ಸಾಂದರ್ಭಿಕ ಚಿತ್ರ 
ದೇಶ

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

ಭಾರತವು 60 ದಿನಗಳಿಗೆ ಬೇಕಾಗಷ್ಟು ಕಚ್ಚಾ ತೈಲ, 60 ದಿನಗಳಿಗೆ ಬೇಕಾಗುವಷ್ಟು ನೈಸರ್ಗಿಕ ಅನಿಲ ಮತ್ತು 45 ದಿನಗಳಿಗೆ ಬೇಕಾಗುವಷ್ಟು LPG ರೋಲಿಂಗ್ ಸ್ಟಾಕ್ ಅನ್ನು ಹೊಂದಿದೆ ಎಂದು IGoM ತಿಳಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಜನರು ಕಡಿಮೆ ಇಂಧನ ಬಳಕೆ ಮಾಡಬೇಕು, ಎಲೆಕ್ಟ್ರಿಕ್ ವಾಹನಗಳ ಬಳಕೆ ಜಾಸ್ತಿ ಮಾಡಬೇಕು ಎಂದು ಹೇಳಿದ ಒಂದು ದಿನದ ನಂತರ, ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಂಬಂದಿಸಿದ ಅನೌಪಚಾರಿಕ ಸಚಿವರ ತಂಡ(IGoM), ದೇಶದಲ್ಲಿ ಯಾವುದೇ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ ಎಂದು ಹೇಳಿದೆ.

ಭಾರತವು 60 ದಿನಗಳಿಗೆ ಬೇಕಾಗಷ್ಟು ಕಚ್ಚಾ ತೈಲ, 60 ದಿನಗಳಿಗೆ ಬೇಕಾಗುವಷ್ಟು ನೈಸರ್ಗಿಕ ಅನಿಲ ಮತ್ತು 45 ದಿನಗಳಿಗೆ ಬೇಕಾಗುವಷ್ಟು LPG ರೋಲಿಂಗ್ ಸ್ಟಾಕ್ ಅನ್ನು ಹೊಂದಿದೆ ಎಂದು IGoM ತಿಳಿಸಿದೆ.

ದೇಶದ ವಿದೇಶಿ ವಿನಿಮಯ ಸಂಗ್ರಹವು ಆರಾಮದಾಯಕವಾಗಿ 703 ಬಿಲಿಯನ್‌ ಅಮೆರಿಕನ್ ಡಾಲರ್ ಇದ್ದು, ಇದು ಆರ್ಥಿಕ ಸ್ಥಿರತೆಗೆ ಬಲ ನೀಡುತ್ತದೆ ಎಂದು ಹೇಳಿದೆ.

ಆದಾಗ್ಯೂ, ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಮುಂದುವರಿದಿರುವುದರಿಂದ ದೇಶವು ಭಾರಿ ವೆಚ್ಚವನ್ನು ಭರಿಸುತ್ತಿದೆ ಎಂದು ಸಚಿವರ ತಂಡ ಎಚ್ಚರಿಸಿದೆ.

ಸರ್ಕಾರದ ಪ್ರಕಾರ, ಪಶ್ಚಿಮ ಏಷ್ಯಾ ಸಂಘರ್ಷದ ನಂತರ ಭಾರತದ ತೈಲ ಮಾರುಕಟ್ಟೆ ಕಂಪನಿಗಳು(OMCಗಳು) ದಿನಕ್ಕೆ ಸುಮಾರು 1,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. 2026ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಕಡಿಮೆ ಚೇತರಿಕೆ ಸುಮಾರು 2 ಲಕ್ಷ ಕೋಟಿ ರೂ. ಮಟ್ಟ ತಲುಪಿದೆ. ಈ ನಷ್ಟವನ್ನು ಸರ್ಕಾರ ಮತ್ತು ಕಂಪನಿಗಳು ಹೊತ್ತುಕೊಳ್ಳುವ ಮೂಲಕ ಗ್ರಾಹಕರ ಮೇಲೆ ಬೆಲೆ ಏರಿಕೆಯ ಭಾರ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ.

ಸಂಘರ್ಷ ಆರಂಭವಾಗಿ ಸುಮಾರು 70 ದಿನಗಳು ಕಳೆದರೂ, ಅನೇಕ ದೇಶಗಳಲ್ಲಿ ಇಂಧನ ಬೆಲೆಗಳು ಶೇಕಡಾ 30ರಿಂದ 70ರವರೆಗೆ ಏರಿಕೆಯಾದರೆ, ಭಾರತದಲ್ಲಿ ಬೆಲೆಗಳನ್ನು ಬಹುಮಟ್ಟಿಗೆ ಸ್ಥಿರವಾಗಿರಿಸಲು ಸಾಧ್ಯವಾಗಿದೆ ಎಂದಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ದೇಶವಾಗಿದ್ದು, ನಾಲ್ಕನೇ ಅತಿದೊಡ್ಡ ಪೆಟ್ರೋಲಿಯಂ ಉತ್ಪನ್ನ ರಫ್ತುದಾರವಾಗಿದೆ. 150ಕ್ಕೂ ಹೆಚ್ಚು ದೇಶಗಳಿಗೆ ಇಂಧನ ರಫ್ತು ಮಾಡುತ್ತಿರುವ ಭಾರತ, ತನ್ನ ದೇಶೀಯ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದೆ ಎಂದು ಸಚಿವರು ತಂಡ ಹೇಳಿದೆ.

ಪಶ್ಚಿಮ ಏಷ್ಯಾ ಯುದ್ಧಗ್ರಸ್ತವಾಗಿರುವ ಹಿನ್ನೆಲೆಯಲ್ಲಿ ತೈಲ ಕೊರತೆ ಉಂಟಾಗುವುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ "ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ; ವಿದೇಶಿ ಪ್ರಯಾಣವನ್ನು ಮುಂದೂಡಿ; ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಿ." ಎಂದು ಮೋದಿ ನಿನ್ನೆ ಕರೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: B ಖಾತಾದಿಂದ A ಖಾತಾ ಪರಿವರ್ತನೆಗೆ ಗೈಡ್‌ಲೈನ್ಸ್‌ ವ್ಯಾಲ್ಯೂ ಶೇ. 2ಕ್ಕೆ ಇಳಿಕೆ!

Video: ಕೇರಳದಲ್ಲಿ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್‌ ವಾರ್; ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಆಕ್ರೋಶ!

ತಮಿಳುನಾಡು CM ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನಟಿ ತ್ರಿಶಾಗೆ ವಿಜಯ್‌ ಬಿಗ್‌ ಗಿಫ್ಟ್‌!

ಮಣಿಪುರ: ಹೊಂಚು ಹಾಕಿ ಉಗ್ರರ ದಾಳಿ; ಕುಕಿ ಚರ್ಚ್‌ನ ಮೂವರು ನಾಯಕರು ಬಲಿ, ನಾಲ್ವರಿಗೆ ಗಾಯ

ಈ 6 ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಿದ ಏರ್ ಇಂಡಿಯಾ; ಕಾರಣ ಏನು ಗೊತ್ತಾ?

SCROLL FOR NEXT