ಸುಧಾಕರನ್ 
ದೇಶ

ಕೇರಳ ಸಿಎಂ ಬಿಕ್ಕಟ್ಟು: ವರಿಷ್ಠರೊಂದಿಗೆ ಮಾತುಕತೆಗಾಗಿ ದೆಹಲಿಗೆ ತೆರಳಿದ ಕೆ. ಸುಧಾಕರನ್; ಇಂದು ಅಂತಿಮ ನಿರ್ಧಾರ ಸಾಧ್ಯತೆ

ಕೇರಳ ಸಿಎಂ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಕೆ. ಸುಧಾಕರನ್ ಜೊತೆಗೆ, ಹಿರಿಯ ಕಾಂಗ್ರೆಸ್ ನಾಯಕರ ನಿಯೋಗ ವರಿಷ್ಠರೊಂದಿಗೆ ಮಾತುಕತೆಗಾಗಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದೆ.

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಬಿಕ್ಕಟ್ಟು ಮುಂದುವರೆದಿರುವಂತೆಯೇ, ಪಕ್ಷದ ವರಿಷ್ಠರೊಂದಿಗೆ ಉನ್ನತ ಮಟ್ಟದ ಚರ್ಚೆಗಾಗಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಾಜಿ ಅಧ್ಯಕ್ಷ ಕೆ. ಸುಧಾಕರನ್ ದೆಹಲಿಗೆ ತೆರಳಿದ್ದಾರೆ.

ಮುಖ್ಯಮಂತ್ರಿ ಆಯ್ಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರನ್, 'ಸಂತೋಷದಿಂದ ವಾಪಸ್ ಆಗುತ್ತೇನೆ ಎಂದಷ್ಟೇ ಹೇಳಿದರು. ಮುಖ್ಯಮಂತ್ರಿ ಆಯ್ಕೆ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಕೇರಳ ಸಿಎಂ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಕೆ. ಸುಧಾಕರನ್ ಜೊತೆಗೆ, ಹಿರಿಯ ಕಾಂಗ್ರೆಸ್ ನಾಯಕರ ನಿಯೋಗ ವರಿಷ್ಠರೊಂದಿಗೆ ಮಾತುಕತೆಗಾಗಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿದ್ದಾರೆ. ಹೊಸ ಪೀಳಿಗೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ಬರುತ್ತಿದ್ದಾರೆ. ಹೀಗಾಗಿ ವಿವಾದಗಳು, ಚರ್ಚೆಗಳು ನಡೆಯುವುದು ಸಹಜ ಎಂದು ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ವಾತಾವರಣದ ಬಗ್ಗೆ ಕೇಂದ್ರ ನಾಯಕತ್ವಕ್ಕೆ ವಿವರಿಸಲಾಗುವುದು ಎಂದು ವಿ ಎಂ ಸುಧೀರನ್ ಹೇಳಿದರೆ, ಎಐಸಿಸಿ ಜೊತೆಗಿನ ಮಾತುಕತೆಗಾಗಿ ದೆಹಲಿಯಲ್ಲಿ ಇರುವುದಾಗಿ ಎಂ ಎಂ ಹಸನ್ ತಿಳಿಸಿದ್ದಾರೆ.

ಈ ಮಧ್ಯೆ ಕಜಕೂಟಂನಿಂದ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಶಾಸಕ ವಿ ಮುರಳೀಧರನ್, ಕೇರಳದಲ್ಲಿ ಸರ್ಕಾರ ರಚನೆ ವಿಳಂಬದ ಬಗ್ಗೆ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಪಕ್ಷವು ಸಾರ್ವಜನಿಕ ಕಲ್ಯಾಣಕ್ಕಿಂತ ಅಧಿಕಾರದ ಮೇಲೆ ಹೆಚ್ಚು ಗಮನಹರಿಸಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೆಶೆಲ್ಸ್‌ನಿಂದ ಪ್ರಧಾನಿ ಮೋದಿಗೆ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಗೌರವ: ಹಿಂದೂ ಮಹಾಸಾಗರ ಅವಕಾಶಗಳ ಆಗರ

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ರಾತ್ರೋರಾತ್ರಿ ವಾಯುದಾಳಿ: 35 ಸಾವು,100 ಕ್ಕೂ ಹೆಚ್ಚು ಮಂದಿಗೆ ಗಾಯ!

ರಾಮ ಮಂದಿರ ದೇಣಿಗೆ ದುರುಪಯೋಗ ಕೇಸ್: ಆರೋಪಿಗಳ ಪರ ವಾದಿಸಲು ವಕೀಲರ ಹಿಂದೇಟು; ಬುಲ್ಡೋಜರ್ ಕ್ರಮಕ್ಕೆ ಆಗ್ರಹ!

India vs Ireland 2nd t20: ಭಾರತಕ್ಕೆ ಸೋಲು; 1 ರನ್ ನಿಂದ ಗೆದ್ದ ಐರ್ಲೆಂಡ್ ಗೆ ಸರಣಿ!

ಲೋಹದ ಹಕ್ಕಿಗಳ ಪ್ರತ್ಯೇಕ ಅಪಘಾತ: ಸೌದಿ 14 ಹಾಗೂ ಫ್ರಾನ್ಸ್‌ನಲ್ಲಿ 11 ಸೇರಿ 25 ಮಂದಿ ದುರ್ಮರಣ